ETV Bharat / bharat

ಆಗಸ್ಟ್ ಅಂತ್ಯದ ವೇಳೆಗೆ Covid 3rd Wave: ಮುನ್ನೆಚ್ಚರಿಕೆ ವಹಿಸದಿದ್ರೆ ಗಂಡಾಂತರ!

ಆಗಸ್ಟ್ ಅಂತ್ಯದ ವೇಳೆಗೆ ಕೋವಿಡ್ ಮೂರನೇ ಅಲೆ ಕಾಣಿಸಿಕೊಳ್ಳಲಿದ್ದು, ವ್ಯಾಪಕವಾಗಿ ಹರಡಲಿದೆ ಎಂದು ICMR ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಸಮಿರನ್ ಪಾಂಡ ಎಚ್ಚರಿಸಿದ್ದಾರೆ.

Covid 3rd Wave
Covid 3rd Wave
author img

By

Published : Jul 17, 2021, 9:07 AM IST

ನವದೆಹಲಿ: ಕೋವಿಡ್ ಮೂರನೇ ಅಲೆ ಆಗಸ್ಟ್ ಅಂತ್ಯದ ವೇಳೆಗೆ ಅಪ್ಪಳಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಸಮಿರನ್ ಪಾಂಡ ಎಚ್ಚರಿಸಿದ್ದಾರೆ.

ಕೋವಿಡ್​ ಎರಡನೇ ಅಲೆಯ ತೀವ್ರತೆ ಕಡಿಮೆ ಅನುಭವಿಸಿದ್ದ ರಾಜ್ಯಗಳು ಈ ಅಲೆಯಲ್ಲಿ ಎಚ್ಚರಿಕೆಯಿಂದಿರಬೇಕು. ನಿರ್ಬಂಧಗಳನ್ನು ವಿಧಿಸಿಕೊಳ್ಳದಿದ್ದರೆ, ಮೂರನೇ ಅಲೆಗೆ ಬೆಲೆ ತೆರಬೇಕಾದೀತು ಎಂದು ಎಚ್ಚರಿಕೆ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಾಂಡ, ಪ್ರತಿ ರಾಜ್ಯವು ಕೋವಿಡ್​ ಟೆಸ್ಟ್​ಗಳನ್ನು ಹೆಚ್ಚಿಸಬೇಕು. ಪರಿಸ್ಥಿತಿಗೆ ತಕ್ಕಂತೆ ಕ್ರಮಗಳನ್ನು ಕೈಗೊಳ್ಳಬೇಕಾದದ್ದು ಬಹಳ ಮುಖ್ಯ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಕಡಿಮೆ ಪರಿಣಾಮ ಎದುರಿಸಿರುವ ರಾಜ್ಯಗಳ ಮೇಲೆ ಮೂರನೇ ಅಲೆ ವ್ಯಾಪಕ ಪರಿಣಾಮ ಬೀರಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಕೋವಿಡ್​​ ಮೂರನೇ ಅಲೆ ವ್ಯಾಪಕವಾಗಿ ಹರಡಲಿದ. ನಮಗೆ ನಾವೇ ನಿರ್ಬಂಧ ವಿಧಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : ರಾಜ್ಯದ 30 ಲಕ್ಷ ಕೋವಿಡ್​ ಡೋಸ್ ಬೇಡಿಕೆ ಶೀಘ್ರವಾಗಿ ಪರಿಗಣಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತವಾಗಬಹುದು. ಆದರೆ, ಇನ್ನೂ ಎರಡನೇ ಅಲೆ ಸಂಪೂರ್ಣವಾಗಿ ಮುಗಿದಿಲ್ಲ. ರಾಜ್ಯಗಳು ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ತಪಾಸಣೆ ಮಾಡಿ, ನಿರ್ದಿಷ್ಟ ದತ್ತಾಂಶ ನೀಡಬೇಕಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.