ETV Bharat / bharat

ಇಬ್ಬರು ಮಹಿಳೆಯರು ಸೇರಿ ಮೂವರು ಮಾವೋವಾದಿಗಳ ಹತ್ಯೆ - Naxal

ಒಡಿಶಾದ ಮಲ್ಕಂಗಿರಿ ಜಿಲ್ಲೆಯ ತುಳಸಿ ಬೆಟ್ಟದ ಬಳಿ ಇಬ್ಬರು ಮಹಿಳೆಯರು ಸೇರಿ ಮೂವರು ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಇಬ್ಬರು ಮಹಿಳೆಯರು ಸೇರಿ ಮೂವರು ಮಾವೋವಾದಿಗಳ ಹತ್ಯೆ

author img

By

Published : Oct 12, 2021, 1:17 PM IST

ಮಲ್ಕನಗಿರಿ (ಒಡಿಶಾ): ಮಲ್ಕಂಗಿರಿಯಲ್ಲಿ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು ನಕ್ಸಲರನ್ನು ಹೊಡೆದುರುಳಿಸಲಾಗಿದೆ.

ಗುಪ್ತಚರ ಮಾಹಿತಿ ಮೇರೆಗೆ ಒಡಿಶಾದ ಮಲ್ಕನಗಿರಿ ಜಿಲ್ಲೆಯ ಮತಿಲಿ ಪೊಲೀಸ್ ಠಾಣೆ ವ್ಯಾಪ್ತಿಯ ತುಳಸಿ ಬೆಟ್ಟದ ಬಳಿ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಮತ್ತು ಮಲ್ಕನಗಿರಿ ಡಿವಿಎಫ್‌ ತಂಡವು ಜಂಟಿಯಾಗಿ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ಕಾಡಿನಲ್ಲಿ ಅಡಗಿದ್ದ ಅನೇಕ ನಕ್ಸಲರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಮೂವರು ಮಾವೋವಾದಿಗಳನ್ನು ಗುಂಡಿಕ್ಕಿ ಕೊಂದಿದ್ದಾರೆ.

ಮೃತ ನಕ್ಸಲರ ಮೃತದೇಹಗಳನ್ನು ಹಾಗೂ ಅವರ ಬಳಿ ಇದ್ದ ಎಸ್‌ಎಲ್‌ಆರ್ ಗನ್​ ಮತ್ತು ಒಂದು ರೈಫಲ್ ವಶಕ್ಕೆ ಪಡೆಯಲಾಗಿದೆ. ತುಳಸಿ ಬೆಟ್ಟದಲ್ಲಿ 30-40 ನಕ್ಸಲರು ಅಡಗಿಕೊಂಡಿರುವ ಶಂಕೆ ಇದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಡಿಜಿಪಿ ಅಭಯ್​ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.