ನವದೆಹಲಿ: 1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಇಸ್ಲಾಂ ಮೂಲಭೂತವಾದಿಗಳು ನಡೆಸಿದ ಭೀಕರ ಹಿಂಸೆ, ಸಾಮೂಹಿಕ ಅತ್ಯಾಚಾರದ ಘಟನಾವಳಿಗಳನ್ನು ದಿ ಕಾಶ್ಮೀರಿ ಫೈಲ್ಸ್ ಚಿತ್ರ ತೆರೆದಿಟ್ಟಿದ್ದು ಗೃಹ ಸಚಿವ ಅಮಿತ್ ಶಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿ, ಇದೊಂದು ಸತ್ಯದ ದಿಟ್ಟ ಪ್ರಾತಿನಿಧ್ಯ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಶಾ, ದಿ ಕಾಶ್ಮೀರಿ ಫೈಲ್ಸ್ ಚಿತ್ರ ಕಾಶ್ಮೀರಿ ಪಂಡಿತರ ನೋವು, ಕಣಿವೆ ನಾಡಿನಿಂದ ಕಾಶ್ಮೀರಿ ಪಂಡಿತರ ಬಲವಂತದ ವಲಸೆಯ ಸತ್ಯದ ದಿಟ್ಟ ಪ್ರತಿಬಿಂಬವಾಗಿದೆ. ಈ ಚಿತ್ರವು ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ಸಮಾಜ ಮತ್ತು ದೇಶವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತದೆ ಎಂದಿದ್ದಾರೆ.
-
#TheKashmirFiles सत्य का एक निर्भीक निरूपण है।
— Amit Shah (@AmitShah) March 16, 2022 " class="align-text-top noRightClick twitterSection" data="
ऐसी ऐतिहासिक गलतियों की पुनरावृत्ति न हो इस दिशा में यह समाज व देश को जागरूक करने का काम करेगी।
ये फिल्म बनाने के लिए मैं पूरी टीम को बधाई देता हूँ। @AnupamPKher @vivekagnihotri https://t.co/dMJgWjy4g5
">#TheKashmirFiles सत्य का एक निर्भीक निरूपण है।
— Amit Shah (@AmitShah) March 16, 2022
ऐसी ऐतिहासिक गलतियों की पुनरावृत्ति न हो इस दिशा में यह समाज व देश को जागरूक करने का काम करेगी।
ये फिल्म बनाने के लिए मैं पूरी टीम को बधाई देता हूँ। @AnupamPKher @vivekagnihotri https://t.co/dMJgWjy4g5#TheKashmirFiles सत्य का एक निर्भीक निरूपण है।
— Amit Shah (@AmitShah) March 16, 2022
ऐसी ऐतिहासिक गलतियों की पुनरावृत्ति न हो इस दिशा में यह समाज व देश को जागरूक करने का काम करेगी।
ये फिल्म बनाने के लिए मैं पूरी टीम को बधाई देता हूँ। @AnupamPKher @vivekagnihotri https://t.co/dMJgWjy4g5
ಇಂದು 'The Kashmir Files' ಚಿತ್ರ ತಂಡವನ್ನು ಭೇಟಿ ಮಾಡಿದೆ. ಕಾಶ್ಮೀರಿ ಪಂಡಿತರ ನೋವು ಅವರ ಹೋರಾಟದ ಸತ್ಯಾಂಶ ಚಿತ್ರದ ಮೂಲಕ ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಬರೆದುಕೊಂಡಿದ್ದಾರೆ.
ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಟರಾದ ಅನುಪಮ್ ಖೇರ್, ಪಲ್ಲವಿ ಜೋಶಿ ಸೇರಿದಂತೆ ಚಿತ್ರ ನಿರ್ಮಾಪಕರು ಹಾಗೂ ನಟರನ್ನು ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದರು.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲೂ ದೂಳೆಬ್ಬಿಸಿದ 'ದಿ ಕಾಶ್ಮೀರಿ ಫೈಲ್ಸ್': 5 ದಿನದಲ್ಲಿ 60 ಕೋಟಿ ರೂ. ಗಳಿಕೆ!
ಮಾರ್ಚ್ 11ರಂದು ತೆರೆ ಕಂಡಿರುವ ಚಿತ್ರಕ್ಕೆ ವಿಶ್ವಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.