ಕೋಲ್ಕತ್ತಾ(ಪಶ್ಚಿಮಬಂಗಾಳ): ಪಶ್ಚಿಮಬಂಗಾಳದಲ್ಲಿ ರಾಜಕೀಯ ದ್ವೇಷ ಮತ್ತೆ ಹೊಗೆಯಾಡಿದೆ. ಮುಂದೆ ನಡೆಯಲಿರುವ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ನ ಬೂತ್ ಅಧ್ಯಕ್ಷನ ಮನೆಯನ್ನು ಬಾಂಬ್ ಇಟ್ಟು ಉಡಾಯಿಸಲಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
ಪುರ್ಬಾ ಮೇದಿನಿಪುರದ ಅರ್ಜುನ್ ನಗರ ಪ್ರದೇಶದಲ್ಲಿರುವ ಟಿಎಂಸಿಯ ಬೂತ್ ಅಧ್ಯಕ್ಷ ರಾಜ್‌ಕುಮಾರ್ ಮನ್ನಾ ಅವರ ನಿವಾಸವನ್ನು ನಿನ್ನೆ ರಾತ್ರಿ ಸ್ಫೋಟಿಸಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಇಂದು ಕೊಂಟೈನಲ್ಲಿ ಸಾರ್ವಜನಿಕ ರ್ಯಾಲಿ ನಡೆಸುವುದಕ್ಕೂ ಮೊದಲು ಈ ದುರಂತ ನಡೆದಿದೆ.
ಬಾಂಬ್ ಸ್ಫೋಟಿಸಿದ ರಭಸಕ್ಕೆ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಶವಗಳ ಗುರುತು ಕಾರ್ಯ ನಡೆದಿಲ್ಲ. ಘಟನೆಯಲ್ಲಿ ಇನ್ನಷ್ಟು ಜನರು ಗಾಯಗೊಂಡಿದ್ದಾರೆ.
ಓದಿ: ದಟ್ಟ ಮಂಜಿನಿಂದ ಅವಾಂತರ.. ಮರಕ್ಕೆ ಕಾರು ಡಿಕ್ಕಿಯಾಗಿ ನಾಲ್ವರು ದುರ್ಮರಣ