ETV Bharat / bharat

ಕೊರೊನಾ ವ್ಯಾಕ್ಸಿನ್​ ಕುರಿತ ತಪ್ಪು ಹೇಳಿಕೆ ಇರುವ ಟ್ವೀಟ್​ಗಳನ್ನು ಅಳಿಸಲಿದ್ದೇವೆ: ಟ್ವಿಟರ್​

ಭಾರತದಲ್ಲಿ ಕೋವಿಡ್​ ಕುರಿತಾದ ನಕಾರಾತ್ಮಕ ಪ್ರತಿಕ್ರಿಯೆಯ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಟ್ವಿಟರ್‌ಗೆ ಕೇಳಿಕೊಂಡ ನಂತರ ಟ್ವಿಟರ್ ವಕ್ತಾರರು, ಕೋವಿಡ್​ ವ್ಯಾಕ್ಸಿನೇಷನ್‌ ಬಗೆಗಿನ ಸುಳ್ಳು ಮತ್ತು ದಾರಿ ತಪ್ಪಿಸುವ ಪೋಸ್ಟ್‌ಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.

twitter
twitter
author img

By

Published : Apr 25, 2021, 3:41 PM IST

ನವದೆಹಲಿ: ಕೋವಿಡ್​ ವ್ಯಾಕ್ಸಿನೇಷನ್‌ ಬಗ್ಗೆ ಸುಳ್ಳು ಅಥವಾ ದಾರಿ ತಪ್ಪಿಸುವ ಟ್ವೀಟ್​ಗಳನ್ನು ಟ್ವಿಟರ್​ನಿಂದ ತೆಗೆದುಹಾಕಲಾಗುವುದು ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.

ಈಗಾಗಲೇ ಭಾರತದಲ್ಲಿ ಕೊರೊನಾ ಕುರಿತು ಮಾಡಿರುವ ಹಲವಾರು ಟ್ವೀಟ್‌ಗಳನ್ನು ಮೈಕ್ರೋ ಬ್ಲಾಗಿಂಗ್ ಸೈಟ್‌ನಿಂದ ತೆಗೆದುಹಾಕಲಾಗಿದೆ. ವ್ಯಾಕ್ಸಿನ್​ ಕುರಿತು ಆಧಾರ ರಹಿತ ವದಂತಿಗಳು ಮತ್ತು ಲಸಿಕೆಗಳ ಬಗ್ಗೆ ಅಪೂರ್ಣ ಮಾಹಿತಿಯನ್ನು ನೀಡುವ ಟ್ವೀಟ್‌ಗಳ ಬಗ್ಗೆ ನಾವು ಎಚ್ಚರಿಕೆ ವಹಿಸುತ್ತೇವೆ. ಅಂತಹ ಟ್ವೀಟ್​ಗಳನ್ನು ತೆಗೆದುಹಾಕಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.

ಅನಧಿಕೃತ ಮಾಹಿತಿ ನೀಡುವ ಟ್ವೀಟ್​ಗಳನ್ನ ತೆಗೆದು ಹಾಕುವಂತೆ ಕೇಳಿಕೊಂಡಿರುವ ಕೇಂದ್ರದ ಮನವಿಯನ್ನು ನಾವು ಸ್ವೀಕರಿಸಿದ್ದೇವೆ. ಅದನ್ನು ಟ್ವಿಟರ್ ನಿಯಮಗಳು ಮತ್ತು ಸ್ಥಳೀಯ ಕಾನೂನು ಎರಡರ ಅಡಿಯಲ್ಲಿ ಪರಿಶೀಲಿಸಲಾಗುತ್ತದೆ ಎಂದು ವಕ್ತಾರರು ಹೇಳಿದ್ದಾರೆ. ಉಲ್ಲಂಘನೆ ಕಂಡುಬಂದಲ್ಲಿ ಆ ಟ್ವಿಟರ್ ಖಾತೆ ತೆಗೆದು ಹಾಕಲಾಗುವುದು. ಅದಕ್ಕೂ ಮುನ್ನ ಈ ಬಗ್ಗೆ ಖಾತೆ ಹೊಂದಿರುವವರಿಗೆ ಮಾಹಿತಿ ನೀಡಲಾಗುವುದು ಎಂದು ಟ್ವಿಟರ್​ ಹೇಳಿದೆ.

ಒಂದು ಸ್ಟ್ರೈಕ್ ಖಾತೆ ಮಟ್ಟದ ಕ್ರಿಯೆಗೆ ಕಾರಣವಾಗುವುದಿಲ್ಲ, ಎರಡು ಸ್ಟ್ರೈಕ್‌ಗಳು ಮತ್ತು ಮೂರು ಸ್ಟ್ರೈಕ್‌ಗಳು 12 ಗಂಟೆಗಳ ಖಾತೆ ಲಾಕ್​ಅನ್ನು ಜಾರಿಗೊಳಿಸುತ್ತವೆ. ನಾಲ್ಕು ಸ್ಟ್ರೈಕ್‌ಗಳನ್ನು ಏಳು ದಿನಗಳ ಖಾತೆ ಲಾಕ್‌ನೊಂದಿಗೆ ಪೂರೈಸಲಾಗುವುದು ಮತ್ತು ಐದು ಅಥವಾ ಹೆಚ್ಚಿನ ಸ್ಟ್ರೈಕ್‌ಗಳನ್ನು ಹೊಂದಿರುವ ವ್ಯಕ್ತಿಯ ಟ್ವಿಟರ್​ ಅಕೌಂಟ್​​​ಅನ್ನು ಶಾಶ್ವತವಾಗಿ ತೆಗೆದುಹಾಕಲಾಗುವುದು ಎಂದು ಟ್ವಿಟರ್​ ಹೇಳಿದೆ.

ಕೋವಿಡ್​ ಲಸಿಕೆ ಬಗ್ಗೆ ಜನರಿಗೆ ಅಧಿಕೃತ ಮಾಹಿತಿಯನ್ನು ಒದಗಿಸುವುದು ನಮ್ಮ ಗುರಿ. ಟ್ವಿಟರ್ ತತ್ವಗಳಿಗೆ ಬದ್ಧವಾಗಿದೆ ಎಂದು ಹೇಳಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.