ETV Bharat / bharat

ಇಡಿ ವಿಚಾರ.. ಸುಪ್ರೀಂಕೋರ್ಟ್ ತೀರ್ಪಿನಿಂದ ಸಂಭ್ರಮಿಸುವವರು ಭ್ರಮ ನಿರಸನಗೊಂಡಿದ್ದಾರೆ: ಅಮಿತ್ ಶಾ

ಇಡಿ ಒಬ್ಬ ವ್ಯಕ್ತಿಯನ್ನು ಮೀರಿದ ಸಂಸ್ಥೆಯಾಗಿದೆ ಮತ್ತು ಅದರ ಪ್ರಮುಖ ಉದ್ದೇಶವನ್ನು ಸಾಧಿಸುವತ್ತ ಗಮನ ಹರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್​ ಮಾಡಿದ್ದಾರೆ.

those-rejoicing-over-sc-decision-on-ed-case-delusional-amit-shah-on-supreme-court-decision-against-enforcement-directorate-chief
ಇಡಿ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಂತೋಷಪಡುವವರು ಭ್ರಮನಿರಸನಗೊಂಡಿದ್ದಾರೆ: ಅಮಿತ್ ಶಾ
author img

By

Published : Jul 11, 2023, 10:56 PM IST

ನವದೆಹಲಿ: ಪ್ರಸ್ತುತ ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರಿಗೆ ನೀಡಲಾದ ಸೇವಾ ವಿಸ್ತರಣೆಯ ಕಾನೂನುಬದ್ಧತೆ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ಸಂಭ್ರಮಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.

  • Those rejoicing over the Hon'ble SC decision on the ED case are delusional for various reasons:

    The amendments to the CVC Act, which were duly passed by the Parliament, have been upheld.

    Powers of the ED to strike at those who are corrupt and on the wrong side of the law…

    — Amit Shah (@AmitShah) July 11, 2023 " class="align-text-top noRightClick twitterSection" data=" ">

ಅಮಿತ್​ ಶಾ ತಮ್ಮ ಸುದೀರ್ಘ ಟ್ವೀಟ್‌ನಲ್ಲಿ, "ಇಡಿ ಪ್ರಕರಣದ ಬಗ್ಗೆ ಗೌರವಾನ್ವಿತ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸಂತಸ ಪಡುವವರು ವಿವಿಧ ಕಾರಣಗಳಿಗಾಗಿ ಭ್ರಮನಿರಸನಗೊಂಡಿದ್ದಾರೆ. ಸಂಸತ್ತು ಅಂಗೀಕರಿಸಿದ ಸಿವಿಸಿ ಕಾಯ್ದೆಯ ತಿದ್ದುಪಡಿಗಳನ್ನು ಎತ್ತಿ ಹಿಡಿಯಲಾಗಿದೆ. ಇಡಿ ಒಬ್ಬ ವ್ಯಕ್ತಿಯನ್ನು ಮೀರಿದ ಸಂಸ್ಥೆಯಾಗಿದೆ ಮತ್ತು ಅದರ ಪ್ರಮುಖ ಉದ್ದೇಶವನ್ನು ಸಾಧಿಸುವತ್ತ ಗಮನ ಹರಿಸಿದೆ. ಅಂದರೆ ಮನಿ ಲಾಂಡರಿಂಗ್ ಅಪರಾಧಗಳು ಮತ್ತು ವಿದೇಶಿ ವಿನಿಮಯ ಕಾನೂನುಗಳ ಉಲ್ಲಂಘನೆಯನ್ನು ತನಿಖೆ ಮಾಡುವುದು ಇಡಿ ಕೆಲಸವಾಗಿದೆ. ಹೀಗಾಗಿ, ಇಡಿ ನಿರ್ದೇಶಕರು ಯಾರು ಎಂಬುದು ಮುಖ್ಯವಲ್ಲ, ಏಕೆಂದರೆ ಈ ಪಾತ್ರವನ್ನು ಯಾರು ವಹಿಸಿಕೊಂಡರೂ ಅವರ ಕರ್ತವ್ಯ ನಿಭಾಯಿಸಬೇಕಾಗುತ್ತದೆ ಎಂದಿದ್ದಾರೆ.

  • On a Petition instituted by me, the Supreme Court today pronounced its judgment striking down the extensions given to the ED Chief as illegal. ED Director will have to vacate office by the end of the month.

