ನವದೆಹಲಿ: ಭಾರಿ ಭೂಕಂಪನಕ್ಕೆ ನಲುಗಿರುವ ಸಿರಿಯಾ, ಟರ್ಕಿಯಲ್ಲಿ 33 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬದುಕುಳಿದವರು ಅನ್ನ, ಆಶ್ರಯಕ್ಕೆ ಎದುರು ನೋಡುತ್ತಿದ್ದಾರೆ. ಭೂಪಂಪನದಿಂದ ಅದೆಷ್ಟೋ ಜನ ಅವಶೇಷಗಳ ಅಡಿ ಸಿಲುಕಿದ್ದು, ಅವರ ರಕ್ಷಣಾ ಕಾರ್ಯ ಕೂಡ ಭರದಿಂದ ಸಾಗಿದೆ. ಭೂಪಂಪನ ಪೀಡಿತದ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಕ್ಕೆ ಈಗಾಗಲೇ ಭಾರತೀಯ ವಿಪತ್ತು ರಕ್ಷಣಾ ತಂಡದ ಹಲವು ತಂಡ ಮುಂದಾಗಿದೆ.
-
THANK YOU INDIA! 🇮🇳🇮🇳🇮🇳
— Fırat Sunel फिरात सुनेल فرات صونال (@firatsunel) February 13, 2023 " class="align-text-top noRightClick twitterSection" data="
Each tent, each blanket or sleeping bag are of vital importance for the hundreds of thousands of earthquake survivors. https://t.co/v9rsXtdzjL
">THANK YOU INDIA! 🇮🇳🇮🇳🇮🇳
— Fırat Sunel फिरात सुनेल فرات صونال (@firatsunel) February 13, 2023
Each tent, each blanket or sleeping bag are of vital importance for the hundreds of thousands of earthquake survivors. https://t.co/v9rsXtdzjLTHANK YOU INDIA! 🇮🇳🇮🇳🇮🇳
— Fırat Sunel फिरात सुनेल فرات صونال (@firatsunel) February 13, 2023
Each tent, each blanket or sleeping bag are of vital importance for the hundreds of thousands of earthquake survivors. https://t.co/v9rsXtdzjL
ಜೊತೆಗೆ ಸಂತ್ರಸ್ತರಿಗೆ ಅಗತ್ಯ ಆಹಾರ ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸಲು ಮುಂದಾಗಿದೆ. ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಕ್ಕೆ ಸಹಾಯ ಹಸ್ತ ಚಾಚಿರುವ ಭಾರತದ ಕ್ರಮಕ್ಕೆ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಧನ್ಯವಾದಗಳನ್ನು ತಿಳಿಸಿದ್ದಾರೆ.
ವಸುದೈವ ಕುಟುಂಬಕಂ: ಈ ಕುರಿತು ಟ್ವೀಟರ್ನಲ್ಲಿ ಕೃತಜ್ಞತೆ ಸಲ್ಲಿಸಿರುವ ಅವರು, ಸೋಮವಾರ ಮತ್ತೊಂದು ತುರ್ತು ಬ್ಯಾಚ್ನ ಆಗಮಿಸಿದ್ದು, ಭೂಕಂಪ ಪೀಡಿತ ಪ್ರದೇಶಕ್ಕೆ ಪ್ರತಿದಿನವೂ ಸಹಾಯವನ್ನು ಉಚಿತವಾಗಿ ನೀಡಲಾಗುತ್ತಿದ. ಟೆಂಟ್, ಬ್ಲಾಕೆಂಟ್, ಸ್ಲೀಪಿಂಗ್ ಬ್ಯಾಗ್ಗಳನ್ನು ನೀಡಿರುವುದಕ್ಕೆ ಧನ್ಯವಾದ. ಭೂಕಂಪನದಿಂದ ಬದುಕುಳಿದಿರುವ ಸಾವಿರರಾರು ಸಂತ್ರಸ್ತರಿಗೆ ಇವು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ವಸುದೈವ ಕುಟುಂಬಂ ಎಂಬ ಹ್ಯಾಷ್ಟ್ಯಾಗ್ ಬಳಸಿದ್ದಾರೆ.
