ETV Bharat / bharat

ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರೆಯುತ್ತೆ: ರಾಕೇಶ್ ಟಿಕಾಯತ್ ಘೋಷಣೆ

ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೆ ರೈತರ ಹೋರಾಟ ಮುಂದುವರೆಯುತ್ತದೆ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಸ್ಪಷ್ಟಪಡಿಸಿದ್ದಾರೆ.

Rakesh Tikait
ಬಿಕೆಯು ನಾಯಕ ರಾಕೇಶ್ ಟಿಕಾಯತ್
author img

By

Published : Apr 22, 2021, 8:13 PM IST

ನವದೆಹಲಿ: ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೂ ರೈತರು ಮನೆಗೆ ಮರಳುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್​ ಹೇಳಿದ್ದಾರೆ.

ರೈತರು ಗುಂಪಿನಲ್ಲಿರುವುದರಿಂದ ಕೊರೊನಾ ಹೆಚ್ಚಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿರುವ ಅವರು, "ರೈತರು ತಮ್ಮ ಮನೆಯಲ್ಲಿದ್ದಾರೆ. ಬೇರೆಲ್ಲಿಗೆ ಹೋಗಬೇಕು, ಕೊರೊನಾ ಇಲ್ಲಿಂದ ಹರಡುತ್ತಿದೆಯೇ, ಕೊರೊನಾ ಲಸಿಕೆಯ ಎರಡನೇ ಡೋಸ್​ ಪಡೆಯಲು ಅನೇಕ ರೈತರು ಹೆಣಗಾಡುತ್ತಿದ್ದಾರೆ. ಇಲ್ಲಿ ಲಸಿಕೆ ಶಿಬಿರ ಸ್ಥಾಪಿಸಲು ನಾವು ಅಧಿಕಾರಿಗಳಿಗೆ ಕೋರಿದ್ದೇವೆ.

ರೈತರು ಇಫ್ತಾರ್‌ನಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನೂ ಟಿಕಾಯತ್​ ಅಲ್ಲಗಳೆದಿದ್ದಾರೆ. ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿ "ಜನರು ಪರಸ್ಪರ ದೂರದಲ್ಲಿ ಕುಳಿತಿದ್ದರು. 50 ಜನ ಸೇರಲು ಸರ್ಕಾರದಿಂದ ಅನುಮತಿ ಇದೆ. 22-35 ಜನರಿದ್ದರು. ಯಾರೂ ಪರಸ್ಪರ ಭೇಟಿಯಾಗಲಿಲ್ಲ, ಯಾರೂ ಕೈಕುಲುಕಲಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.