ಆಂಧ್ರಪ್ರದೇಶ : ಇಲ್ಲಿನ ಪೂರ್ವ ಗೋದಾವರಿ ಜಿಲ್ಲೆಯ ನಾಡಿಕುಡುರು ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಸುಟ್ಟ ಶವ ಪತ್ತೆಯಾಗಿದೆ. ವಿಚಾರಣೆ ನಡೆಸಿದ ಪೊಲೀಸರಿಗೆ ಅಚ್ಚರಿ ಮಾಹಿತಿ ಲಭಿಸಿದೆ.
ವ್ಯಕ್ತಿಯೊಬ್ಬರು ಈ ಘಟನೆ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆಗೆ ಮುಂದಾಗಿದ್ದಾರೆ. ಈತ ಸಾವಿಗೀಡಾದ ಸ್ಥಳದಲ್ಲಿ ಸಿಗರೇಟ್, ಮದ್ಯದ ಬಾಟಲಿಗಳು ಇದ್ದವು. ಈ ಸಾಕ್ಷ್ಯಗಳ ಆಧಾರದ ಮೇಲೆ ಅತಿಯಾದ ಮದ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದರು.
![Two sisters arrested in Nadikuduru murder case](https://etvbharatimages.akamaized.net/etvbharat/prod-images/11127433_thumbn.png)
ಹೆಚ್ಚಿನ ತನಿಖೆ ಮುಂದುವರೆಸಿದ ಪೊಲೀಸರಿಗೆ, ಅಪರಿಚಿತ ಸುಟ್ಟ ಶವ ರಾಮಚಂದ್ರಪುರಂ ಮಂಡಲದ ವೆಲ್ಲಾ ಗ್ರಾಮದ ಸತೀಶ್ ಎಂದು ತಿಳಿಯಿತು. ಈ ಘಟನೆಗೆ ವಿವಾಹೇತರ ಸಂಬಂಧವೇ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ. ಪೂರ್ವ ಯೋಜನೆ ಪ್ರಕಾರ ಸುರೇಶನನ್ನು ಇಬ್ಬರು ಸಹೋದರಿಯರು ಕ್ರೂರವಾಗಿ ಕೊಂದಿದ್ದಾರೆ. ನಂತರ ಶವವನ್ನು ಈ ಸ್ಥಳದಲ್ಲಿ ಹಾಕಿ ಸುಟ್ಟಿದ್ದಾರೆ.
ಪ್ರಕರಣದಲ್ಲಿ ಸುರೇಶ್ ಬೈಸಿಕಲ್ ಕೀ ಪ್ರಮುಖ ಸಾಕ್ಷ್ಯವಾಗಿದೆ. ಸ್ಥಳದಲ್ಲಿ ಪತ್ತೆಯಾದ ಕೀಲಿಯನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದಾಗ, ಕೊಲೆಯಾದ ಪ್ರದೇಶದ ಬಳಿ ಬೀಗ ಹಾಕಿದ ಬೈಸಿಕಲ್ ಪತ್ತೆಯಾಗಿದೆ. ನಂತರ ಸಿಸಿ ಟಿವಿ ದಾಖಲೆ ಪರಿಶೀಲಿಸಿದ್ದಾರೆ. ಹಾಗೆ ಫೋನ್ ಕರೆಗಳು ಮತ್ತು ಇತರ ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.