ETV Bharat / bharat

ಕೋವಿಡ್​ ಹೋರಾಟಕ್ಕೆ ಹಣ ದೇಣಿಗೆ ನೀಡಿದ ಬಾಲಕ.. ವಿಶೇಷ ಗಿಫ್ಟ್​​ ನೀಡಿದ ಸಿಎಂ ಸ್ಟಾಲಿನ್​! - ಸೈಕಲ್​ ಗಿಫ್ಟ್ ನೀಡಿದ ಸ್ಟಾಲಿನ್

ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದ ಬಾಲಕನೊಬ್ಬನಿಗೆ ಮುಖ್ಯಮಂತ್ರಿ ಸ್ಟಾಲಿನ್ ಇದೀಗ ವಿಶೇಷ ಗಿಫ್ಟ್ ನೀಡಿ, ಆತನ ಮನಸ್ಸು ಗೆದ್ದಿದ್ದಾರೆ.

TN CM gifts cycle
TN CM gifts cycle
author img

By

Published : May 10, 2021, 10:48 PM IST

ಮಧುರೈ(ತಮಿಳುನಾಡು): ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇಡೀ ದೇಶವೇ ಇದರ ವಿರುದ್ಧ ಹೋರಾಟ ನಡೆಸುತ್ತಿದೆ. ಇದರ ಮಧ್ಯೆ ಪಿಎಂ ಹಾಗೂ ಸಿಎಂ ಪರಿಹಾರ ನಿಧಿಗಳಿಗೆ ಅನೇಕರು ತಮ್ಮ ಕೈಲಾದ ದೇಣಿಗೆ ನೀಡ್ತಿದ್ದಾರೆ.

ತಮಿಳುನಾಡಿನ ಸಿಎಂ ಪರಿಹಾರ ನಿಧಿಗೆ ಪುಟ್ಟ ಬಾಲಕನೊಬ್ಬ ಸಾವಿರ ರೂ. ದೇಣಿಗೆ ರೂಪದಲ್ಲಿ ನೀಡಿದ್ದನು. ಜತೆಗೆ ಪತ್ರ ಬರೆದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಈ ಹಣ ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದನು. ಆತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸ್ಟಾಲಿನ್ ಇದೀಗ ಸೈಕಲ್ ಗಿಫ್ಟ್ ನೀಡಿದ್ದಾರೆ. ಜತೆಗೆ ಆತನ ಕಾರ್ಯಕ್ಕೆ ಶಹಬ್ಬಾಸ್​ಗಿರಿ ನೀಡಿದ್ದಾರೆ. ಜತೆಗೆ ಆತನೊಂದಿಗೆ ಫೋನ್​ನಲ್ಲಿ ಮಾತನಾಡಿದ್ದಾರೆಂದು ತಿಳಿದು ಬಂದಿದೆ.

  • ஹரீஸ்வர்மன் என்ற சிறுவன் தனக்கு மிதிவண்டி வாங்குவதற்காக வைத்திருந்த உண்டியல் தொகையை #COVID19 தடுப்பிற்காக முதலமைச்சர் நிவாரண நிதிக்கு அனுப்பிய செய்தி கேட்டு நெகிழ்ந்தேன்.

    இத்தகைய உணர்வே தமிழகத்தின் வலிமை!

    சிறுவனுக்கு மிதிவண்டி வாங்கிக் கொடுத்து தொலைபேசியில் அழைத்து வாழ்த்தினேன் pic.twitter.com/vNtWpj5SCe

    — M.K.Stalin (@mkstalin) May 9, 2021 " class="align-text-top noRightClick twitterSection" data=" ">

ಸೈಕಲ್ ಖರೀದಿ ಮಾಡುವ ಉದ್ದೇಶದಿಂದ ಬಾಲಕ ಪಾಕೆಟ್ ಮನಿ ಸಂಗ್ರಹ ಮಾಡಿದ್ದನು. ಆದರೆ ಕೊರೊನಾ ಹಾವಳಿ ಹೆಚ್ಚಾದ ಕಾರಣ ಅದನ್ನ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದನು. ಇದೀಗ ನೂತನ ಮುಖ್ಯಮಂತ್ರಿ ಸ್ಟಾಲಿನ್ ಟ್ವಿಟರ್​ ಅಕೌಂಟ್​ನಲ್ಲೂ ಇದರ ಬಗ್ಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮದುವೆ ವೇಳೆ ವಧು ಕೇಳಿದ ಲೆಕ್ಕಕ್ಕೆ ಉತ್ತರ ನೀಡದ ವರ.. ಮದುವೆ ಕ್ಯಾನ್ಸಲ್​ ಮಾಡಿಕೊಂಡ ಯುವತಿ!

ತಮಿಳುನಾಡಿನಲ್ಲೂ ಕಳೆದ ಕೆಲ ದಿನಗಳಿಂದ ಸಾವಿರಾರು ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆಯ 28,928 ಸಕ್ರಿಯ ಪ್ರಕರಣ ಕಾಣಿಸಿಕೊಂಡಿದ್ದು, 232 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 14,09,237 ಪ್ರಕರಣಗಳ ಪೈಕಿ ಇದೀಗ 1,52,389 ಸಕ್ರಿಯ ಕೇಸ್​​ಗಳಿದ್ದು, ಇಂದು 20,904 ಜನರು ಡಿಸ್ಚಾರ್ಜ್​ ಆಗಿದ್ದಾರೆ. ಇಂದಿನಿಂದ ತಮಿಳುನಾಡಿನಲ್ಲಿ ಲಾಕ್​ಡೌನ್ ಘೋಷಣೆ ಮಾಡಿ ಆದೇಶ ಸಹ ಹೊರಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.