ETV Bharat / bharat

ಕೋವಿಡ್​ ರೋಗಿಗಳ ಜೀವ ರಕ್ಷಕ ‘ಆಕ್ಸಿಜನ್​’ ತಯಾರಿಕೆ ಬಗ್ಗೆ ನಿಮಗೆಷ್ಟು ಗೊತ್ತು? - ಚಂದೌಲಿ ಭಾರತೀಯ ವಾಯು ಅನಿಲ ಘಟಕ

ಕೋವಿಡ್​ ರೋಗಿಗಳಿಗೆ ಸಂಜೀವಿನಿಯಾಗಿರುವ 'ಆಮ್ಲಜನಕ' ತಯಾರಾಗವ ಬಗೆ ನಿಮಗೆ ತಿಳಿದಿದೆಯೇ?, ಹೀಗೆ ತಯಾರಾದ ಆಕ್ಸಿಜನ್ ಸಿಲಿಂಡರ್‌ಗಳನ್ನು ಆಸ್ಪತ್ರೆಗಳಿಗೆ ಯಾವ ರೀತಿ ಸಾಗಿಸುತ್ತಾರೆ ಎಂಬುದರ ಬಗ್ಗೆ ಇಲ್ಲಿದೆ ಒಂದು ವಿಶೇಷ ವರದಿ. ನಮ್ಮ ವರದಿಗಾರ ಆಕ್ಸಿಜನ್ ತಯಾರಿಸುವ ಪ್ಲಾಂಟ್‌ಗೆ ತೆರಳಿ ಸಂಬಂಧಪಟ್ಟವರನ್ನು ಮಾತನಾಡಿಸಿದ್ದಾರೆ. ನಿಮಗೆ ತಿಳಿದಿರಬೇಕಾದ ಸಂಗತಿಗಳು ಇಲ್ಲಿವೆ..

Oxygen  life saving oxygen  COVID 19  Indian Air Gases  coronavirus  oxygen cylinders  ಆಕ್ಸಿಜನ್​ ತಯಾರು  ಆಕ್ಸಿಜನ್​ ತಯಾರಿಸುವುದು ಹೇಗೆ  ಆಕ್ಸಿಜನ್​ ತಯಾರು ಸುದ್ದಿ  ಭಾರತೀಯ ವಾಯು ಅನಿಲ ಘಟಕ  ಚಂದೌಲಿ ಭಾರತೀಯ ವಾಯು ಅನಿಲ ಘಟಕ  ಭಾರತೀಯ ವಾಯು ಅನಿಲ ಘಟಕ ಸುದ್ದಿ
ಕೋವಿಡ್​ ರೋಗಿಗಳ ಜೀವ ರಕ್ಷಕ ‘ಆಕ್ಸಿಜನ್​’ ತಯಾರು ಬಗ್ಗೆ ನಿಮಗೆಷ್ಟು ಗೊತ್ತು
author img

By

Published : Apr 20, 2021, 6:32 AM IST

ಲಖನೌ(ಉತ್ತರ ಪ್ರದೇಶ): ಕೋವಿಡ್ ಸೋಂಕು ಮತ್ತೊಮ್ಮೆ ದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಸೋಂಕಿತರ ಸಾವು-ನೋವಿನ ಸಂಖ್ಯೆ ಏರುತ್ತಿರುವುದು ಇದಕ್ಕೆ ಕಾರಣ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ರೋಗಿಗಳ ಜೀವ ಉಳಿಸುವುದು ಆಕ್ಸಿಜನ್.‌ ಅತ್ಯಂತ ತುರ್ತಾಗಿ ಬೇಕಿರುವ ಈ ಆಕ್ಸಿಜನ್‌ಗಾಗಿ ದೇಶದಲ್ಲಿ ಪರದಾಟ ಶುರುವಾಗಿದೆ. ಆಸ್ಪತ್ರೆಗಳಲ್ಲಿ ಬೆಡ್​ಗಳ ಜೊತೆ ಈ ಪ್ರಾಣರಕ್ಷಕದ ಕೊರತೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಕೋವಿಡ್ ರೋಗಿಗಳಿಗೆ ಆಮ್ಲಜನಕವು ಮರುಜೀವ ನೀಡುವ ಸಂಜೀವಿನಿ ಅಂದ್ರೆ ಉತ್ಪ್ರೇಕ್ಷೆಯಂತೂ ಅಲ್ಲ.

ಗಾಳಿ ಮತ್ತು ನೀರಿನಲ್ಲೂ ಆಮ್ಲಜನಕವಿರುತ್ತೆ ಅನ್ನೋದು ತಿಳಿದಿರುವ ವಿಚಾರ. ಗಾಳಿಯಲ್ಲಿ ಶೇ 21 ಆಮ್ಲಜನಕವಿದ್ದರೆ, ಶೇ78 ರಷ್ಟು ನೈಟ್ರೋಜನ್​ ಇದೆ.

