ತಿರುಚ್ಚಿ(ತಮಿಳುನಾಡು): ಜ್ಯೂಸ್ ಎಂದುಕೊಂಡು ಸೀಮೆಎಣ್ಣೆ ಕುಡಿದ ಬಾಲಕನೋರ್ವ ಎರಡು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಎರಡೂವರೆ ವರ್ಷದ ಬಾಲಕ ಸಾವನ್ನಪ್ಪಿದ್ದು, ತಿರುಚ್ಚಿಯಲ್ಲಿ ಈ ದುರ್ಘಟನೆ ನಡೆದಿದೆ. ಜನವರಿ 3ರಂದು ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕ ಮನೆಯಲ್ಲಿನ ಬಾಟಲ್ನಲ್ಲಿ ತುಂಬಿಟ್ಟಿದ್ದ ಸೀಮೆಎಣ್ಣೆಯನ್ನ ಕುಡಿದಿದ್ದಾನೆ. ಇದಾದ ಬಳಿಕ ಆತನಿಗೆ ಹೊಟ್ಟೆನೋವು ಹಾಗೂ ವಾಂತಿ ಶುರುವಾಗಿದೆ.
ಪೋಷಕರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.