ETV Bharat / bharat

ಕಾಂಗ್ರೆಸ್​ ನಾಯಕ ಮೇಜರ್​ ಸಿಂಗ್​ ಧಲಿವಾಲ್‌ರನ್ನು​ ಗುಂಡಿಕ್ಕಿ ಹತ್ಯೆಗೈದ ಮಹಿಳೆ!

ಅಪರಿಚಿತ ಮಹಿಳೆಯೊಬ್ಬರು ಕಾಂಗ್ರೆಸ್​ ನಾಯಕ ಮೇಜರ್​ ಸಿಂಗ್​ ಧಲಿವಾಲ್​ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

Etv Bharat
Etv Bharat
author img

By

Published : Feb 27, 2023, 10:00 PM IST

ತರನ್ ತರನ್​ (ಪಂಜಾಬ್): ಕಾಂಗ್ರೆಸ್​ ನಾಯಕ ಮೇಜರ್​ ಸಿಂಗ್​ ಧಲಿವಾಲ್​ ಅವರನ್ನು ಅಪರಿಚಿತ ಮಹಿಳೆಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ. ಇಲ್ಲಿನ ಕಾಂಗ್ರೆಸ್​ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದ ಸಿಂಗ್​ ಅವರನ್ನು ಪಂಜಾಬ್‌ನ ತರನ್​ ತರನ್‌ನಲ್ಲಿರುವ ಎಸ್‌ಬಿಐ ರೆಸಾರ್ಟ್‌ನಲ್ಲಿ ಹತ್ಯೆ ಮಾಡಲಾಗಿದೆ. ಆರೋಪಿ ಮಹಿಳೆಯು ಕೆಲ ವೈಯಕ್ತಿಕ ಕಾರಣಗಳಿಂದ ಕೃತ್ಯ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಗುರ್ಮೀತ್ ಚೌಹಾನ್ ಮಾಹಿತಿ ನೀಡಿದ್ದಾರೆ.

ಮೇಜರ್​ ಸಿಂಗ್​ ಧಲಿವಾಲ್​ ಅವರ ಮೇಲೆ ಸಾಂಗ್ವಾ ಗ್ರಾಮದಲ್ಲಿರುವ ಅವರದೇ ಮಾಲೀಕತ್ವದ ಮದುವೆ ಹಾಲ್​ ಬಳಿ ಹಲವು ಬಾರಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡುಗಳು ತಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆ ನಡೆಸುತ್ತಿದ್ದು, ಮಹಿಳೆಯನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ಪಂಜಾಬ್‌ನಲ್ಲಿ ಗಾಯಕ ಸಿಧು ಮೂಸೇ ವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ: ಸ್ನೇಹಿತನ ಕಿರುಕುಳಕ್ಕೆ ಬೇಸತ್ತು ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.