ನವದೆಹಲಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ನೇತೃತ್ವದ ಭಾರತೀಯ ರಾಜಕೀಯ ಕ್ರಿಯಾ ಸಮಿತಿ ಅಧಿಕೃತವಾಗಿ ಟಿಆರ್‌ಎಸ್‌ಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಕೆ.ಟಿ.ರಾಮರಾವ್ ಭಾನುವಾರ ಖಚಿತಪಡಿಸಿರುವುದು ತೆಲಂಗಾಣ ರಾಜಕೀಯದಲ್ಲಿ ಸಂಚಲನ ಉಂಟು ಮಾಡದೆ.
ಪ್ರಶಾಂತ್ ಕಿಶೋರ್ ಟಿಆರ್‌ಎಸ್ ಪಕ್ಷಕ್ಕೆ ಐ-ಪಿಎಸಿ ಅನ್ನು ಪರಿಚಯಿಸಿದ್ದಾರೆ ಮತ್ತು ಐ-ಪಿಎಸಿ ನಮಗಾಗಿ ಅಧಿಕೃತವಾಗಿ ಕೆಲಸ ಮಾಡುತ್ತಿದೆ. ನಾವು ಪ್ರಶಾಂತ್ ಕಿಶೋರ್ ಅವರೊಂದಿಗೆ ಕೆಲಸ ಮಾಡುತ್ತಿಲ್ಲ, ಆದರೆ ಐ-ಪಿಎಸಿ ಜೊತೆ ಕೆಲಸ ಮಾಡುತ್ತಿದ್ದೇವೆ ಎಂದು ಕೆಟಿಆರ್ ಹೇಳಿದ್ದಾರೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಕಳೆದ ಎರಡು ದಶಕಗಳಿಂದ ಟಿಆರ್‌ಎಸ್ ಅನ್ನು ನಡೆಸುತ್ತಿದ್ದಾರೆ. ಆದರೆ ಪಕ್ಷವು ಡಿಜಿಟಲ್ ಮಾಧ್ಯಮವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅದಕ್ಕಾಗಿಯೇ ಮುಂಬರುವ ಚುನಾವಣೆಯಲ್ಲಿ ಐ-ಪಿಎಸಿ ಟಿಆರ್‌ಎಸ್ ಪಕ್ಷಕ್ಕೆ ಸಹಾಯ ಮಾಡಲಿದೆ ಎಂದು ಟಿಆರ್‌ಎಸ್ ಕಾರ್ಯಾಧ್ಯಕ್ಷರು ಹೇಳಿದರು.
ಇದನ್ನೂ ಓದಿ: ಟಿಡಿಪಿ, ಜೆಡಿಎಸ್, ಟಿಆರ್‌ಎಸ್ ಹೊರಗಿಟ್ಟು ಜಂಟಿ ಹೇಳಿಕೆ ನೀಡಿದ ವಿರೋಧ ಪಕ್ಷಗಳ ಒಕ್ಕೂಟ!
ಈ ನಡೆಯನ್ನು ಟೀಕಿಸಿರುವ ಬಿಜೆಪಿ, ಎರಡು ಪಕ್ಷಗಳ ದ್ವಂದ್ವ ನೀತಿ ಬಯಲಾಗಿದೆ. ಐ-ಪಿಎಸಿ ರಾಜ್ಯದಲ್ಲಿ ಟಿಆರ್‌ಎಸ್‌ಗಾಗಿ ಕೆಲಸ ಮಾಡುತ್ತದೆ. ಆದರೆ ಪ್ರಶಾಂತ್ ಕಿಶೋರ್ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನಾಯಕರಾಗಿ ಕೆಲಸ ಮಾಡುತ್ತಾರೆ. ಈ ದ್ವಂದ್ವ ನೀತಿಯನ್ನು ಜನರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದೆ.