ಲಖನೌ(ಉತ್ತರಪ್ರದೇಶ): ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಚುನಾವಣಾ ಯುದ್ಧಕ್ಕೆ ಇಂದು ಅಂತಿಮ ತೆರೆ ಬೀಳಲಿದೆ. ಇವತ್ತು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ಸೇರಿ ಸುಮಾರು 54 ಕ್ಷೇತ್ರಗಳಲ್ಲಿ ಜನ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಫೆಬ್ರವರಿ 10 ರಂದು ಪ್ರಾರಂಭವಾಗಿ ಮಾರ್ಚ್ 7ರಂದು 7ನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿಯ ಹಿರಿಯ ನಾಯಕರಿಂದ ಮತದಾರರನ್ನು ಸೆಳೆಯಲು ಎಲ್ಲ ಪ್ರಯತ್ನ ಮಾಡಿದ್ದಾರೆ. ಕೊನೆ ಹಂತದ ಪ್ರಚಾರ ಶನಿವಾರವೇ ಕೊನೆಗೊಂಡಿದ್ದು, ಇದು ಅಂತಿಮ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದೆ. ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿದ್ದರೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಉರುಳಿಸಲು ಹವಣಿಸುತ್ತಿವೆ.
ಏಳನೇ ಹಂತದ ಚುನಾವಣೆಯಲ್ಲಿ 54 ಸ್ಥಾನಗಳಿಗಾಗಿ ಯುಪಿಯ 9 ಜಿಲ್ಲೆಗಳಾದ ಅಜಂಗಢ, ಮೌ, ಗಾಜಿಪುರ, ಜಾನ್‌ಪುರ್, ವಾರಣಾಸಿ, ಮಿರ್ಜಾಪುರ, ಗಾಜಿಪುರ, ಚಂದೌಲಿ ಮತ್ತು ಸೋನ್‌ಭದ್ರದಲ್ಲಿ ಮತದಾನ ನಡೆಯುತ್ತಿದೆ. ಏಳನೇ ಹಂತದ ಒಟ್ಟು 607 ಅಭ್ಯರ್ಥಿಗಳ ಪೈಕಿ 170 (ಶೇ28) ಜನರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಜೊತೆಗೆ 131 (ಶೇ22) ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.
ಇಂದು ನಡೆಯುತ್ತಿರುವ ಕೊನೆ ಹಂತದ ಚುನಾವಣೆ ಭಾರಿ ಮಹತ್ವ ಪಡೆದುಕೊಂಡಿದೆ. ಪ್ರತಿಷ್ಠಿತರ ಕ್ಷೇತ್ರಗಳು ಇಂದಿನ ಮತದಾನದ ಪ್ರಮುಖ ಹೈಲೆಟ್ಸ್ ಆಗಿದೆ.
ಇದನ್ನು ಓದಿ:ಯಶಸ್ವಿ ಆಪರೇಷನ್ ಗಂಗಾದಿಂದ ಭಾರತದ ವರ್ಚಸ್ಸು ಹೆಚ್ಚಳ: ದೊಡ್ಡ ರಾಷ್ಟ್ರಗಳಿಗೆ ಇನ್ನೂ ಸವಾಲು'