ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ನಿರುದ್ಯೋಗ, ಬಡತನದಂತಹ ಸಮಸ್ಯೆಗಳನ್ನೇ ಹೆಚ್ಚಿಸಿದ್ದಾರೆಯೇ ಹೊರತು ಮತ್ತಿನ್ನೇನನ್ನೂ ಹೆಚ್ಚಿಸಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಸಾಮಾನ್ಯ ಜನರನ್ನು ದೂರವಿಟ್ಟಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಆದರೆ, ಇನ್ನೊಂದೆಡೆ ಸರ್ಕಾರ ನಡೆಸುವ ಅವರವರ ಆಪ್ತರ ಆದಾಯವೂ ದ್ವಿಗುಣಗೊಂಡಿದೆ ಎಂದು ಟೀಕಿಸಿ ಟ್ವೀಟ್ ಮಾಡಿರುವ ಅವರು, ಯುವಕರಿಗೆ ಉದ್ದೋಗ ನೀಡುವಲ್ಲಿ ಮೋದಿ ಸೋತಿದ್ದಾರೆ.
ದೇಶದ ಆದಾಯ ಹೆಚ್ಚುಸುವ ಬದಲಾಗಿ ಬಡತನದಂತಹ ಸಮಸ್ಯೆಗಳನ್ನೇ ಹೆಚ್ಚಿಸಿದ್ದಾರೆಯೇ ಹೊರೆತು ಮತ್ತಿನ್ನೇನು ಇಲ್ಲ ಎಂದಿದ್ದಾರೆ. ಮಧ್ಯಮ ವರ್ಗದ ಜನಸಂಖ್ಯೆಯ ವರದಿಯೊಂದಿಗೆ ತಮ್ಮ ಟ್ವೀಟ್ಗೆ ಟ್ಯಾಗ್ ಮಾಡಿಕೊಂಡಿರುವ ರಾಹುಲ್ ಗಾಂಧಿ, ಮೋದಿ ಸರ್ಕಾರ ನಿರುದ್ಯೋಗ, ಹಣದುಬ್ಬರ ಮತ್ತು ಬಡತನ ಹೆಚ್ಚು ಮಾಡಿದೆ ಎಂದು ಕಾಲೆಳೆದಿದ್ದಾರೆ.
ಇನ್ನು ಅಸ್ಸೋಂನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿಯೂ ರಾಹುಲ್ ಗಾಂದಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಯಕ್ರಮಕ್ಕೂ ಮುನ್ನ ಬೃಹತ್ ರ‍್ಯಾಲಿ ನಡೆಸಿದರು.