ಅಹಮದಾಬಾದ್(ಗುಜರಾತ್): ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈಗಾಗಲೇ ಗುಜರಾತ್ನ ಅಹಮದಾಬಾದ್‌ಗೆ ಬಂದಿಳಿದಿದ್ದು, ಅದ್ಧೂರಿ ಸ್ವಾಗತ ನೀಡಲಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ರಾಜ್ಯಪಾಲ ಆಚಾರ್ಯ ದೇವವ್ರತ್ ಸೇರಿದಂತೆ ಅನೇಕರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಅಹಮದಾಬಾದ್ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿರುವ ಬ್ರಿಟಿಷ್ ಪ್ರಧಾನಿ, ಚರಕ ತಿರುಗಿಸಿ ನೂಲು ತೆಗೆಯುವ ಪ್ರಯತ್ನ ಮಾಡಿ ಗಮನ ಸೆಳೆದರು. ಈ ವೇಳೆ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿ ತಮ್ಮ ಅಭಿಪ್ರಾಯ ಬರೆದಿದ್ದಾರೆ. 'ಅಸಾಧಾರಣ ವ್ಯಕ್ತಿಯ ಆಶ್ರಮಕ್ಕೆ ಬಂದಿರುವುದು ಬಹಳ ಖುಷಿಯ ವಿಚಾರ' ಎಂದಿದ್ದಾರೆ.
-
#WATCH | Prime Minister of the United Kingdom Boris Johnson visits Sabarmati Ashram, tries his hands on 'charkha' pic.twitter.com/6RTCpyce3k
— ANI (@ANI) April 21, 2022 " class="align-text-top noRightClick twitterSection" data="
">#WATCH | Prime Minister of the United Kingdom Boris Johnson visits Sabarmati Ashram, tries his hands on 'charkha' pic.twitter.com/6RTCpyce3k
— ANI (@ANI) April 21, 2022#WATCH | Prime Minister of the United Kingdom Boris Johnson visits Sabarmati Ashram, tries his hands on 'charkha' pic.twitter.com/6RTCpyce3k
— ANI (@ANI) April 21, 2022
ಇದಾದ ಬಳಿಕ ವಡೋದರಾದ ಬೃಹತ್ ಜೆಸಿಬಿ ಯಂತ್ರ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ್ದು, ಹೊಸ ಫ್ಲ್ಯಾಟ್ಗೆ ಚಾಲನೆ ನೀಡಿದರು. ಇದರ ಬೆನ್ನಲ್ಲೇ ಕೈಗಾರಿಕೋದ್ಯಮಿ ಗೌತಮ್ ಅದಾನಿ ಜೊತೆ ಮಹತ್ವದ ಮಾತುಕತೆ ನಡೆಸಿದರು.
-
Honoured to host @BorisJohnson, the first UK PM to visit Gujarat, at Adani HQ. Delighted to support climate & sustainability agenda with focus on renewables, green H2 & new energy. Will also work with UK companies to co-create defence & aerospace technologies. #AtmanirbharBharat pic.twitter.com/IzoRpIV6ns
— Gautam Adani (@gautam_adani) April 21, 2022 " class="align-text-top noRightClick twitterSection" data="
">Honoured to host @BorisJohnson, the first UK PM to visit Gujarat, at Adani HQ. Delighted to support climate & sustainability agenda with focus on renewables, green H2 & new energy. Will also work with UK companies to co-create defence & aerospace technologies. #AtmanirbharBharat pic.twitter.com/IzoRpIV6ns
— Gautam Adani (@gautam_adani) April 21, 2022Honoured to host @BorisJohnson, the first UK PM to visit Gujarat, at Adani HQ. Delighted to support climate & sustainability agenda with focus on renewables, green H2 & new energy. Will also work with UK companies to co-create defence & aerospace technologies. #AtmanirbharBharat pic.twitter.com/IzoRpIV6ns
— Gautam Adani (@gautam_adani) April 21, 2022
ಗುಜರಾತ್ಗೆ ಭೇಟಿ ನೀಡಿರುವ ಬ್ರಿಟನ್ನ ಮೊದಲ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಹೊರಹೊಮ್ಮಿದ್ದು, ನಾಳೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದಗಳೇರ್ಪಡುವ ಸಾಧ್ಯತೆ ಇದೆ. ಜೊತೆಗೆ ರಷ್ಯಾ-ಉಕ್ರೇನ್ ನಡುವಿನ ಯುದ್ಧದ ವಿಚಾರವಾಗಿಯೂ ಭಾರತ ತಟಸ್ಥ ನೀತಿ ಅನುಸರಿಸುತ್ತಿರುವ ಬಗ್ಗೆಯೂ ಚರ್ಚೆ ನಡೆಯಬಹುದು.