ETV Bharat / bharat

ಇಂದು ಅಥವಾ ನಾಳೆಯಿಂದ ಕೋವಿಡ್​ ಲಸಿಕೆ ಸಾಗಾಟ ಆರಂಭ

author img

By

Published : Jan 7, 2021, 2:28 PM IST

Updated : Jan 7, 2021, 2:54 PM IST

Union Health Minister Dr. Harsh Vardhan
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

14:25 January 07

ನಾಳೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ಲಸಿಕೆಯ ಡ್ರೈ ರನ್ ನಡೆಯಲಿದ್ದು, ಇಂದು ಅಥವಾ ನಾಳೆಯಿಂದ ಕೋವಿಡ್​ ಲಸಿಕೆಗಳ ಸಾಗಾಟ ಆರಂಭವಾಗಲಿದೆ.

  • Transportation of COVID19 vaccine to begin by today or tomorrow. Govt has allowed passenger aircraft to transport vaccines. Pune will be central hub from where vaccine distribution will take place. 41 destinations across the country finalised for delivery of vaccines:Govt sources

    — ANI (@ANI) January 7, 2021 " class="align-text-top noRightClick twitterSection" data=" ">

ನವದೆಹಲಿ: ಇಂದು ಅಥವಾ ನಾಳೆಯಿಂದ ಕೋವಿಡ್​ ಲಸಿಕೆ ಸಾಗಾಟ ಆರಂಭವಾಗಲಿದ್ದು, ಲಸಿಕೆಗಳನ್ನು ಸಾಗಿಸಲು ಪ್ರಯಾಣಿಕರ ವಿಮಾನಗಳಿಗೆ ಅವಕಾಶ ನೀಡಲಾಗಿದೆ ಎಂದು ಸರ್ಕಾರಿ ಮೂಲಗಳಿಂದ ಮಾಹಿತಿ ದೊರೆತಿದೆ.  

ಲಸಿಕೆ ವಿತರಣೆಯ ಕೇಂದ್ರ ಮಹಾರಾಷ್ಟ್ರದ ಪುಣೆ ಆಗಲಿದ್ದು, ದೇಶದಾದ್ಯಂತ 41 ಪ್ರದೇಶಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ. ಉತ್ತರ ಭಾರತಕ್ಕೆ ದೆಹಲಿ ಮತ್ತು ಕರ್ನಾಲ್ ಮಿನಿ ಹಬ್‌ ಆಗಲಿದ್ದು, ಪೂರ್ವ ಹಾಗೂ ಈಶಾನ್ಯ ಭಾರತದ ಪ್ರದೇಶಗಳಿಗೆ ಕೋಲ್ಕತ್ತಾ, ದಕ್ಷಿಣ ಭಾರತಕ್ಕೆ ಚೆನ್ನೈ ಮತ್ತು ಹೈದರಾಬಾದ್ ಲಸಿಕೆ ವಿತರಣೆಯ ಮಿನಿ ಹಬ್ ಆಗಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.  

ದೇಶಾದ್ಯಂತ ಡ್ರೈ ರನ್:  

ಇನ್ನು ನಾಳೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ಲಸಿಕೆಯ ಡ್ರೈ ರನ್ ನಡೆಯಲಿದೆ. 4 ರಾಜ್ಯಗಳಲ್ಲಿ ನಡೆದ ಡ್ರೈ ರನ್ ಪರಿಶೀಲಿಸಿ ನಾವು ಸುಧಾರಣೆಗಳನ್ನು ಮಾಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.  

ಮಹಾರಾಷ್ಟ್ರ, ಕೇರಳ ಮತ್ತು ಛತ್ತೀಸ್​ಗಢದಲ್ಲಿ ಇತ್ತೀಚೆಗೆ ಕೊರೊನಾ ಪ್ರಕರಣಗಳಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ನಾವು ಮುನ್ನೆಚ್ಚರಿಕೆಗಳನ್ನು ಮರೆಯಬಾರದು ಹಾಗೂ ಕೋವಿಡ್​ ವಿರುದ್ಧದ ಹೋರಾಟವನ್ನು ಮುಂದುವರೆಸಬೇಕು. ಕೊರೊನಾ ಲಸಿಕೆಗಳಾದ 'ಕೋವಿಶೀಲ್ಡ್' ಮತ್ತು 'ಕೋವಾಕ್ಸಿನ್' ದೇಶದಲ್ಲಿ ಲಭ್ಯವಾಗುತ್ತಿದೆ. ಈ ಬಗ್ಗೆ ಯಾವುದೇ ತಪ್ಪು ಮಾಹಿತಿಯ ಅಭಿಯಾನ ಯಶಸ್ವಿಯಾಗದಂತೆ ನಾವು ತಡೆಯಬೇಕು ಎಂದು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಜೊತೆಯಲ್ಲಿನ ಸಭೆಯಲ್ಲಿ ಹರ್ಷವರ್ಧನ್ ಹೇಳಿದ್ದಾರೆ.

Last Updated : Jan 7, 2021, 2:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.