ನ್ಯೂಯಾರ್ಕ್: ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ತೆಲುಗು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕನೆಕ್ಟಿಕಟ್ ರಾಜ್ಯದಲ್ಲಿ ಮಿನಿ ವ್ಯಾನ್ ಮತ್ತು ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಮಿನಿ ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಜನರ ಪೈಕಿ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೊಬ್ಬ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮೃತರಲ್ಲಿ ಒಬ್ಬರು ಎಪಿಯ ಪೂರ್ವ ಗೋದಾವರಿ ಜಿಲ್ಲೆಯ ಕಡಿಯಾಪುಲಂಕಾದವರು, ಇನ್ನಿಬ್ಬರು ತೆಲಂಗಾಣದವರು ಎಂದು ತಿಳಿದು ಬಂದಿದೆ.
ಪೂರ್ವ ಗೋದಾವರಿ ಜಿಲ್ಲೆಯ ಕಡಿಯಂ ಮಂಡಲದ ಕಡಿಯಾಪುಲಂಕ ಗ್ರಾಮದ ಕೃಷಿಕ ಪಟಮಶೆಟ್ಟಿ ಶ್ರೀನಿವಾಸ್ ಅವರ ಪುತ್ರ ಪಟಮಶೆಟ್ಟಿ ಸಾಯಿ ನರಸಿಂಹ (23) ಅಮೆರಿಕದ ಕನೆಕ್ಟಿಕಟ್ ರಾಜ್ಯದಲ್ಲಿ ಎಂಎಸ್ ಓದುತ್ತಿದ್ದರು. ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ಬೆಳಗ್ಗೆ 5 ರಿಂದ 7 ಗಂಟೆಯ ನಡುವೆ ಅವರು ಏಳು ಸ್ನೇಹಿತರೊಂದಿಗೆ ಮಿನಿವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮಂಜಿನಿಂದಾಗಿ ಅವರು ಪ್ರಯಾಣಿಸುತ್ತಿದ್ದ ವಾಹನ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಪಾವನಿ (ವರಂಗಲ್) ಮತ್ತು ಹೈದರಾಬಾದ್‌ನ ಇನ್ನೊಬ್ಬ ಯುವಕ ಪ್ರೇಮಕುಮಾರ್ ರೆಡ್ಡಿ ಸೇರಿದಂತೆ ಸಾಯಿ ನರಸಿಂಹ ಸಹ ಸಾವನ್ನಪ್ಪಿದ್ದಾರೆ. ಉಳಿದ ಐವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದ ಬಗ್ಗೆ ಸಾಯಿ ನರಸಿಂಹ ಕುಟುಂಬ ಸದಸ್ಯರಿಗೆ ಮಾಹಿತಿ ಸಿಕ್ಕಿದೆ.
ದೀಪಾವಳಿಯಂದು ವಿಡಿಯೋ ಕಾಲ್ ಮಾಡಿದ್ದರು, ಅಷ್ಟರಲ್ಲಿ..: ಸಾಯಿ ನರಸಿಂಹ ಅವರು ತಮ್ಮ ಬಿ.ಟೆಕ್ ಅನ್ನು ಚೆನ್ನೈನ ಹಿಂದೂಸ್ತಾನ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಪೂರ್ಣಗೊಳಿಸಿದರು. ಕ್ಯಾಂಪಸ್ ಸಂದರ್ಶನದ ಮೂಲಕ ಕಂಪನಿಯೊಂದರಲ್ಲಿ ಸ್ಥಾನ ಪಡೆದರು. ಆದರೆ ಎಂಎಸ್ ಮಾಡಬೇಕೆಂದು ಯೋಚಿಸಿ ಆ ಕೆಲಸ ಬಿಟ್ಟರು. ಈ ವರ್ಷ ಆಗಸ್ಟ್ 5 ರಂದು ಅವರು ಅಮೆರಿಕಕ್ಕೆ ಹೋಗಿದ್ದರು.
ಇತ್ತೀಚೆಗಷ್ಟೇ ಅಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡು ಕುಟುಂಬ ಸದಸ್ಯರಿಗೆ ವಿಡಿಯೋ ಕಾಲ್ ಕೂಡ ಮಾಡಿದ್ದರು. ಈ ನಡುವೆ ಮಗ ಮೃತಪಟ್ಟಿದ್ದರಿಂದ ಪೋಷಕರಾದ ಶ್ರೀನಿವಾಸ್ ಮತ್ತು ಸುಶೀಲಾ ಕಣ್ಣೀರಿಡುತ್ತಿದ್ದಾರೆ.
ಮೃತರ ಸಹೋದರಿ ಪಟ್ಟಮಶೆಟ್ಟಿ ನಂದಿನಿ ಚೆನ್ನೈನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಪೋಷಕರು ರೋದನೆ ಮನ ಮುಟ್ಟುವಂತಿದೆ. ಮೃತರು ಪ್ರಯಾಣಿಸುತ್ತಿದ್ದ ಮಿನಿ ವ್ಯಾನ್‌ನಲ್ಲಿ ಅದೇ ಗ್ರಾಮದ ಸಿದ್ದಿ ರೆಡ್ಡಿ ಐಶ್ವರ್ಯ ಎಂಬುವರು ಸಹ ಇದ್ದರು. ಆಕೆಗೆ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ.
ಓದಿ: ಮೂಡಿಗೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು: ಐವರ ಸ್ಥಿತಿ ಗಂಭೀರ