ಆದ್ರೆ, ಘಟಕಗಳಲ್ಲಿ ಆಮ್ಲಜನಕವನ್ನು ಹೇಗೆ ತಯಾರಿಸಲಾಗುತ್ತದೆ ಎಂದು ತಿಳಿಯಲು ನಮ್ಮ ಪ್ರತಿನಿಧಿ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಆಮ್ಲಜನಕ ತಯಾರಿಸುವ ಭಾರತೀಯ ಅನಿಲ ಘಟಕಕ್ಕೆ ಭೇಟಿ ನೀಡಿದರು.

‘ಆಕ್ಸಿಜನ್​’ ತಯಾರಿಕೆ ಬಗ್ಗೆ ಈಟಿವಿ ಭಾರತ ಸ್ಪೆಷಲ್ ರಿಪೋರ್ಟ್

ವೈದ್ಯಕೀಯ ಆಮ್ಲಜನಕ ಹೀಗೆ ತಯಾರಾಗುತ್ತೆ..

ಗಾಳಿಯಿಂದ ಆಮ್ಲಜನಕವನ್ನು ಹೊರತೆಗೆಯುತ್ತೇವೆ. ಇದಕ್ಕಾಗಿ, ಏರ್ ಕಂಪ್ರೆಷರ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಅಂದರೆ, ಗಾಳಿಯನ್ನು ಕಂಪ್ರೆಸ್​ ಮಾಡಿದ ನಂತರ ಫಿಲ್ಟರ್ ಮಾಡುತ್ತೇವೆ. ಇದರಿಂದ ಅಶುದ್ಧ ಗಾಳಿ ಹೊರಹೋಗುತ್ತೆ. ಹಲವು ಹಂತಗಳಲ್ಲಿ ಈ ಫಿಲ್ಟರ್ ಕ್ರಿಯೆ ನಡೆಯುತ್ತದೆ. ಹೀಗೆ ಫಿಲ್ಟರ್ ಮಾಡಿದ ಗಾಳಿಯನ್ನು ತಂಪಾಗಿಸಬೇಕು. ಇದರ ನಂತರ ಗಾಳಿಯನ್ನು ಭಟ್ಟಿ ಇಳಿಸಲಾಗುತ್ತದೆ. ಹೀಗೆ ಮಾಡುವುದರಿಂದ ನಾವು ಆಮ್ಲಜನಕವನ್ನು ಉಳಿದ ಅನಿಲಗಳಿಂದ ಬೇರ್ಪಡಿಸಬಹುದು. ಈ ಪ್ರಕ್ರಿಯೆಯಲ್ಲಿ ಆಮ್ಲಜನಕ ದ್ರವ ರೂಪದಲ್ಲಿರುತ್ತದೆ. ಈ ದ್ರವರೂಪದ ಆಮ್ಲಜನಕವನ್ನು ನಾವು ಸಂಗ್ರಹಿಸುತ್ತೆವೆ ಎಂದು ಘಟಕದ ಉತ್ಪಾದನಾ ವ್ಯವಸ್ಥಾಪಕ ಅಶೋಕ್ ವಿವರಿಸಿದರು.

ಆಸ್ಪತ್ರೆಗಳಿಗೆ ಪೂರೈಕೆ ಹೇಗೆ?

ಹೀಗೆ ಸಂಗ್ರಹಿಸಲಾದ ದ್ರವರೂಪದ ಆಮ್ಲಜನಕವನ್ನು ದೊಡ್ಡ ಮತ್ತು ಸಣ್ಣ ಕ್ಯಾಪ್ಸುಲ್ಡ್‌ ಟ್ಯಾಂಕರ್‌ನಲ್ಲಿ ತುಂಬಿಸಿ ಆಸ್ಪತ್ರೆಗೆ ಸಾಗಿಸುತ್ತೇವೆ. ಆಸ್ಪತ್ರೆಯಲ್ಲಿ ಕೊಳವೆಗಳ ಸಂಪರ್ಕದ ಮೂಲಕ ರೋಗಿಗಳ ದೇಹ ತಲುಪುವಂತೆ ಮಾಡುತ್ತಾರೆ. ಇಲ್ಲೊಂದು ವಿಚಾರವನ್ನು ಗಮನಿಸಬೇಕು. ಅದೇನೆಂದರೆ, ಎಲ್ಲ ಆಸ್ಪತ್ರೆಗಳಲ್ಲಿ ಇಂತಹ ಅತ್ಯಾಧುನಿಕ ಸೌಲಭ್ಯವಿರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸಿಲಿಂಡರ್‌ಗಳಲ್ಲಿ ಆಮ್ಲಜನಕವನ್ನು ತುಂಬಿಸಲಾಗುತ್ತದೆ. ಈ ಸಿಲಿಂಡರ್​ಗಳನ್ನು ನೇರವಾಗಿ ರೋಗಿಯ ಬೆಡ್​ ಬಳಿ ಸಾಗಿಸಿ ಆಮ್ಲಜನಕ ನೀಡಲಾಗುತ್ತದೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.