ETV Bharat / bharat

ಸಿಎಂ ಭಗವಂತ್ ಮಾನ್ ಪತ್ನಿ ಗುರುಪ್ರೀತ್ ಕೌರ್ ಟ್ವಿಟರ್ ಖಾತೆ ಅಮಾನತು.. ಕಾರಣ!? - ಗುರುಪ್ರೀತ್ ಕೌರ್ ಟ್ವಿಟರ್ ಖಾತೆ ಅಮಾನತು

ಭಗವಂತ್ ಮಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಗುರುಪ್ರೀತ್ ಕೌರ್​​ ಅವರ ಟ್ವಿಟರ್ ಖಾತೆ ಅಮಾನತುಗೊಂಡಿದೆ ಎಂಬುದಾಗಿ ವರದಿಯಾಗಿದೆ.

Gurpreet Kaur
Gurpreet Kaur
author img

By

Published : Jul 8, 2022, 5:31 PM IST

ಚಂಡೀಗಢ(ಪಂಜಾಬ್​): ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆ ನಿನ್ನೆಯಷ್ಟೇ ಗುರುಪ್ರೀತ್ ಕೌರ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೇ ಅವರು ಬಳಕೆ ಮಾಡುತ್ತಿದ್ದ ಟ್ವಿಟರ್ ಖಾತೆ ಅಮಾನತುಗೊಳಿಸಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಟ್ವಿಟರ್​ ಖಾತೆಯಲ್ಲಿ 'ಸಮುದಾಯ ಮಾನದಂಡ ಉಲ್ಲಂಘನೆ' ಮಾಡಿದ್ದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಚಂಡೀಗಢದ ಆನಂದ್​ ಕರಾಜ್​​ನಲ್ಲಿ ನಡೆದ ಸಮಾರಂಭದಲ್ಲಿ ಹರಿಯಾಣದ ಡಾ. ಗುರುಪ್ರೀತ್ ಕೌರ್​​ ಸಿಎಂ ಭಗವಂತ್ ಮಾನ್​​ ಅವರೊಂದಿಗೆ ವಿವಾಹವಾದರು. ತಮ್ಮ ಮದುವೆಯ ಅನೇಕ ಚಿತ್ರ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ. ಕೆಲವೊಂದು ಮಾಹಿತಿಗಳ ಪ್ರಕಾರ ಇದು ಫೇಕ್​ ಅಕೌಂಟ್​ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿರಿ: 'ಶಿವಸೇನೆಯ ಬಿಲ್ಲು-ಬಾಣ ಚಿಹ್ನೆ ತೆಗೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ': ಉದ್ಧವ್ ಠಾಕ್ರೆ

ಮದುವೆಗೂ ಮುಂಚೆ ತಮ್ಮ ಫೋಟೋ ಹಂಚಿಕೊಂಡಿದ್ದ ಡಾ. ಗುರುಪ್ರೀತ್ ಕೌರ್​, 'ಮದುವೆಯ ದಿನ ಬಂದಿದೆ' ಎಂದು ಬರೆದುಕೊಂಡಿದ್ದರು. ಜೊತೆಗೆ ಎಎಪಿ ಪಕ್ಷದ ಅನೇಕ ನಾಯಕರಿಗೆ ಧನ್ಯವಾದ ಅರ್ಪಿಸಿದ್ದರು. ಟ್ವಿಟರ್​​ನಲ್ಲಿ ತುಂಬಾ ಸಕ್ರಿಯವಾಗಿರುವ ಕೌರ್​, ಪಂಜಾಬ್ ಸಿಎಂ ಭಗವಂತ್ ಮಾನ್​ ಅವರ ಟ್ವೀಟ್​​ಗಳನ್ನ ರೀಟ್ವೀಟ್ ಮಾಡುತ್ತಿರುತ್ತಾರೆ.

ಕಳೆದ ಆರು ವರ್ಷಗಳ ಹಿಂದೆ ಭಗವಂತ್ ಮಾನ್​ ಮದುವೆ ಮಾಡಿಕೊಂಡಿದ್ದರು. ಆದರೆ, ಅವರಿಗೆ ವಿಚ್ಛೇದನ ನೀಡಿದ್ದು, ಇದೀಗ ಎರಡನೇ ಮದುವೆ ಮಾಡಿಕೊಂಡಿದ್ದಾರೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.