ಮಾಂಡ್ಲಾ (ಮಧ್ಯಪ್ರದೇಶದ): ಜಿಲ್ಲೆಯ ಕನ್ಹಾ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ಬಿಸಿಲಿನ ತಾಪ ತಾಳಲಾರದೆ ತೊಟ್ಟಿಗೆ ಇಳಿದು ಕೆಲ ಕಾಲ ನೀರಿನಲ್ಲಿ ಆಟವಾಡಿದ ದೃಶ್ಯ ಎಲ್ಲರ ಗಮನ ಸೆಳೆದಿದೆ.
ಬೇಸಿಗೆಗೆ ಕಂಗಾಲಾಗಿರುವ ಪ್ರಾಣಿಗಳಿಗಾಗಿ ಉದ್ಯಾನದ ಮ್ಯಾನೇಜ್‌ಮೆಂಟ್ ಸ್ನಾನ ಮಾಡಲು ಹಾಗೂ ಕುಡಿಯಲು ದೊಡ್ಡ ತೊಟ್ಟಿಗಳನ್ನು ನಿರ್ಮಿಸಿದೆ. ಸುಡು ಬಿಸಿಲಿನಿಂದ ವಿಶ್ರಾಂತಿ ಪಡೆಯಲು ಇಲ್ಲಿನ ಪ್ರಾಣಿಗಳು ಅಪರೂಪವಾಗಿ ತೊಟ್ಟಿಗಿಳಿದು ಮೋಜು ಮಾಡುತ್ತವೆ.
ಇದೀಗ ಇಂತಹದ್ದೇ ಘಟನೆ ನಡೆದಿದ್ದು, ಈ ಉದ್ಯಾನದ ಟಿ 11 ಟೈಗರ್ ಎಂಬ ಹೆಸರಿನ ಹುಲಿ ಬಿಸಿಲಿನ ತಾಪ ತಾಳಲಾರದೇ ತೊಟ್ಟಿಗೆ ಇಳಿದು ಮೋಜು ಮಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೀರಿನಲ್ಲಿ ಸಮಯ ಕಳೆದು ಬೇಸಿಗೆಯಲ್ಲಿ ತಂಪನ್ನು ಆನಂದಿಸುತ್ತಿರುವ ಹುಲಿಯನ್ನು ನೋಡಿದವರಿಗೆ ಮುದ ನೀಡುತ್ತಿದೆ.