ಕಾಶೀಪುರ : ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷದ ಸುದ್ದಿಯನ್ನು ನೀವು ಕೇಳಿರಬೇಕು. ಇದು ಸಮಾಜದಲ್ಲಿ ಪ್ರತ್ಯೇಕತೆಯನ್ನು ಸೃಷ್ಟಿಸುತ್ತದೆ. ಆದರೆ, ಕೋಮು ಸೌಹಾರ್ದತೆಗೆ ಉದಾಹರಣೆಯಾಗುತ್ತಿರುವ ಸುದ್ದಿಯೊಂದು ಉತ್ತರಾಖಂಡ್ನ ಕಾಶೀಪುರದಿಂದ ಹೊರಬಿದ್ದಿದೆ. ಇಲ್ಲಿ ಹಿಂದೂ ಕುಟುಂಬದ ಇಬ್ಬರು ಸಹೋದರಿಯರು ತಮ್ಮ ಜಮೀನನ್ನು ಈದ್ಗಾಗೆ ದಾನ ಮಾಡಿದ್ದಾರೆ.
ಮೃತ ತಂದೆಯ ಕೊನೆಯ ಆಸೆಯನ್ನು ಈಡೇರಿಸಲು ಈ ಇಬ್ಬರು ಸಹೋದರಿಯರು ಈದ್ಗಾ ವಿಸ್ತರಣೆಗೆ 4 ಬಿಘ ಭೂಮಿಯನ್ನು (ಸರಿ ಸುಮಾರು ಎರಡೂವರೆ ಎಕರೆ) ದಾನ ಮಾಡುವ ಮೂಲಕ ತಮ್ಮ ಕರ್ತವ್ಯವನ್ನು ಪೂರೈಸಿದ್ದಾರೆ. ಲಾಲಾ ಬ್ರಿಜಾನಂದನ್ ಪ್ರಸಾದ್ ರಸ್ತೋಗಿ ಅವರ ಕುಟುಂಬಕ್ಕೆ ಕಾಶಿಪುರದ ಈದ್ಗಾ ಮೈದಾನದ ಬಳಿ ಕೃಷಿ ಭೂಮಿ ಇದೆ.
ಈ ಜಮೀನಿನಲ್ಲಿ ಖಾತೆ ಸಂಖ್ಯೆ 827(1) ಮತ್ತು (2) ಸುಮಾರು 4 ಬಿಘಾಗಳು ಈದ್ಗಾದ ಗಡಿಗೆ ಹೊಂದಿಕೊಂಡಿವೆ. 25 ಜನವರಿ 2003ರಂದು, ಬೃಜಾನಂದನ್ ರಸ್ತೋಗಿ ಅವರು ನಿಧಾನವಾಗುವ ಮೊದಲು ಈದ್ಗಾಕ್ಕಾಗಿ ಈ ಭೂಮಿಯನ್ನು ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಈ ಜಮೀನು ಅವರ ಇಬ್ಬರು ಪುತ್ರಿಯರಾದ ಸರೋಜ್ ರಸ್ತೋಗಿ ಮತ್ತು ಅನಿತಾ ರಸ್ತೋಗಿ ಅವರ ಹೆಸರಿನಲ್ಲಿ ಖರೀದಿ ಮಾಡಿದ್ದರು.
ಓದಿ: ಈದ್ಗಾ ಮೈದಾನದ ಗೋಡೆ ನಿರ್ಮಾಣಕ್ಕೆ ಜಮೀನು ನೀಡಿ ಸಹಕರಿಸಿದ ಹಿಂದೂ ಕುಟುಂಬ
ಬೃಜಾನಂದನ್ ಪ್ರಸಾದ್ ರಸ್ತೋಗಿ ಅವರು ಈ ಹಿಂದೆ ಮಾಜಿ ಸಂಸದ ಸತ್ಯೇಂದ್ರ ಚಂದ್ರ ಗುಡಿಯಾ ಅವರ ಬಳಿಯೂ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಬೃಜಾನಂದನ್ ಅವರು ಈದ್ಗಾ ಸಮಿತಿಯ ಪದಾಧಿಕಾರಿಗಳೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು. ಪ್ರತಿ ವರ್ಷವೂ ಈದ್ಗಾಕ್ಕೆ ದೇಣಿಗೆ ನೀಡುತ್ತಿದ್ದರು.
ಬೃಜಾನಂದನ್ ನಿಧನದ ನಂತರ ಸಹೋದರಿಯರಿಬ್ಬರೂ ತಂದೆಯ ಆಸೆ ತಿಳಿದು ತಮ್ಮ ಸಹೋದರ ರಾಕೇಶ್ ರಸ್ತೋಗಿ ಅವರ ನೆರವಿನೊಂದಿಗೆ ಸಮಿತಿಯ ಸದರ್ ಹಸೀನ್ ಖಾನ್ ಅವರನ್ನು ಸಂಪರ್ಕಿಸಿ ಈದ್ಗಾ ಪಕ್ಕದ ಜಮೀನನ್ನು ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದರು.
ಪ್ರಸ್ತುತ ಸರೋಜ್ ಅವರ ಕುಟುಂಬ ಮೀರತ್‌ನಲ್ಲಿ ಮತ್ತು ಅನಿತಾ ಅವರ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ. ಇಬ್ಬರ ಒಪ್ಪಿಗೆ ಮೇರೆಗೆ ಸರೋಜ ಅವರ ಪತಿ ಸುರೇಂದ್ರ ವೀರ್ ರಸ್ತೋಗಿ ಹಾಗೂ ಪುತ್ರ ವೀರ್ ರಸ್ತೋಗಿ ಮತ್ತು ಅನಿತಾ ರಸ್ತೋಗಿ ಅವರ ಪುತ್ರ ಅಭಿಷೇಕ್ ರಸ್ತೋಗಿ ಕಾಶಿಪುರಕ್ಕೆ ಆಗಮಿಸಿ ಗಣ್ಯರ ಸಮ್ಮುಖದಲ್ಲಿ ನಿವೇಶನ ಪಡೆದು ಈದ್ಗಾ ಪಕ್ಕದ ಜಮೀನನ್ನು ಸಮಿತಿಗೆ ದಾನ ಮಾಡಿದರು. ಸಮಿತಿಯು ಜಮೀನಿನಲ್ಲಿ ಗಡಿ ನಿರ್ಮಾಣ ಕಾರ್ಯವನ್ನೂ ಆರಂಭಿಸಿದೆ.