ಜೈಪುರ(ರಾಜಸ್ಥಾನ): ಉದಯ್ಪುರ ಟೈಲರ್ ಕನ್ಹಯ್ಯಾ ಲಾಲ್ ಶಿರಚ್ಛೇದ ಪ್ರಕರಣದ ಇಬ್ಬರು ಹಂತಕರು ಅದೇ ನಗರದಲ್ಲಿ ಮತ್ತೋರ್ವ ಉದ್ಯಮಿಯನ್ನು ಕೊಲ್ಲಲು ಸಹ ಯೋಜಿಸಿದ್ದರು ಎಂದು ಮೂಲಗಳಿಂದ ಬಹಿರಂಗಗೊಂಡಿದೆ. ಉದ್ಯಮಿ ಊರಿನಿಂದ ಹೊರಗಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗ್ತಿದೆ. ಜೂನ್ 7 ರಂದು ತಮ್ಮ ಮಗನು ಸಹ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ವಿಚಾರವನ್ನು ಪೋಸ್ಟ್ ಮಾಡಿದ್ದಾನೆ ಎಂದು ಉದ್ಯಮಿಯ ತಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಜೂನ್ 9 ರಿಂದ ಅಂಗಡಿಗೆ ವಿವಿಧ ಜನರು ಬರಲು ಪ್ರಾರಂಭಿಸಿದ್ದರು. ಇದನ್ನು ಗ್ರಹಿಸಿ ತಮ್ಮ ಮಗ ಅಂಗಡಿಗೆ ಹೋಗುವುದನ್ನು ಉದ್ಯಮಿ ನಿಲ್ಲಿಸಿದ್ದರಂತೆ. ಹಾಗೆ ನಗರವನ್ನು ತೊರೆದಿದ್ದರಂತೆ. ಈ ಆರೋಪಿಗಳು ಮಾರ್ಚ್ 30 ರಂದು ಜೈಪುರದಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಉದ್ದೇಶಿಸಿದ್ದ ಸಂಚಿನ ಭಾಗವಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಯ ಆರೋಪಿಗಳನ್ನು ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಬಹುದು. ಅವರ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಎನ್ಐಎ ಮೂಲಗಳು ತಿಳಿಸಿವೆ. ಇಬ್ಬರೂ ಹಂತಕರಿಂದ ಮಾಡಲ್ಪಟ್ಟ ಪೋಸ್ಟ್‌ಗಳು ಮತ್ತು ಚಾಟ್‌ಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದ ವಿವರಗಳನ್ನು ಪಡೆಯಲು ಎನ್‌ಐಎ ತಂಡವು ಸೈಬರ್ ಮತ್ತು ಫೋರೆನ್ಸಿಕ್ ತಂಡಗಳ ಸಹಾಯವನ್ನು ಈ ಮೂಲಕ ಕೋರುತ್ತಿದೆ.
ಇದನ್ನೂ ಓದಿ: ನಟಿ ಸ್ವರಾ ಭಾಸ್ಕರ್ಗೆ ಕೊಲೆ ಬೆದರಿಕೆ ಪತ್ರ: ಪೊಲೀಸರಿಂದ ತನಿಖೆ