ETV Bharat / bharat

ನಕಲಿ 'ಟೋಕನ್​' ನಂಬಿ ಮೋಸ ಹೋದ ಮತದಾರರು.. ಬೆಚ್ಚಿಬಿದ್ದು ಅಂಗಡಿ​​ ಬಂದ್​ ಮಾಡಿದ ಮಾಲೀಕ!

ಮತದಾರರಿಗೆ ಮೋಸ ಮಾಡಿರುವ ಅಭ್ಯರ್ಥಿಯೋರ್ವ 2 ಸಾವಿರ ರೂ. ನಕಲಿ ಟೋಕನ್ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

author img

By

Published : Apr 8, 2021, 8:20 PM IST

'Token for Cash'
'Token for Cash'

ಚೆನ್ನೈ: ತಮಿಳುನಾಡಿನ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಎರಡು ದಿನಗಳ ಹಿಂದೆ ಮತದಾನವಾಗಿದ್ದು, ಇದರ ಮಧ್ಯೆ ನಕಲಿ ಕಿರಾಣಿ ಟೋಕನ್​​ಗಳೊಂದಿಗೆ ಮತದಾರರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಂಜಾವೂರು ಜಿಲ್ಲೆಯ ಕುಂಬಕೋಣಂನಲ್ಲಿರುವ ಕಿರಾಣಿ ಏಜೆನ್ಸಿ ಮಾಲೀಕ ಇದರಿಂದ ದಿಢೀರ್​ ಆಗಿ ಆಘಾತಕ್ಕೊಳಗಾಗಿದ್ದಾರೆ. ಕೈಯಲ್ಲಿ ನಕಲಿ ಟೋಕನ್​​ ಹಿಡಿದು ಅನೇಕರು ಹಣ ತೆಗೆದುಕೊಂಡು ಹೋಗಲು ಅಂಗಡಿಯತ್ತ ಬರುತ್ತಿದ್ದಂತೆ ಅದರ ಮಾಹಿತಿ ಇಲ್ಲದೇ ಮಾಲೀಕ ಶಾಪ್​ ಮುಚ್ಚಿರುವ ಘಟನೆ ನಡೆದಿದೆ.

ಏನಿದು ಘಟನೆ!?

ತಮಿಳುನಾಡು ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಯೊಬ್ಬ ಮತದಾರರಿಗೆ 2 ಸಾವಿರ ರೂ. ನಕಲಿ ಟೋಕನ್​ ನೀಡಿದ್ದಾನೆ. ತನಗೆ ವೋಟ್​ ಹಾಕಿದರೆ ದಿನಸಿ ಅಂಗಡಿಯಲ್ಲಿ 2 ಸಾವಿರ ರೂ. ನೀಡಲಾಗುತ್ತದೆ ಎಂದು ನಂಬಿಸಿದ್ದಾನೆ. ಹೀಗಾಗಿ ಮತದಾನ ಮಾಡಿರುವ ಅನೇಕರು ಕೈಯಲ್ಲಿ ಟೋಕನ್​ ಹಿಡಿದು, ದಿನಸಿ ಅಂಗಡಿಯತ್ತ ಲಗ್ಗೆ ಹಾಕಿದ್ದಾರೆ. ಆದರೆ, ಮಾಲೀಕ ಶೇಖ್​ ಮೊಹಮ್ಮದ್​ ತಮ್ಮೊಂದಿಗೆ ಈ ರೀತಿಯ ಯಾವುದೇ ಒಪ್ಪಂದವಾಗಿಲ್ಲ ಎಂದು ಹೇಳಿದ್ದಾನೆ. ಆದರೆ, ಅಂಗಡಿಯತ್ತ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ತಾತ್ಕಾಲಿಕವಾಗಿ ಶಾಪ್​ ಬಂದ್​​ ಮಾಡಿದ್ದಾನೆ.

ಇದನ್ನೂ ಓದಿ: ನಕ್ಸಲ್​ರಿಂದ ಅಪಹರಣಗೊಂಡಿದ್ದ ಕೋಬ್ರಾ ಜವಾನ್ ರಿಲೀಸ್​.. ಸಂತಸ ವ್ಯಕ್ತಪಡಿಸಿದ ಪತ್ನಿ!

ಕಳೆದ 25 ವರ್ಷಗಳಿಂದ ಮೊಹಮ್ಮದ್​ ಅಂಗಡಿ ನಡೆಸುತ್ತಿದ್ದು, ಮಂಗಳವಾರ ಕೂಡ ಎಂದಿನಂತೆ ಶಾಪ್​ ಓಪನ್​ ಮಾಡಿದ್ದಾರೆ. ಅನೇಕ ಗ್ರಾಹಕರು ಕೈಯಲ್ಲಿ ಟೋಕನ್​ ಹಿಡಿದು ಅಂಗಡಿಯತ್ತ ದಾಪುಗಾಲು ಹಾಕಿದ್ದಾರೆ. ವಿಶೇಷವೆಂದರೆ ಟೋಕನ್​ ಮೇಲೆ ಕಿರಾಣಿ ಅಂಗಡಿ ಹೆಸರು ಹಾಗೂ ವಿಳಾಸ ನೀಡಲಾಗಿತ್ತು. ಇದರ ಜೊತೆಗೆ 2000 ಸಾವಿರ ರೂ. ಉಚಿತವಾಗಿ ನೀಡಲಾಗುವುದು ಎಂದು ಬರೆಯಲಾಗಿತ್ತು. ಆದರೆ ಈ ಟೋಕನ್​ ನೀಡಿರುವುದು ಯಾರು ಎಂಬ ಮಾಹಿತಿ ಮಾತ್ರ ಬಹಿರಂಗಗೊಂಡಿಲ್ಲ.

ತಮಿಳುನಾಡಿನ 234 ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆದಿದ್ದು, ವೋಟ್​ ಮಾಡಿರುವ ಅನೇಕರು ದಿನಸಿ ಪಡೆದುಕೊಳ್ಳಲು ಶಾಪ್​ನತ್ತ ದಾಪುಗಾಲು ಹಾಕಿದಾಗ ಶಾಕ್​​ಗೊಳಗಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.