ನವದೆಹಲಿ: ಟೆಸ್ಟ್ ಮಾದರಿಯ ಕ್ರಿಕೆಟ್‌ನಲ್ಲಿ ಸಿಕ್ಸರ್ ಬಾರಿಸುವುದು ಅಷ್ಟು ಸುಲಭವಲ್ಲ. ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚಾಗಿ ಆಟಗಾರರು ನಿಧಾನವಾಗಿ ಆಡುತ್ತಾರೆ ಮತ್ತು ತಮ್ಮ ವಿಕೆಟ್ ಕಾಯ್ದುಕೊಂಡು ಬಹಳ ಹೊತ್ತು ಕ್ರೀಸ್‌ನಲ್ಲಿ ಉಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇದೇ ಕಾರಣದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ತುಂಬಾ ಕಡಿಮೆ ಸಂಖ್ಯೆಯ ಸಿಕ್ಸರ್ ಬಾರಿಸಲಾಗುತ್ತದೆ. ಟೆಸ್ಟ್ ಪಂದ್ಯದಲ್ಲಿ ವೇಗವಾಗಿ ರನ್ ಗಳಿಸುವ ಆತುರ ಇರುವುದಿಲ್ಲ. ಹೀಗಾಗಿ ಆಟಗಾರ ಕ್ರೀಸ್‌ನಲ್ಲಿ ಆರಾಮವಾಗಿ ಆಡುತ್ತಾನೆ.
ಆದರೆ ಯಾವುದೇ ಆಟಗಾರನಿಗಾದರೂ ತಾನು ಏನಾದರೂ ವಿಶೇಷ ಸಾಧನೆ ಮಾಡಬೇಕೆಂಬ ಹಂಬಲ ಇದ್ದೇ ಇರುತ್ತದೆ. ಇದರಿಂದಾಗಿ ಕೆಲವು ಬ್ಯಾಟ್ಸ್‌ಮನ್‌ಗಳು ತಮ್ಮದೇ ಶೈಲಿಯಲ್ಲಿ ಆಡುತ್ತಾರೆ ಮತ್ತು ಮೈದಾನದಲ್ಲಿ ಸಾಕಷ್ಟು ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುತ್ತಾರೆ. ಭಾರತದಲ್ಲಿ ಕ್ರಿಕೆಟ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಆದ್ದರಿಂದಲೇ ಕ್ರಿಕೆಟ್‌ನ ಯಾವುದೇ ಸ್ವರೂಪದಲ್ಲಿ, ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ಫಾರ್ಮ್‌ನಲ್ಲಿ ನೋಡಲು ಇಷ್ಟಪಡುತ್ತಾರೆ. ಜನಪ್ರಿಯ ಆಟಗಾರನು ಮೈದಾನದಲ್ಲಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದಾಗ ಅವರ ಅಭಿಮಾನಿಗಳು ತುಂಬಾ ಸಂತೋಷಪಡುತ್ತಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿ ಸಾಧನೆ ಮಾಡಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ. ಈ ಪಟ್ಟಿಯಲ್ಲಿ ಯಾವ ಟಾಪ್ 5 ಭಾರತೀಯ ಬ್ಯಾಟ್ಸ್‌ಮನ್‌ಗಳಿದ್ದಾರೆ.
1. ಟೀಂ ಇಂಡಿಯಾದ ಮಾಜಿ ಅನುಭವಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ಸಿಕ್ಸರ್ ಬಾರಿಸಿದ ಮೊದಲ ಆಟಗಾರರಾಗಿದ್ದಾರೆ. ಸೆಹ್ವಾಗ್ 2001 ರಿಂದ 2013 ರವರೆಗೆ ತಮ್ಮ ಕ್ರಿಕೆಟ್ ಜೀವನದಲ್ಲಿ ಒಟ್ಟು 104 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ 180 ಇನ್ನಿಂಗ್ಸ್‌ಗಳಲ್ಲಿ ಅವರು 91 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. 49.34ರ ಸರಾಸರಿಯಲ್ಲಿ 8,586 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಇದರೊಂದಿಗೆ ಸೆಹ್ವಾಗ್ ತ್ರಿಶತಕ ಬಾರಿಸಿದ ದಾಖಲೆ ಬರೆದಿದ್ದಾರೆ. 2008 ರಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮಾಡಿದ 319 ರನ್ ಅವರ ಹೆಚ್ಚಿನ ಸ್ಕೋರ್ ಆಗಿದೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 1233 ಬೌಂಡರಿಗಳನ್ನು ಸಹ ಬಾರಿಸಿದ್ದಾರೆ.
