ETV Bharat / bharat

ವಾಮಾಚಾರ ಮಾಡುತ್ತಿದ್ದ ಶಂಕೆ.. ಜಾರ್ಖಂಡ್​ನಲ್ಲಿ ಮೂವರು ಮಹಿಳೆಯರ ಬರ್ಬರ ಹತ್ಯೆ - ETV bharat kannada news

ವಾಮಾಚಾರ ಮಾಡುತ್ತಿದ್ದ ಶಂಕೆಯ ಮೇಲೆ ಮೂವರು ಮಹಿಳೆಯರನ್ನು ಹತ್ಯೆ ಮಾಡಿದ ಘಟನೆ ಜಾರ್ಖಂಡ್​ನಲ್ಲಿ ವರದಿಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಎರಡು ಶವಗಳನ್ನು ಪತ್ತೆ ಮಾಡಲಾಗಿದೆ.

three women murder
ವಾಮಾಚಾರ ಮಾಡುತ್ತಿದ್ದ ಶಂಕೆ
author img

By

Published : Sep 5, 2022, 10:11 PM IST

ರಾಂಚಿ(ಜಾರ್ಖಂಡ್​): ಮಾಟ ಮಂತ್ರ ಮಾಡುತ್ತಿದ್ದರು ಎಂಬ ಕಾರಣಕ್ಕಾಗಿ ಜಾರ್ಖಂಡ್​ನಲ್ಲಿ ಮೂವರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಭಾನುವಾರ ನಡೆದಿದೆ. ಎರಡು ಶವಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಇನ್ನೊಂದು ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ನಡೆದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಹರೆ ಹಾಕಲಾಗಿದೆ.

ರಾಜಧಾನಿ ರಾಂಚಿಯಿಂದ 60 ಕಿ.ಮೀ ದೂರದಲ್ಲಿರುವ ರಣದಿಹ್ ಎಂಬ ಗ್ರಾಮದಲ್ಲಿ ಈ ಬರ್ಬರ ಹತ್ಯಾಕಾಂಡ ನಡೆದಿದೆ. ಮೂವರನ್ನೂ ಯಕ್ಷಿಣಿ ವಿದ್ಯೆ ಕಲಿತವರು ಎಂದು ಶಂಕಿಸಿ ಯಾರೋ ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ಪಡೆದು ತಪಾಸಣೆ ನಡೆಸಿದ್ದಾರೆ. ಮೂವರಲ್ಲಿ ಇಬ್ಬರ ಶವಗಳನ್ನು ಪತ್ತೆ ಮಾಡಲಾಗಿದೆ. ಇನ್ನೊಂದು ಶವದ ಪತ್ತೆ ಕಾರ್ಯ ನಡೆದಿದೆ.

ಕೊಲೆ ಮಾಡಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಮೂವರು ಮಹಿಳೆಯರನ್ನು ವಾಮಾಚಾರ ಮಾಡುತ್ತಿದ್ದ ಆರೋಪದ ಮೇರೆಗೆ ಕೊಲೆ ಮಾಡಲಾಗಿದೆ. ಘಟನೆಯಿಂದ ಗ್ರಾಮದ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಲಖನೌದ ಲೆವಾನ ಹೋಟೆಲ್​ನಲ್ಲಿ ಬೆಂಕಿ ಅವಘಡ.. ನಾಲ್ವರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.