ETV Bharat / bharat

ಬಿಜೆಪಿಯ ಹೊದಿಕೆ​ ವಿತರಣಾ ಕಾರ್ಯಕ್ರಮದಲ್ಲಿ ಕಾಲ್ತುಳಿತ: ಮಗು, ಇಬ್ಬರು ಮಹಿಳೆಯರು ಸಾವು

author img

By

Published : Dec 14, 2022, 10:18 PM IST

ಪಶ್ಚಿಮ ಬಂಗಾಳದ ಅಸನ್ಸೋಲ್​ನಲ್ಲಿ ಬಿಜೆಪಿ ವತಿಯಿಂದ ನಡೆದ ಬ್ಲಾಂಕೆಟ್​ ವಿತರಣಾ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.

three-killed-in-stampede-during-bjp-blanket-distribution-event-at-bengals-asansol
ಬಿಜೆಪಿಯಿಂದ ಬ್ಲಾಂಕೆಟ್​ ವಿತರಣಾ ಕಾರ್ಯಕ್ರಮದಲ್ಲಿ ಕಾಲ್ತುಳಿತ: ಮಗು, ಇಬ್ಬರು ಮಹಿಳೆಯರ ಸಾವು

ಅಸನ್ಸೋಲ್‌(ಪಶ್ಚಿಮ ಬಂಗಾಳ): ಬಿಜೆಪಿ ಹಮ್ಮಿಕೊಂಡಿದ್ದ ಬ್ಲಾಂಕೆಟ್​ (ಹೊದಿಕೆ) ವಿತರಣಾ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮಗು ಮತ್ತು ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ. 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಪಶ್ಚಿಮ ಬಂಗಾಳದ ಅಸನ್ಸೋಲ್​ನಲ್ಲಿ ಇಂದು ನಡೆಯಿತು.

ಇಲ್ಲಿನ ವಾರ್ಡ್ ನಂ.27ರ ರಾಮಕೃಷ್ಣ ದಂಗಲ್ ಪ್ರದೇಶದಲ್ಲಿ ಬಿಜೆಪಿ ಮುಖಂಡ, ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಸಮ್ಮುಖದಲ್ಲಿ ಬ್ಲಾಂಕೆಟ್​ಗಳನ್ನು ವಿತರಿಸಲಾಗುತ್ತಿತ್ತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು ನೂಕುನುಗ್ಗಲು ಉಂಟಾಗಿದೆ. ಇದರ ಪರಿಣಾಮ ಸಂಭವಿಸಿದ ಕಾಲ್ತುಳಿತದಲ್ಲಿ ಅನೇಕರು ಗಾಯಗೊಂಡರು. ದುರ್ಘಟನೆಯಲ್ಲಿ ಚಂದಮಣಿ ದೇಬಿ (55), ಝಾಲಿ ಬೌರಿ (60) ಮೃತಪಟ್ಟಿದ್ದಾರೆ. ಮೃತ ಮಗುವಿನ ಗುರುತು ಪತ್ತೆಯಾಗಿಲ್ಲ. ಉಳಿದ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ಆಯುಕ್ತ ಸುಧೀರ್​ ಕುಮಾರ್​ ನೀಲಕಾಂತಮ್​, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ದುರಂತ ಸಂಭವಿಸಿದೆ. ಕಾರ್ಯಕ್ರಮಕ್ಕೆ ಪೊಲೀಸ್​ ಇಲಾಖೆ ಅನುಮತಿ ನೀಡಿರಲಿಲ್ಲ. ಅನುಮತಿ ಕೋರಿ ಯಾವ ಮನವಿ ಕೂಡ ಸಲ್ಲಿಕೆಯಾಗಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊಳ್ಳೇಗಾಲದ ಎರಡು ಕಡೆ ಲೋಕಾಯುಕ್ತ ದಾಳಿ, ಕಡತ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.