ನವದೆಹಲಿ: ಸಿಯಾಚಿನ್‌ನಲ್ಲಿ ಭಾನುವಾರ ನಡೆದ ಹಿಮಪಾತದಲ್ಲಿ ಇಬ್ಬರು ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.
ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಉಪ ವಲಯದ ಹನೀಫ್‌ನಲ್ಲಿ ಈ ಘಟನೆ ನಡೆದಿದೆ.
ಹಿಮಪಾತ ಸಂಭವಿಸಿದಾಗ ಈ ಪ್ರದೇಶದಲ್ಲಿದ್ದ ಇತರ ಸೈನಿಕರು ಮತ್ತು ಪೋರ್ಟರ್‌ಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೋವಿಡ್ನಿಂದ ಇಂದೋರ್ನಲ್ಲಿ ಸಾವಿಗೀಡಾದ ಅಸ್ಸೋಂ ವ್ಯಕ್ತಿ: ವಿಧಿವಿಧಾನ ನೆರವೇರಿಸಿದ ಪೊಲೀಸರು
ಕಾರಕೋರಂ ಶ್ರೇಣಿಯಲ್ಲಿ ಸುಮಾರು 20,000 ಅಡಿಗಳಷ್ಟು ಎತ್ತರದಲ್ಲಿರುವ ಸಿಯಾಚಿನ್ ಹಿಮನದಿ ವಿಶ್ವದ ಅತಿ ಎತ್ತರದ ಮಿಲಿಟರಿ ವಲಯ ಎಂದು ಕರೆಯಲ್ಪಡುತ್ತದೆ. ಅಲ್ಲಿ ಸೈನಿಕರು ಹಿಮಪಾತ ಮತ್ತು ಹೆಚ್ಚಿನ ಗಾಳಿಯೊಂದಿಗೆ ಹೋರಾಡಬೇಕಾಗುತ್ತದೆ.
ಹಿಮನದಿಯಲ್ಲಿ ಹಿಮಪಾತ ಮತ್ತು ಭೂಕುಸಿತ ಸಾಮಾನ್ಯವಾಗಿದೆ. ತಾಪಮಾನವು ಮೈನಸ್ 60 ಡಿಗ್ರಿ ಸೆಲ್ಸಿಯಸ್‌ವರೆಗೆ ಇಳಿಯಬಹುದು.