ETV Bharat / bharat

ಬಿಜೆಪಿ ಕಾರ್ಯಕರ್ತರ ಕೊಂದವರನ್ನು ಮೇ 2ರ ಬಳಿಕ ಜೈಲಿಗೆ ಕಳುಹಿಸಲಾಗುತ್ತೆ: ಅಮಿತ್ ಶಾ

author img

By

Published : Apr 2, 2021, 3:09 PM IST

ಮೇ 2 ರಂದು ಫಲಿತಾಂಶ ಹೊರಬಂದ ಬಳಿಕ ಭ್ರಷ್ಟರು ಹಾಗೂ ಬಿಜೆಪಿ ಕಾರ್ಯಕರ್ತರ ಹತೈಗೈದವರನ್ನು ಜೈಲಿಗೆ ಕಳುಹಿಸಲಾಗುತ್ತೆ ಎಂದು ಅಮಿತ್​ ಶಾ ಹೇಳಿದ್ದಾರೆ.

Amit shah
ಅಮಿತ್ ಶಾ

ಅಲಿಪುರ್ದೌರ್​ (ಪಶ್ಚಿಮ ಬಂಗಾಳ): ಭ್ರಷ್ಟರು ಹಾಗೂ ಬಿಜೆಪಿ ಕಾರ್ಯಕರ್ತರ ಹತೈಗೈದವರನ್ನು ಮೇ 2ರ ಬಳಿಕ ಜೈಲಿಗೆ ಕಳುಹಿಸಲಾಗುತ್ತೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಅಲಿಪುರ್ದೌರ್​ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೇ 2 ರಂದು ಫಲಿತಾಂಶ ಹೊರಬಂದ ಬಳಿಕ ಕಲ್ಲಿದ್ದಲು ಮಾಫಿಯಾ, ಮರಳು ಮಾಫಿಯಾ, ವಾಟರ್ ಟ್ಯಾಂಕರ್ ಮಾಫಿಯಾ ಹಾಗೂ ಗೋಹತ್ಯೆಯಲ್ಲಿ ಭಾಗಿ ಸೇರಿದಂತೆ ಬಂಗಾಳದಲ್ಲಿ ಇಂತಹ ಪ್ರಕರಣಗಳಲ್ಲಿ ತೊಡಗಿದವರು ಜೈಲು ಪಾಲಾಗಲಿದ್ದಾರೆ. ಇದಕ್ಕಾಗಿ ನಾವು ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಲಿದ್ದೇವೆ ಎಂದರು.

'ಬಂಗಾಳಕ್ಕೆ ಪಕ್ಷಿಗಳು ಬರಲೂ ಅನುಮತಿಸುವುದಿಲ್ಲ'

ದೀದಿ ನಂದಿಗ್ರಾಮವನ್ನು ಕಳೆದುಕೊಂಡಿದ್ದಾರೆ. ನಿನ್ನೆ ನಂದಿಗ್ರಾಮದಲ್ಲಿ ನೀವು ನೋಡಿದ ದೃಶ್ಯಗಳೇ ಹೇಳುತ್ತವೆ ದೀದಿ ಇಲ್ಲಿ ಸೋತಿದ್ದಾರೆಂದು. ಒಳನುಸುಳುವಿಕೆಯನ್ನು ನಿಲ್ಲಿಸಬಾರದೇ? ಇದು ನಮ್ಮ ಯುವಕರ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲವೇ? ನೀವು ದೀದಿಯನ್ನು ಬದಲಾಯಿಸಿ. ಆಗ ಮನುಷ್ಯರನ್ನು ಬಿಡಿ, ಪಕ್ಷಿಗಳನ್ನು ಸಹ ಬಂಗಾಳಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ. ಎಲ್ಲಾ ನಿರಾಶ್ರಿತರಿಗೆ ಗೌರವಯುತವಾಗಿ ಭಾರತೀಯ ಪೌರತ್ವ ನೀಡಲಾಗುವುದು ಎಂದು ಅಮಿತ್​ ಶಾ ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ. ಈಗಾಗಲೇ ಎರಡು ಹಂತಗಳ ಮತದಾನ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.