ರುದ್ರಪುರ (ಉತ್ತರಾಖಂಡ) : ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಸಿರ್ಸಾ ಗಡಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗುರುದ್ವಾರಕ್ಕೆ ಹೋಗುತ್ತಿದ್ದ ಭಕ್ತರ ಟ್ರ್ಯಾಕ್ಟರ್ ಅಪಘಾತಕ್ಕೊಳಗಾಗಿ 6 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಹಾಗೆ ಹಲವರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುಪಿ ಮತ್ತು ಉತ್ತರಾಖಂಡ ಗಡಿಯ ಸಿರ್ಸಾ ಹೊರಠಾಣೆ ಬಳಿ ಭಕ್ತರು ತುಂಬಿದ್ದ ಟ್ರಾಕ್ಟರ್ ಟ್ರಾಲಿಗೆ ವಾಹನ ಡಿಕ್ಕಿ ಹೊಡೆದಿದೆ. ಈ ಘರ್ಷಣೆ ಎಷ್ಟು ಭೀಕರವಾಗಿತ್ತು ಎಂದರೆ ಟ್ರಾಲಿ ಪಲ್ಟಿಯಾಗಿದೆ. ಸಿರ್ಸಾ ಹೊರಠಾಣೆ ಪೊಲೀಸರು ದಾರಿಹೋಕರ ಸಹಾಯದಿಂದ ಗಾಯಾಳುಗಳನ್ನು ಬಹೇದಿ, ಕಿಚ್ಚಾ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ರುದ್ರಪುರ ಜಿಲ್ಲಾಸ್ಪತ್ರೆಯಲ್ಲಿ 17 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆ ಕೆಲವರನ್ನು ಸುಶೀಲಾ ತಿವಾರಿ ಆಸ್ಪತ್ರೆ ಹಲ್ದ್ವಾನಿಗೂ ದಾಖಲಿಸಲಾಗಿದೆ. ಇದಲ್ಲದೆ, ಗಾಯಾಳುಗಳನ್ನು ಬಹೇರಿ ಆಸ್ಪತ್ರೆಗೆ ರವಾನಿಲಾಗಿದೆ.
ಟ್ರ್ಯಾಕ್ಟರ್ ಟ್ರಾಲಿಯಲ್ಲಿ 40 ಕ್ಕೂ ಹೆಚ್ಚು ಭಕ್ತರು ಇದ್ದರು ಎಂದು ಹೇಳಲಾಗುತ್ತಿದೆ. ಘಟನೆಯ ಮಾಹಿತಿಯ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್, ಎಡಿಎಂ ಕೂಡ ಜಿಲ್ಲಾಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.
ಇದನ್ನೂ ಓದಿ: ಬುಡುಬುಡಿಕೆ ದಾಸನಿಂದ ಮೋಸ: ಚಿನ್ನಾಭರಣ ಕಳೆದುಕೊಂಡ ದಂಪತಿ