ಶ್ರೀನಗರ, ಜಮ್ಮು-ಕಾಶ್ಮೀರ: ಕಣಿವೆನಾಡಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನಲ್ಲಿ ಮೂವರು ಉಗ್ರರ ಸಹಚರರನ್ನು ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರ ಪೊಲೀಸರು ಮತ್ತು ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆ ನಡೆಸಿದ್ದು, ಬಂಧಿತರೆಲ್ಲರೂ ಓವರ್ ಗ್ರೌಂಡ್ ವರ್ಕರ್ಗಳೆಂದು (Over Ground Workers) ಗುರುತಿಸಲಾಗಿದೆ. ಕುಪ್ವಾರಾದ ಬಾದ್‌ಶಾ ಖಾನ್ ಮಗ ಶರಫತ್ ಖಾನ್, ಲೋಲಾಬ್ನ ಮೊಹಮ್ಮದ್ ಷಾ ಮಗ ಸಜ್ಜಾದ್ ಷಾ ಮತ್ತು ಟ್ಯಾಂಗ್ಮಾರ್ಗ್ನ ವಾಲಿ ಮೊಹಮ್ಮದ್ ರಾಥರ್ ಮಗ ಶಾಹಿದ್ ಅಹ್ಮದ್ ರಾಥರ್ ಬಂಧಿತರು.
ಇದನ್ನೂ ಓದಿ: SSLC ಪರೀಕ್ಷೆ ಸರಳೀಕರಣ: ಎರಡೇ ದಿನದಲ್ಲಿ 6 ವಿಷಯಗಳಿಗೂ ಎಕ್ಸಾಂ!
ಬಂಧಿತರಿಂದ ಎರಡು ಪಿಸ್ತೂಲ್, ಹತ್ತು ಬುಲೆಟ್ ಮ್ಯಾಗಜೀನ್, 3 ಲಕ್ಷ ರೂಪಾಯಿ ನಗದು ಮತ್ತು ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.