ETV Bharat / bharat

ತ್ರಿವಳಿ ಕೊಲೆ: ಒಂದೇ ಕುಟುಂಬದ ಮೂವರು ವಯೋವೃದ್ಧರ ಮೃತದೇಹ ಪತ್ತೆ - ಈಟಿವಿ ಭಾರತ್​ ಕನ್ನಡ ನ್ಯೂಸ್

ಒಂದೇ ಮನೆಯಲ್ಲಿ ವಾಸವಿದ್ದ ದಂಪತಿಗಳ ಜೊತೆಗೆ ತಾಯಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ತ್ರಿವಳಿ ಕೊಲೆ
ತ್ರಿವಳಿ ಕೊಲೆ
author img

By

Published : Jul 7, 2023, 7:01 PM IST

ಲೂಧಿಯಾನ (ಪಂಜಾಬ್​) : ಜಿಲ್ಲೆಯ ಸೇಲಂ ತಬ್ರಿ ಪ್ರದೇಶದಲ್ಲಿ ಮೂವರು ವಯೋವೃದ್ಧರನ್ನು ಅವರ ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತರನ್ನು ಚಮನ್ ಲಾಲ್ (72), ಅವರ ಪತ್ನಿ ಸುರಿಂದರ್ ಕೌರ್ (70) ಮತ್ತು ತಾಯಿ ಬಚನ್ ಕೌರ್ (90) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಈ ಘಟನೆ ನಡೆದಿರುವ ಅನುಮಾನವಿದ್ದು, ಎಲ್ಲ ರೀತಿಯಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗ್ಗೆ ಯಾರೂ ಬಾಗಿಲು ತೆರೆಯದೇ ಇದ್ದಾಗ ನಿತ್ಯ ಮನೆಗೆ ಹಾಲು ಹಾಕುವವನು ಅನುಮಾನಗೊಂಡು ಅಕ್ಕ ಪಕ್ಕ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆಯ ಬೀಗ ಒಡೆದು ಒಳ ನುಗ್ಗಿದ ಜನರಿಗೆ ಕೋಣೆಯೊಂದರಲ್ಲಿ ಮೂವರ ಮೃತದೇಹಗಳು ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇನ್ನು ಈ ಪ್ರಕರಣ ಸಂಬಂಧ ಮಾತನಾಡಿರುವ ಜಂಟಿ ಪೊಲೀಸ್ ಆಯುಕ್ತ ಸೋಮ್ಯಾ ಮಿಶ್ರಾ ಅವರು, ಕೊಲೆಯಾಗಿರುವ ಮೂವರೂ ಕೂಡ ವಯೋವೃದ್ಧರಾಗಿದ್ದಾರೆ. ಯಾವ ಉದ್ದೇಶಕ್ಕಾಗಿ ಕೊಲೆ ನಡೆದಿದೆ ಎಂಬುದು ತಿಳಿದಿಲ್ಲ. ಆದರೆ, ಈಗಾಗಲೇ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು. ಫೋರೆನ್ಸಿಕ್ ತಂಡಗಳನ್ನು ಕೂಡ ಸ್ಥಳಕ್ಕೆ ಕರೆಸಲಾಗಿದೆ ಎಂದು ಹೇಳಿದ್ದಾರೆ.

ಕುಟುಂಬಸ್ಥರ ಪ್ರಕಾರ, ಮನೆಯಲ್ಲಿ ಕೊಲೆಯಾದ ಮೂವರು ಮಾತ್ರ ವಾಸಿಸುತ್ತಿದ್ದು, ಅವರ ನಾಲ್ಕು ಜನ ಮಕ್ಕಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಚಮನ್ ಲಾಲ್ ಅವರಿಗೆ ಯಾರೊಂದಿಗೂ ದ್ವೇಷವಿರಲಿಲ್ಲ. ಆದರೇ ಕೊಲೆ ಮಾಡಿರುವುದು ಏಕೆ ಎಂಬುದು ಗೊತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಕೂಡ ತ್ರಿವಳಿ ಕೊಲೆ : ಮೇ ತಿಂಗಳಲ್ಲಿ ಲೂಧಿಯಾನದಲ್ಲಿ ಇದೇ ರೀತಿಯ ತ್ರಿವಳಿ ಕೊಲೆ ಪ್ರಕರಣ ದಾಖಲಾಗಿತ್ತು. ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಅವರ ಪತ್ನಿ ಮತ್ತು ಮಗನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಮಾದಕ ವ್ಯಸನಿಯೊಬ್ಬನನ್ನು ಬಂಧಿಸಿದ್ದ ಪೊಲೀಸರಿಗೆ ತನಿಖೆ ವೇಳೆ ಮನೆ ದರೋಡೆ ಮಾಡಿ ನಂತರ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದನು.

ಒಂದೇ ಕುಟುಂಬದ 5 ಅತ್ಮಹತ್ಯೆಗೆ ಶರಣು : ಉತ್ತರಪ್ರದೇಶದ ಜೌನ್​ಪುರ ಜಿಲ್ಲೆಯ ಮಡಿಯಾಹುನ್ ಕೊತ್ವಾಲಿ ಪ್ರದೇಶದ ಜೈರಾಮ್‌ಪುರ ಗ್ರಾಮದಲ್ಲಿ ಪತಿಯು ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಲೆ ಮಾಡಿದ ಬಳಿಕ, ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿತ್ತು. ಒಂದೇ ಕುಟುಂಬದ ಐವರು ಸಾವಿಗೀಡಾಗಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿತ್ತು. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಗ್ರಾಮೀಣ ಎಸ್ಪಿ ಶೈಲೇಂದ್ರ ಕುಮಾರ್ ಸಿಂಗ್ ಪರಿಶೀಲನೆ ನಡೆಸಿ ಐವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ಇದನ್ನೂ ಓದಿ : ಕೌಟುಂಬಿಕ ಕಲಹ: ಪತಿಯಿಂದ ಪತ್ನಿ ಹತ್ಯೆ, ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.