ETV Bharat / bharat

ಜಮ್ಮು ಪೊಲೀಸರ ಕಾರ್ಯಾಚರಣೆ: ಮೂವರು ಎಲ್​ಇಟಿ ಉಗ್ರರ ಬಂಧನ - ಜಮ್ಮು ಕಾಶ್ಮೀರದಲ್ಲಿ ಉಗ್ರರ ಬಂಧನ

ಎಲ್​ಇಟಿ ಸಂಘಟನೆಯ ಉಗ್ರರಿಗೆ ನಡೆಸುವ ವಿಧ್ವಂಸಕ ಕೃತ್ಯಗಳಿಗೆ ಸಹಾಯ ಮಾಡುತ್ತಿದ್ದ ಮೂವರು ಓವರ್ ಗ್ರೌಂಡ್ ವರ್ಕರ್​ಗಳನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

Three Militant aides Arrested in Sopore, Initiated further investigation into the Case
ಜಮ್ಮು ಪೊಲೀಸರ ಕಾರ್ಯಾಚರಣೆ: ಮೂವರು ಎಲ್​ಇಟಿ ಉಗ್ರರ ಬಂಧನ
author img

By

Published : Jan 15, 2022, 12:16 PM IST

ಸೋಪೋರ್​(ಜಮ್ಮು ಕಾಶ್ಮೀರ): ಗಣರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ದೇಶದ ಅಲ್ಲಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುವಂತೆ ಭಾಸವಾಗುತ್ತಿದ್ದು, ಸೇನೆಯೂ ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಸಫಲವಾಗುತ್ತಿದೆ.

ಸೋಪೋರ್​ನಲ್ಲಿ ಲಷ್ಕರ್ ಎ ತೋಯ್ಬಾದ ಮೂವರು ಓವರ್​ ಗ್ರೌಂಡ್ ವರ್ಕರ್​ಗಳನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದು, ಕೆಲವು ಶಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತಂತೆ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಜನವರಿ 11ರಂದು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮಾಹಿತಿಗೆ ಈಗ ಬಹಿರಂಗವಾಗಿದೆ. ಸೋಪೋರ್ ಪೊಲೀಸ್, 22 ರಾಷ್ಟ್ರೀಯ ರೈಫಲ್ಸ್​, ಸಿಆರ್​ಪಿಎಫ್​ನ 179 ಬೆಟಾಲಿಯನ್ ಬೋಮೈ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಪೋರಾ ಬಳಿಯ ಚೀನಾರ್ ಬಳಿ ತಪಾಸಣೆ ನಡೆಸುತ್ತಿದ್ದಾಗ ಮೂವರನ್ನು ಬಂಧಿಸಲಾಗಿದೆ.

ಗುಂದ್​ಬ್ರಾಥ್ ಗ್ರಾಮದಿಂದ ಆ ಮೂವರು ಭಯೋತ್ಪಾದಕರು ಬೊಮೈ ಕಡೆಗೆ ತೆರಳುತ್ತಿದ್ದರು. ಅವರು ಅನುಮಾನಾಸ್ಪದವಾಗಿ ಕಂಡು ಬಂದ ಕಾರಣ, ನಿಲ್ಲುವಂತೆ ಪೊಲೀಸರು ಸೂಚನೆ ನೀಡಿದರು. ಈ ವೇಳೆ, ಅವರು ಪರಾರಿಯಾಗಲು ಯತ್ನಿಸಿದ್ದರೂ, ಆದರೂ ಪಟ್ಟು ಬಿಡದ ಸೇನೆ ಮೂವರನ್ನೂ ಬಂಧಿಸಿದೆ.

ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ ನಂತರ 2 ಪಿಸ್ತೂಲ್, 2 ಪಿಸ್ತೂಲ್ ಮ್ಯಾಗಜೀನ್, 13 ಗುಂಡುಗಳು ಮತ್ತು ಒಂದು ಹ್ಯಾಂಡ್​ ಗ್ರೆನೇಡ್ ಅನ್ನು ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.

ಯಾರಿವರು ಓವರ್​ಗ್ರೌಂಡ್ ವರ್ಕರ್​​ಗಳು?

ಉಗ್ರರು ನಡೆಸುವ ವಿಧ್ವಂಸಕ ಕೃತ್ಯಗಳಿಗೆ ಸಹಾಯ ಮಾಡುವವರನ್ನು ಓವರ್ ಗ್ರೌಂಡ್ ವರ್ಕರ್ಸ್ (Over ground workers) ಎಂದು ಕರೆಯಲಾಗುತ್ತದೆ. ಉಗ್ರರಿಗೆ ಹಣ, ಆಶ್ರಯ ಇತರ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಇವರದ್ದಾಗಿರುತ್ತದೆ. ಕಲ್ಲು ತೂರಾಟ, ಗಲಭೆ ಸೃಷ್ಟಿ, ಉಗ್ರಗಾಮಿಗಳ ನೇಮಕ ವಿಚಾರದಲ್ಲಿ ಇವರ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ಅಂದಹಾಗೆ ಇವರೂ ಭಯೋತ್ಪಾದಕರೇ ಆಗಿರುತ್ತಾರೆ.

ಇದನ್ನೂ ಓದಿ: Watch: ಸೇನಾ ದಿನ.. ಭಾರತೀಯ ಸೇನೆಯಿಂದ ವಿಡಿಯೋ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.