    This is a victory of justice. This is a vindication of our stand on… pic.twitter.com/XTLCO7RdxW

    — Randeep Singh Surjewala (@rssurjewala) July 11, 2023 " class="align-text-top noRightClick twitterSection" data=" ">

ಏನಿದು ಪ್ರಕರಣ: ಮಿಶ್ರಾ ಅಧಿಕಾರವಧಿಯನ್ನು ತಲಾ ಒಂದು ವರ್ಷದ ವಿಸ್ತರಣೆ ಮಾಡಲಾಗಿತ್ತು. ನವೆಂಬರ್ 17, 2021 ಮತ್ತು ನವೆಂಬರ್ 17, 2022ರ ಆದೇಶಗಳು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ ಮತ್ತು ಅವರ ಅಧಿಕಾರಾವಧಿಯನ್ನು ಜುಲೈ 31 ಕ್ಕೆ ಮೊಟಕುಗೊಳಿಸಿದೆ. 1984ರ ಬ್ಯಾಚ್​ನ ಐಆರ್​ಎಸ್​ ಅಧಿಕಾರಿ, ಆಗಿದ್ದ ಮಿಶ್ರಾ ನವೆಂಬರ್ 18, 2023 ರವರೆಗೆ ಅಧಿಕಾರದಲ್ಲಿರಬೇಕಿತ್ತು. ಆದರೆ, ಇಡಿ ನಿರ್ದೇಶಕರ ಅಧಿಕಾರಾವಧಿಯನ್ನು ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ವಿಚಕ್ಷಣಾ ಆಯೋಗ ಕಾಯ್ದೆ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿತ್ತು.

ಇದನ್ನು ವಿರೋಧಿಸಿ, ಕಾಂಗ್ರೆಸ್​ನ ಜಯಾ ಠಾಕೂರ್​, ರಣ್​ದೀಪ್​ ಸಿಂಗ್​ ಸುರ್ಜೆವಾಲಾ, ಟಿಎಂಸಿ ಎಂಪಿ ಮಹುವಾ, ಪಕ್ಷದ ವಕ್ತಾರ ಸಾಕೇತ್​ ಗೋಖಲೆ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಕಳೆದ ಮೇನಲ್ಲಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಸುಪ್ರೀಂಕೋರ್ಟ್​ನ ಈ ತೀರ್ಪಿನ ಬಳಿಕ ಕಾಂಗ್ರೆಸ್ ಹರ್ಷಗೊಂಡಿದೆ. ಕೇಂದ್ರ ಸರ್ಕಾರ ನವೆಂಬರ್ 17, 2021ರ ನಂತರ ಮಿಶ್ರಾ ಅವರ ಅಧಿಕಾರವಧಿ ವಿಸ್ತರಣೆ ಮಾಡಿದ್ದಕ್ಕೆ ಇಡಿ ತನಿಖೆ ನಡೆಸುತ್ತಿರುವ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಲು ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಒತ್ತಾಯ ಮಾಡಿದೆ.

ಕೇಂದ್ರ ಸರ್ಕಾರವು ತನ್ನ ದುರುದ್ದೇಶಪೂರಿತ ರಾಜಕೀಯ ಉದ್ದೇಶಗಳಿಗೆ ಇಡಿ ನಿರ್ದೇಶಕರ ಕಚೇರಿಯನ್ನು ನಿರ್ಲಜ್ಜವಾಗಿ ದುರುಪಯೋಗ ಪಡಿಸಿಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಷ್ಟೇ ಅಲ್ಲ ಸುಪ್ರೀಂ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ಷಮೆಯಾಚಿಸಬೇಕು ಎಂದು ಕೂಡಾ ಒತ್ತಾಯಿಸಿದೆ.

"ವಿರೋಧ ಪಕ್ಷದ ನಾಯಕರನ್ನು ಹೆದರಿಸಲು ಮತ್ತು ಬಿಜೆಪಿಯೇತರ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ" ಎಂದು ಅರ್ಜಿದಾರರರಲ್ಲಿ ಒಬ್ಬರಾದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್​ ಸುರ್ಜೇವಾಲಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ವಾಷಿಂಗ್ ಮಷಿನ್‌ನಲ್ಲಿ ಭ್ರಷ್ಟಾಚಾರದ ಕಲೆ ತೊಳೆಯುತ್ತೆ: ಬಿಹಾರದ ಡಿಸಿಎಂ ತೇಜಸ್ವಿ ಯಾದವ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.