ಭಾರತ ಇದುವರೆಗೆ ಟರ್ಕಿಗೆ ಆಪರೇಷನ್ ದೋಸ್ಟ್ ಹೆಸರಿನಲ್ಲಿ ಪರಿಣಿತ ರಕ್ಷಣಾ ತಂಡ ಮತ್ತು ಅಗತ್ಯ ವಸ್ತಗಳನ್ನು 7 ಏರ್ಕ್ರಾಫ್ಟ್ಗಳ ಮೂಲಕ ಕಳುಹಿಸಿದೆ. 7ನೇ ಏರ್ಕ್ರಾಫ್ಟ್ ಭಾನುವಾರ ಸಿರಿಯಾ ತಲುಪಿದ್ದು, ಇದರಲ್ಲಿ 23 ಟನ್ ಅಗತ್ಯ ವಸ್ತುಗಳಿವೆ. ಈ ವಸ್ತುಗಳನ್ನು ಸ್ಥಳೀಯ ಆಡಳಿತ ಮತ್ತು ಪರಿಸರದ ಉಪ ಸಚಿವ ಮೌಟಜ್ ದುವಾಜಿ ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿದ್ದಾರೆ.
ಜೆನ್ಸೆಟ್ಸ್, ಸೋಲಾರ್ ಲ್ಯಾಂಪ್, ಎಮೆರ್ಜೆನ್ಸಿ ಮತ್ತು ಕ್ರಿಟಿಕಲ್ ಕೇರ್ ಮೆಡಿಸಿನ್, ವಿಪತ್ತು ನಿರ್ವಹಣಾ ಅಗತ್ಯ ವಸ್ತುಗಳನ್ನು 7ನೇ ಆಪರೇಷನ್ ದೋಸ್ತ್ ವಿಮಾನದ ಮೂಲಕ ಕಳುಹಿಸಲಾಗಿದೆ. ಈ ಎಲ್ಲ ವಸ್ತುಗಳನ್ನು ಡಮಸ್ಕಸ್ ವಿಮಾನ ನಿಲ್ದಾನದಲ್ಲಿ ಉಪ ಸಚಿವರು ಪಡೆದಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಫೆ 6ರಂದು ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಗೆ ಭೂಕಪಂನಕ್ಕೆ ಟರ್ಕಿ ಮತ್ತು ಸಿರಿಯಾ ತತ್ತರಿಸಿವೆ. ಈ ದೇಶಗಳಲ್ಲಿ ಕ್ರಮವಾಗಿ 30, 000 ಮತ್ತು 3,500 ಮಂದಿ ಸಾವನ್ನಪ್ಪಿದ್ದಾರೆ.
ಎರಡೂ ರಾಷ್ಟ್ರಗಳ ನೆರವಿಗೆ ನಿಂತ ಭಾರತ: ಈ ಭಾರಿ ಅನಾಹುತ ಸಂಭವಿಸಿದ ಮರು ಕ್ಷಣಕ್ಕೆ ಭಾರತ ಈ ಎರಡು ದೇಶಗಳಿಗೆ ಸಹಾಯಕ್ಕೆ ಮುಂದಾಗಿದೆ. ಸುಮಾರು 1000 ಔಷದ ಪೆಟ್ಟಿ, ರಕ್ಷಣಾ ಸುರಕ್ಷಾ ಸಾಧನ, ಡಯಗ್ನಾಸ್ಟಿಕ್ ಕಿಟ್ಗಳನ್ನು ಕಳುಹಿಸಲಾಗಿದೆ. ಕಳೆದ ಶುಕ್ರವಾರ ಮಾತನಾಡಿದ ಪ್ರಧಾನಿ ಮೋದಿ, ಈ ಎರಡು ದೇಶಗಳಲ್ಲಿ ಆಪರೇಷನ್ ದೋಸ್ತ್ ಹೆಸರಿನಲ್ಲಿ ಭಾರತೀಯ ರಕ್ಷಣಾ ಮತ್ತು ಚಿಕಿತ್ಸಾ ತಂಡ ಹಗಲು ಮತ್ತು ರಾತ್ರಿ ಶ್ರಮಿಸಲಿದೆ. ಎಷ್ಟು ಸಾಧ್ಯವೋ ಅಷ್ಟು ಜೀವ ಉಳಿಸಲು ಅವರು ಶ್ರಮವಹಿಸಲಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲಿ ಭಾರತ ಟರ್ಕಿ ಜನರ ಪರವಾಗಿ ನಿಲ್ಲಲಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು.
ಇದನ್ನೂ ಓದಿ: ಟರ್ಕಿ ಬೆನ್ನಲ್ಲೇ ಸಿಕ್ಕೀಂನಲ್ಲೂ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು