ಸುರೇಂದ್ರನಗರ(ಗುಜರಾತ್): ಜಮೀನಿನಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿಯಲ್ಲಿ ಬಿದ್ದ ಎರಡು ವರ್ಷದ ಬಾಲಕನ ರಕ್ಷಣೆ ಮಾಡುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ಗುಜರಾತ್ನ ಸುರೇಂದ್ರ ನಗರ ಜಿಲ್ಲೆಯ ದುದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡೂವರೆ ವರ್ಷದ ಮಗು ಬೋರ್ವೆಲ್ನಲ್ಲಿ ಬಿದ್ದಿದ್ದು, ಬರೋಬ್ಬರಿ ಮೂರೂವರೆ ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ, ಮಗುವಿನ ರಕ್ಷಣೆ ಮಾಡಲಾಗಿದೆ.
ಕಳೆದ ಮಂಗಳವಾರ ಸಂಜೆ 7 ಗಂಟೆಗೆ ಈ ಘಟನೆ ನಡೆದಿದ್ದು, ಹೊಲದಲ್ಲಿ ಆಟವಾಡ್ತಿದ್ದ ಮಗು ಶಿವಂ ದಿಢೀರ್ ಆಗಿ 300 ಅಡಿ ಆಳದ ಬೋರ್ವೆಲ್ನೊಳಗೆ ಬಿದ್ದಿದ್ದಾನೆ. ಮಗು ಕಾಣಿಸಿಕೊಳ್ಳದ ಕಾರಣ ತಾಯಿ ಶಿವಮ್ಮ ಹುಡುಕಾಟ ನಡೆಸಿದ್ದು, ಈ ವೇಳೆ, ಬೋರ್ವೆಲ್ನಲ್ಲಿ ಅದರ ಶಬ್ದ ಕೇಳಿ ಬಂದಿದೆ. ತಕ್ಷಣವೇ ಅಗ್ನಿಶಾಮಕ ದಳ, ಯೋಧರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: IND vs SA: ಟಿ-20 ವಿಶ್ವಕಪ್ ದೃಷ್ಟಿಯಿಂದ ಕಾರ್ತಿಕ್, ಹಾರ್ದಿಕ್ ಮೇಲೆ ಎಲ್ಲರ ಕಣ್ಣು
ಈ ವೇಳೆ ಕಾರ್ಯಾಚರಣೆ ನಡೆಸಿರುವ ಯೋಧರು 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಮಗುವಿನ ರಕ್ಷಣೆ ಮಾಡಿದ್ದಾರೆ. ಸದ್ಯ ಮಗುವನ್ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.