ETV Bharat / bharat

ಲೈಂಗಿಕ ಉದ್ದೇಶವಿಲ್ಲದೆ ಮಗುವಿನ ಕೆನ್ನೆಗಳನ್ನು ಮುಟ್ಟುವುದು ಅಪರಾಧವಲ್ಲ: ಬಾಂಬೆ ಹೈಕೋರ್ಟ್ - ಲೈಂಗಿಕ ಅಪರಾಧ

ಲೈಂಗಿಕ ಉದ್ದೇಶವಿಲ್ಲದೆ ಮಗುವಿನ ಕೆನ್ನೆಗಳನ್ನು ಮುಟ್ಟುವುದು ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬಾಂಬೆ ಹೈಕೋರ್ಟ್
Mumbai Highcourt
author img

By

Published : Aug 29, 2021, 4:00 PM IST

ಮುಂಬೈ: ಲೈಂಗಿಕ ಉದ್ದೇಶವಿಲ್ಲದೆ ಮಗುವಿನ ಕೆನ್ನೆಗಳನ್ನು ಮುಟ್ಟುವುದು ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಬಂಧಿತನಾಗಿದ್ದ 46 ವರ್ಷದ ವ್ಯಕ್ತಿಗೆ ಜಾಮೀನು ನೀಡುವಾಗ ನ್ಯಾಯಮೂರ್ತಿ ಸಂದೀಪ್ ಶಿಂಧೆಯವರಿದ್ದ ಏಕಸದಸ್ಯ ಪೀಠ ಈ ರೀತಿ ಹೇಳಿತು.

ಲೈಂಗಿಕ ಅಪರಾಧಗಳಿಂದ ‘ಮಕ್ಕಳ ರಕ್ಷಣಾ ಕಾಯಿದೆಯ ಸೆಕ್ಷನ್​ 7’ ರ ಅಡಿ, ಲೈಂಗಿಕ ಉದ್ದೇಶವಿಲ್ಲದೆ ಮಕ್ಕಳ ಕೆನ್ನೆಗಳನ್ನು ಮುಟ್ಟುವುದು ಅಪರಾಧವಲ್ಲ ಎಂದು ನ್ಯಾಯಾಲಯ ತಿಳಿಸಿದೆ. ವ್ಯಕ್ತಿಯು ಲೈಂಗಿಕ ಉದ್ದೇಶದಿಂದ ಬಾಲಕಿಯ ಕೆನ್ನೆ ಮುಟ್ಟಿಲ್ಲ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆತನಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿ ವ್ಯಕ್ತಿಗೆ ಜಾಮೀನು ನೀಡುವ ವೇಳೆ ಈ ಅಭಿಪ್ರಾಯ ವ್ಯಕ್ತವಾಗಿದ್ದು, ಇತರೆ ವಿಚಾರಗಳಿಗೆ ಈ ಅಭಿಪ್ರಾಯ ಅನ್ವಯಿಸಲ್ಲ ಎಂದು ಇದೇ ವೇಳೆ ಕೋರ್ಟ್ ಸ್ಪಷ್ಟಪಡಿಸಿದೆ.

ಕೆಲ ದಿನಗಳ ಹಿಂದೆ ಉಲ್ಲಾ ಎಂಬಾತ ಮಾಂಸದ ಅಂಗಡಿಯೊಳಗೆ ಬಾಲಕಿಯನ್ನು ಕರೆದೊಯ್ದು ಅವಳ ಕೆನ್ನೆಯನ್ನು ಮುಟ್ಟಿದ್ದ. ನಂತರ ಆಕೆಯ ಬಟ್ಟೆ​ ಬಿಚ್ಚಿದ್ದಾನೆ ಎನ್ನಲಾಗಿದೆ. ಆರೋಪಿ ಬಾಲಕಿಯನ್ನು ಕರೆದುಕೊಂಡು ಹೋಗುವುದನ್ನು ನೋಡಿದ ಮಹಿಳೆ ಹಿಂಬಾಲಿಸಿ ಹೋಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಇದನ್ನೂ ಓದಿ: ಪತಿ ಜತೆಗಿನ ಸಂಭೋಗವು ಬಲವಂತದಿಂದಾದರೂ, ಒಪ್ಪಿಗೆಯಿಂದಾದರೂ ಅಪರಾಧವಲ್ಲ: ಛತ್ತೀಸ್​ಗಢ ಹೈಕೋರ್ಟ್

ಪೊಲೀಸರು ಪೊಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿ ಮುಂಬೈನ ತಲೋಜಾ ಜೈಲಿಗಟ್ಟಿದ್ದರು. ತನ್ನ ಪ್ರತಿಸ್ಪರ್ಧಿಗಳಿಂದ ಈ ಪ್ರಕರಣದಲ್ಲಿ ನಾನು ತಪ್ಪಾಗಿ ನಡೆದುಕೊಂಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಆತ ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.