ರಾಯಪುರ (ಛತ್ತೀಸ್‌ಗಢ): 'ಎಲ್ಲರೂ ರೈತ ಹೋರಾಟಕ್ಕೆ ಕೈಜೋಡಿಸಿ. ನೀವು ಉಳಿಯಬೇಕಂದ್ರೆ ನಮ್ಮೊಂದಿಗೆ ಸೇರಿಕೊಳ್ಳಿ. ಇಲ್ಲ ಅಂದ್ರೆ ನೀವು ಸಹ ಅನುಭವಿಸುತ್ತೀರಾ. ನಮ್ಮ ಮುಂದಿನ ಗುರಿ ಮಾಧ್ಯಮ ಸಂಸ್ಥೆಗಳೇ' ಎಂದು ಮಾಧ್ಯಮಗಳಿಗೆ ರೈತ ಮುಖಂಡ ರಾಕೇಶ್ ಟಿಕಾಯತ್ ನಗು ನಗುತ್ತಲೇ ಹೋರಾಟಕ್ಕೆ ಕರೆಯ ಜತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ನಿನ್ನೆ ಭಾರತ್ ಬಂದ್ ಬಳಿಕ ಇಂದು 'ಕಿಸಾನ್ ಮಹಾಪಂಚಾಯತ್'ನಲ್ಲಿ ಪಾಲ್ಗೊಳ್ಳಲು ಛತ್ತೀಸ್‌ಗಢದ ರಾಯಪುರಕ್ಕೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಬಂದಿಳಿದಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಳೆದೊಂದು ವರ್ಷದಿಂದ ನಡೆಸುತ್ತಿರುವ ಹೋರಾಟಕ್ಕೆ ಎಲ್ಲರೂ, ವಿಶೇಷವಾಗಿ ಮಾಧ್ಯಮಗಳು ಕೈ ಜೋಡಿಸಬೇಕು. ನಮಗೆ ಬೆಂಬಲ ನೀಡದಿದ್ದರೆ ನೀವೂ ಮುಂದೆ ಪಶ್ಚಾತಾಪ ಪಡುವ ಪರಿಸ್ಥಿತಿ ಬರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಟಿಕಾಯತ್ರ ಭಾರತ್ ಬಂದ್ ಕರೆ ತಾಲಿಬಾನ್ ಚಟುವಟಿಕೆಗೆ ಹೋಲಿಸಿದ ಭಾನು ಪ್ರತಾಪ್
ಇಂದು ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ರಾಜೀಮ್ ಗ್ರಾಮದಲ್ಲಿ ಇಂದು ಕಿಸಾನ್ ಮಹಾ ಪಂಚಾಯತ್ ನಡೆಯಲಿದೆ. ದೇಶದಲ್ಲಿ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಸಿಗದಿರುವುದೇ ದೊಡ್ಡ ಸಮಸ್ಯೆಯಾಗಿದೆ. ಇದರ ಬಗ್ಗೆ ನಾವು ದನಿ ಎತ್ತುತ್ತೇವೆ ಎಂದು ಟಿಕಾಯತ್ ತಿಳಿಸಿದರು.