ETV Bharat / bharat

ದಶಕಗಳಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ: ಕಾಂಗ್ರೆಸ್​ಗೆ ಮೋದಿ ಪರೋಕ್ಷ ಟಾಂಗ್

ಪರಿಹಾರವನ್ನು ಹುಡುಕುವ ಮೂಲಕ ಸಮಸ್ಯೆಗಳನ್ನು ಸರಿಪಡಿಸಲಾಗುತ್ತದೆ. ಅವುಗಳನ್ನು ದೂರವಿಡುವ ಮೂಲಕ ಅಲ್ಲವೆಂದು ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ಪರೋಕ್ಷವಾಗಿ ಕುಟುಕಿದ್ದಾರೆ.

Narendra Modi latest news
ಕಾಂಗ್ರೆಸ್ ಪಕ್ಷಕ್ಕೆ ಮೋದಿ ಟಾಂಗ್
author img

By

Published : Nov 23, 2020, 12:39 PM IST

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ಟಾಂಗ್​ ನೀಡಿರುವ ಪ್ರಧಾನಿ ಮೋದಿ, ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಅನೇಕ ಕಟ್ಟಡಗಳ ನಿರ್ಮಾಣ ಪ್ರಾರಂಭವಾಯಿತು ಮತ್ತು ನಿಗದಿತ ಸಮಯಕ್ಕೆ ಮುಂಚೆಯೇ ಮುಗಿದಿದೆ ಎಂದು ಹೇಳಿದ್ದಾರೆ. ಅಲ್ಲದೆ ಪರಿಹಾರಗಳನ್ನು ಕಂಡುಹಿಡಿಯುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ, ಆದರೆ ಅವುಗಳನ್ನು ದೂರವಿಡುವ ಮೂಲಕ ಅಲ್ಲ ಎಂದಿದ್ದಾರೆ.

ನವದೆಹಲಿಯ ಡಾ. ಬಿ.ಡಿ ಮಾರ್ಗ್‌ನಲ್ಲಿರುವ ಸಂಸತ್ ಸದಸ್ಯರ ಬಹುಮಹಡಿ ಫ್ಲ್ಯಾಟ್‌ಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಂಸದರ ನಿವಾಸಗಳ ಸಮಸ್ಯೆ ಹಲವಾರು ದಶಕಗಳಿಂದ ಇದೆ. ಆದರೆ ಅದನ್ನು ಪರಿಹರಿಸುವ ಕೆಲಸ ಪ್ರಾರಂಭವಾಗಿದ್ದು 2014ರ ನಂತರ ಎಂದು ಪ್ರಧಾನಿ ಹೇಳಿದ್ದಾರೆ.

"ದೆಹಲಿಯಲ್ಲಿ, ಸಂಸದರ ನಿವಾಸಗಳ ಸಮಸ್ಯೆ ಹಲವಾರು ದಶಕಗಳಿಂದ ಅಸ್ತಿತ್ವದಲ್ಲಿತ್ತು. 2014 ರ ನಂತರ, ಈ ಸಮಸ್ಯೆಯನ್ನು ಪರಿಹರಿಸುವ ಕೆಲಸ ಪ್ರಾರಂಭವಾಯಿತು. ಬಹುಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಮೂಲಕ ಬಗೆಹರಿಸಲಾಗುತ್ತದೆ. ಅವುಗಳನ್ನು ದೂರವಿಡುವ ಮೂಲಕ ಅಲ್ಲ. ಸಂಸದರ ನಿವಾಸಗಳು ಮಾತ್ರವಲ್ಲ, ಇನ್ನೂ ಕೆಲವು ಯೋಜನೆಗಳು ಬಾಕಿ ಉಳಿದಿವೆ" ಎಂದು ತಿಳಿಸಿದ್ದಾರೆ.

"ಈ ಸರ್ಕಾರದ ಅವಧಿಯಲ್ಲಿ ಅನೇಕ ಕಟ್ಟಡಗಳ ನಿರ್ಮಾಣ ಪ್ರಾರಂಭವಾಯಿತು ಮತ್ತು ನಿಗದಿತ ಸಮಯಕ್ಕಿಂತ ಮುಂಚೆಯೇ ಮುಗಿದಿದೆ. ಅಟಲ್ ಜಿ ಸಮಯದಲ್ಲಿ, ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕದ ಚರ್ಚೆ ಪ್ರಾರಂಭವಾಯಿತು. ಇದನ್ನು ಈ ಸರ್ಕಾರದಲ್ಲಿ ನಿರ್ಮಿಸಲಾಗಿದೆ. 23 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿದೆ" ಎಂದು ಮೋದಿ ಹೇಳಿದ್ದಾರೆ.

"ದೇಶದಲ್ಲಿ ಯುದ್ಧ ಸ್ಮಾರಕದ ಬಗ್ಗೆ ದಶಕಗಳಿಂದ ಚರ್ಚೆಗಳು ನಡೆಯುತ್ತಿದ್ದವು. ಈ ಸರ್ಕಾರ, ದೇಶದ ಧೈರ್ಯಶಾಲಿ ಹುತಾತ್ಮರ ನೆನಪಿಗಾಗಿ ಇಂಡಿಯಾ ಗೇಟ್ ಬಳಿ ಯುದ್ಧ ಸ್ಮಾರಕವನ್ನು ನಿರ್ಮಿಸಿದೆ. ನಮ್ಮ ದೇಶದಲ್ಲಿ ಸಾವಿರಾರು ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಅವರ ನೆನಪಿಗಾಗಿ, ಈ ಸರ್ಕಾರದಿಂದ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ಸಹ ನಿರ್ಮಿಸಲಾಗಿದೆ" ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.