ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಬೆಂಗಳೂರು ನಗರದ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಒಂದು ಲೀಟರ್ಗೆ 111.11 ರೂಪಾಯಿಯಂತೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಬೆಲೆ ಒಂದು ಲೀಟರ್ಗೆ 94.81 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ರಾಜ್ಯದ ಪ್ರಮುಖ ಜಿಲ್ಲೆಗಳ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಇಂತಿವೆ.
ಬೆಂಗಳೂರಲ್ಲಿ ಸ್ಪೀಡ್ ಪೆಟ್ರೋಲ್ಗೆ 114.06 ರೂ. ನಿಗದಿಯಾಗಿದೆ. ಇನ್ನು ಹುಬ್ಬಳ್ಳಿಯಲ್ಲಿ ಪೆಟ್ರೋಲ್ 110.81 ರೂ ಇದ್ದು, ಡೀಸೆಲ್ 94.56. ರೂ ಇದೆ. ಮೈಸೂರಿನಲ್ಲಿ ಪೆಟ್ರೋಲ್ 110.59 ರೂ, ಡೀಸೆಲ್ 94.34 ರೂ. ಇದ್ದು, ಯಥಾಸ್ಥಿತಿ ಇದೆ.
ಮಂಗಳೂರಲ್ಲಿ ಪೆಟ್ರೋಲ್ 110.29 ರೂ. ಮತ್ತು ಡಿಸೇಲ್ 94.03 ರೂ. ಮತ್ತು ಬೆಳಗಾವಿಯಲ್ಲಿ ಪೆಟ್ರೋಲ್ 111 ರೂ, ಡೀಸೆಲ್ 95 ರೂ. ಮತ್ತು ದಾವಣಗೆರೆಯಲ್ಲಿ ಪೆಟ್ರೋಲ್ 112.82 ರೂ, ಡಿಸೇಲ್ - 96.54 ರೂ ಇದೆ.