ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಾಳೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ, ಮರಾಠಾ ಮೀಸಲಾತಿ ಕುರಿತು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂವಿಧಾನದಲ್ಲಿ 102ನೇ ತಿದ್ದುಪಡಿಯ ನಂತರ, ರಾಜ್ಯಗಳು 50 ಪ್ರತಿಶತಕ್ಕಿಂತ ಹೆಚ್ಚಿನ ಮೀಸಲಾತಿ ನೀಡುವ ಹಕ್ಕನ್ನು ಕಳೆದುಕೊಂಡಿವೆ ಎಂದು ಮಹಾರಾಷ್ಟ್ರ ಸಿಎಂ ಮತ್ತು ಮರಾಠಾ ಮೀಸಲಾತಿ ಉಪಸಮಿತಿ ಹೇಳಿದೆ.
ಈ ಹಿಂದೆ ಉದ್ಧವ್ ಠಾಕ್ರೆ ಅವರು ಮರಾಠಾ ಮೀಸಲಾತಿಗಾಗಿ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದರು. ಮರಾಠಾ ಮೀಸಲಾತಿ ಕುರಿತು ಪರಿಶೀಲನೆ ನಡೆಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಹಿಂದೆ ಸಿಎಂ ಮತ್ತು ಮರಾಠಾ ಮೀಸಲಾತಿ ಉಪ ಸಮಿತಿಯ ಸದಸ್ಯರು ರಾಜ್ಯಪಾಲ ಭಗತ್ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿ ಈ ಕುರಿತು ಪತ್ರವೊಂದನ್ನು ಕೂಡಾ ಹಸ್ತಾಂತರಿಸಿದರು. ಪತ್ರವನ್ನು ರಾಷ್ಟ್ರಪತಿಗೆ ನೀಡುವಂತೆ ಮನವಿ ಮಾಡಿದ್ದರು.