ವಿಶಾಖಪಟ್ಟಣಂ:ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ವ್ಯಕ್ತಿಯೊಬ್ಬನನ್ನು ಪೆಂಡುರ್ತಿ ಪೊಲೀಸರು ಬಂಧಿಸಿದ್ದಾರೆ. ಸುಜಾತಾನಗರದ ಸಿ-2 ವಲಯದಲ್ಲಿ ವಾಸವಾಗಿರುವ ಬಿ.ಧನಲಕ್ಷ್ಮಿ (37) ಅವರ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು.
ಈಕೆ ಬಾಂಗ್ಲಾದೇಶದ ಢಾಕಾದ ನೂಪುರ್ ಅಲಿಯಾಸ್ ಆದಿ ಮತ್ತು ಪಾಪಿಯಾ ಅಲಿಯಾಸ್ ಪಪ್ಪಿ ಎಂಬುವರ ಜೊತೆ ಸ್ನೇಹ ಬೆಳೆಸಿದ್ದಳು. ಅದರಂತೆ ಅವರು ಢಾಕಾದ 26 ವರ್ಷದ ಯುವತಿಯನ್ನು ಗಡಿ ದಾಟಿಸಿ ಕಳೆದ ತಿಂಗಳು 23ರಂದು ಕೋಲ್ಕತ್ತಾಕ್ಕೆ ಕಳುಹಿಸಿದ್ದರು. ಕಳೆದ ತಿಂಗಳ 27ರವರೆಗೆ ಆಕೆ ಮುನ್ನೀರ್ (24) ಎಂಬ ವ್ಯಕ್ತಿ ಮನೆಯಲ್ಲಿ ಇದ್ದರು. ಭಾರತೀಯ ವೀಸಾ ನೀಡುವುದಾಗಿ ಭರವಸೆ ನೀಡಿದ್ದ. ಮುನ್ನೀರ್ ಆಕೆಗೆ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಮೊಬೈಲ್ ಸಿಮ್ ಕಾರ್ಡ್ ಸಹ ನೀಡಿದ್ದ. ಕಳೆದ ತಿಂಗಳು 28 ರಂದು ಶಾಲಿಮಾರ್ ಎಕ್ಸ್ ಪ್ರೆಸ್ ನಲ್ಲಿ ಮಹಿಳೆಯನ್ನು ವೇಶ್ಯಾವಾಟಿಕೆ ಉದ್ದೇಶದಿಂದ ವಿಶಾಖಪಟ್ಟಣಂಗೆ ಕಳುಹಿಸಿದ್ದ.
ಹೈದರಾಬಾದ್‌ನ ಕುಕಟ್‌ಪಲ್ಲಿ ಮೂಲದ ಧನಲಕ್ಷ್ಮಿ ಮತ್ತು ಎ.ವಿನೀತ್ ಎಂಬುವರು ರೈಲ್ವೆ ನಿಲ್ದಾಣದಿಂದ ಆ ಯುವತಿಯನ್ನು ಕರೆತಂದಿದ್ದರು. ಬಾಂಗ್ಲಾದೇಶದ ಆ ಯುವತಿಯನ್ನು ಇರಿಸಿಕೊಂಡು ಧನಲಕ್ಷ್ಮಿ ಇದೇ ತಿಂಗಳ 3ರವರೆಗೆ ತನ್ನ ಮನೆಯಲ್ಲಿಯೇ ವೇಶ್ಯಾವಾಟಿಕೆ ನಡೆಸಿದ್ದಳು ಎನ್ನಲಾಗಿದೆ. ಇದಾದ ನಂತರ ಆ ಯುವತಿ ಹೇಗಾದರೂ ಮಾಡಿ ಇಲ್ಲಿಂದ ಪರಾರಿಯಾಗುವ ಆಲೋಚನೆ ಮಾಡಿ, ಸಹೋದರನ ಆರೋಗ್ಯ ಸರಿಯಿಲ್ಲ, ತಾನು ಢಾಕಾಗೆ ಹೋಗುವುದಾಗಿ ಮನವಿ ಮಾಡಿಕೊಂಡಿದ್ದಾಳೆ. ಆದರೆ, ಇದಕ್ಕೆ ಧನಲಕ್ಷ್ಮಿ ನಿಕಾರಕರಿಸಿದ್ದಾರಂತೆ. ಯುವತಿ ನಡೆದ ಘಟನೆ ಬಗ್ಗೆ ತನ್ನ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾಳೆ. ಆತ ಇಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪರಿಣಾಮ ಸಿಐ ಅಶೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಧನಲಕ್ಷ್ಮಿ ಮನೆ ಮೇಲೆ ದಾಳಿ ನಡೆಸಿ ಸಂತ್ರಸ್ತೆಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 'ದಂಗಲ್' ದಾಖಲೆ ಉಡೀಸ್ ಮಾಡಿದ 'ಕೆಜಿಎಫ್ 2': ಹಿಂದಿಯಲ್ಲಿ ಹೆಚ್ಚು ಗಳಿಸಿದ 2ನೇ ಚಿತ್ರ ಎಂಬ ಹೆಗ್ಗಳಿಕೆ!