2. ಭಾರತದ ಮಾಜಿ ಹಿರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ 2005 ರಿಂದ 2014 ರವರೆಗೆ ಕ್ರಿಕೆಟ್ ಆಡಿದ್ದಾರೆ. ಇವರು 90 ಟೆಸ್ಟ್ ಪಂದ್ಯಗಳ 144 ಇನ್ನಿಂಗ್ಸ್‌ಗಳಲ್ಲಿ 78 ಸಿಕ್ಸರ್ ಮತ್ತು 544 ಬೌಂಡರಿಗಳನ್ನು ಬಾರಿಸಿದ್ದಾರೆ. ಅವರು 38.09 ಸರಾಸರಿಯಲ್ಲಿ 4876 ರನ್ ಗಳಿಸಿದ್ದಾರೆ. ಇದರೊಂದಿಗೆ 6 ಶತಕಗಳನ್ನೂ ದಾಖಲಿಸಿದ್ದಾರೆ. ಧೋನಿ ಅವರ ಗರಿಷ್ಠ ಸ್ಕೋರ್ 224. ಏಕದಿನದಲ್ಲಿ ಭಾರತದಿಂದ ಅತಿ ಹೆಚ್ಚು 197 ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಧೋನಿ. ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ ಮಹಿ.
3. ಟೀಂ ಇಂಡಿಯಾದ ಮಾಸ್ಟರ್ ಬ್ಲಾಸ್ಟರ್ ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ 1989 ರಿಂದ 2013 ರವರೆಗೆ ಕ್ರಿಕೆಟ್ ಆಡಿದ್ದಾರೆ. ಅವರು ವೃತ್ತಿಜೀವನದಲ್ಲಿ, 200 ಟೆಸ್ಟ್ ಪಂದ್ಯಗಳ 329 ಇನ್ನಿಂಗ್ಸ್‌ಗಳಲ್ಲಿ 69 ಸಿಕ್ಸರ್‌ಗಳು ಮತ್ತು 2058 ಕ್ಕೂ ಹೆಚ್ಚು ಬೌಂಡರಿಗಳನ್ನು ಹೊಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 15921 ರನ್ ಗಳಿಸಿದ ದಾಖಲೆ ಸಚಿನ್ ಹೆಸರಿನಲ್ಲಿದೆ. ಇದರೊಂದಿಗೆ ಟೆಸ್ಟ್‌ನಲ್ಲಿ ಅವರು 51 ಶತಕ ಬಾರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ 248 ರನ್‌ಗಳ ಅತಿ ಹೆಚ್ಚಿನ ಸ್ಕೋರ್ ಮಾಡಿದ್ದಾರೆ.
4. ಭಾರತ ತಂಡದ ನಾಯಕ ರೋಹಿತ್ ಶರ್ಮಾ 2013 ರಿಂದ 2023 ರವರೆಗೆ ಕ್ರಿಕೆಟ್ ಆಡುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ರೋಹಿತ್ 47 ಟೆಸ್ಟ್ ಪಂದ್ಯಗಳ 80 ಇನ್ನಿಂಗ್ಸ್‌ಗಳಲ್ಲಿ 68 ಸಿಕ್ಸರ್ ಮತ್ತು 355 ಬೌಂಡರಿಗಳನ್ನು ಬಾರಿಸಿದ್ದಾರೆ. ರೋಹಿತ್ ಅವರ ಗರಿಷ್ಠ ಸ್ಕೋರ್ 3,320 ರನ್. ಇದೀಗ ರೋಹಿತ್ ಶರ್ಮಾ ಅವರು ಬಾರ್ಡರ್ ಗವಾಸ್ಕರ್ ಟ್ರೋಫಿ 2023 ರಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದಾರೆ. ಈ ಟೂರ್ನಿಯ ಮೂರನೇ ಟೆಸ್ಟ್ ಪಂದ್ಯ ಇಂದೋರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ.
5. ಭಾರತೀಯ ತಂಡದ ಅನುಭವಿ ಮತ್ತು ಮಾಜಿ ಆಲ್‌ರೌಂಡರ್ ಕಪಿಲ್ ದೇವ್ ಅವರ ನಾಯಕತ್ವದಲ್ಲಿ, ಟೀಮ್ ಇಂಡಿಯಾ 25 ಜೂನ್ 1983 ರಂದು ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಇದು ಅವರ ದೊಡ್ಡ ಸಾಧನೆಯಾಗಿದೆ. ಅವರು 1978 ರಿಂದ 1994 ರವರೆಗೆ ಕ್ರಿಕೆಟ್ ಆಡಿದರು. ಅವರ ವೃತ್ತಿಜೀವನದಲ್ಲಿ, ಅವರು 131 ಟೆಸ್ಟ್ ಪಂದ್ಯಗಳ 184 ಇನ್ನಿಂಗ್ಸ್‌ಗಳಲ್ಲಿ 61 ಸಿಕ್ಸರ್‌ಗಳು ಮತ್ತು 557 ಬೌಂಡರಿಗಳನ್ನು ಹೊಡೆದಿದ್ದಾರೆ. ಟೆಸ್ಟ್‌ನಲ್ಲಿ ಅವರು 31.05 ಸರಾಸರಿಯಲ್ಲಿ 5248 ರನ್ ಗಳಿಸಿದ್ದಾರೆ. ಕಪಿಲ್ ದೇವ್ ಟೆಸ್ಟ್ ನಲ್ಲಿ 8 ಶತಕ ಸಿಡಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 163 ರನ್.
ಇದನ್ನೂ ಓದಿ: ಕಮಿನ್ಸ್ ಬೌಲಿಂಗ್ ಮರೆತಿದ್ದಾರೆ: ಆಸೀಸ್ ನಾಯಕನಿಗೆ ಬಾರ್ಡರ್ ಚಾಟಿ