ETV Bharat / bharat

ಒಡಿಶಾದಲ್ಲಿ ಮತ್ತೆರಡು ಒಮಿಕ್ರಾನ್​ ಕೇಸ್​.. ರಾಜ್ಯದಲ್ಲಿ 4ಕ್ಕೆ ಏರಿದ ಸೋಂಕಿತರ ಸಂಖ್ಯೆ.. - ಒಡಿಶಾದಲ್ಲಿ ಒಮಿಕ್ರಾನ್​ ಹೆಚ್ಚಳ

ಒಡಿಶಾ ರಾಜ್ಯದಲ್ಲಿ ಮತ್ತೆರಡು ಒಮಿಕ್ರಾನ್​ ಪ್ರಕರಣ ಪತ್ತೆಯಾಗಿವೆ. ನೈಜೀರಿಯಾದಿಂದ ಹಿಂದಿರುಗಿದ 41 ವರ್ಷದ ವ್ಯಕ್ತಿ ಮತ್ತು ಕತಾರ್‌ನಿಂದ ಬಂದ 43 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ಇರುವುದು ಗೊತ್ತಾಗಿದೆ..

omicron
ಒಮಿಕ್ರಾನ್​
author img

By

Published : Dec 21, 2021, 5:55 PM IST

ಒಡಿಶಾ : ಒಡಿಶಾ ರಾಜ್ಯದಲ್ಲಿ ಮತ್ತೆರಡು ಒಮಿಕ್ರಾನ್​ ಪ್ರಕರಣ ಪತ್ತೆಯಾಗಿವೆ. ನೈಜೀರಿಯಾದಿಂದ ಹಿಂದಿರುಗಿದ 41 ವರ್ಷದ ವ್ಯಕ್ತಿ ಮತ್ತು ಕತಾರ್‌ನಿಂದ ಬಂದ 43 ವರ್ಷದ ವ್ಯಕ್ತಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ 4ಕ್ಕೆ ಏರಿಕೆಯಾಗಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೈಜೀರಿಯಾದಿಂದ ಬಂದ ವ್ಯಕ್ತಿ ಜಗತ್‌ಸಿಂಗ್‌ಪುರದವರು ಮತ್ತು ಕತಾರ್​ನಿಂದ ಬಂದವರು ಖುರ್ದಾದವರಾಗಿದ್ದಾರೆ. ಇಬ್ಬರಿಗೂ ಕೊರೊನಾ ಟೆಸ್ಟ್​ ಮಾಡಿದಾಗ ಪಾಸಿಟಿವ್​ ಬಂದಿತ್ತು. ಈ ವೇಳೆ ಅದು ಒಮಿಕ್ರಾನ್​ ಎಂಬುದನ್ನು ದೃಢಪಡಿಸಲು ಅವರ ಮಾದರಿಗಳನ್ನು ಭುವನೇಶ್ವರದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್‌ನಲ್ಲಿ ಜೀನೋಮಿಕ್​ ಅಧ್ಯಯನಕ್ಕೆ ಕಳುಹಿಸಲಾಗಿತ್ತು.

ಈ ವೇಳೆ ವರದಿ ಒಮಿಕ್ರಾನ್ ಇರುವ ಬಗ್ಗೆ ದೃಢಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕಿತರ ಮೇಲೆ ತೀವ್ರ ನಿಗಾವಹಿಸಲಾಗಿದೆ. ಭಯಪಡುವ ಅಗತ್ಯವಿಲ್ಲ. ಸೋಂಕಿತರ ನಿಕಟ ಸಂಪರ್ಕಿತರನ್ನೂ ಪತ್ತೆ ಹಚ್ಚಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಮಾದರಿಗಳನ್ನು ಜೀನೋಮಿಕ್​ ಅಧ್ಯಯನಕ್ಕೆ ಕಳುಹಿಸಲಾಗುವುದು ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ನಿರಂಜನ್ ಮಿಶ್ರಾ ತಿಳಿಸಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್​, ಡೀಸೆಲ್ ಜಿಎಸ್​ಟಿಗೆ ಸೇರಿಸಲು​ ಶಿಫಾರಸು ಬಂದಿಲ್ಲ: ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ

ನವೆಂಬರ್ 1 ರಿಂದ ಈವರೆಗೆ 6,000ಕ್ಕೂ ಹೆಚ್ಚು ಜನರು ವಿದೇಶದಿಂದ ಒಡಿಶಾಗೆ ಬಂದಿದ್ದಾರೆ. ಇವರಲ್ಲಿ 7 ಮಂದಿಯಲ್ಲಿ ಕೋವಿಡ್ ಪಾಸಿಟಿವ್​ ಬಂದಿದೆ. ಅವರ ಮಾದರಿಗಳನ್ನು ಜೀನೋಮಿಕ್​ ಅಧ್ಯಯನಕ್ಕಾಗಿ ಕಳುಹಿಸಲಾಗಿತ್ತು. ಇದೀಗ ಇಬ್ಬರಲ್ಲಿ ಒಮಿಕ್ರಾನ್​ ದೃಢಪಟ್ಟಿದ್ದು, ಉಳಿದ 5 ಮಂದಿಯ ಮಾದರಿಗಳ ಫಲಿತಾಂಶಗಳು ಬರಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.