ETV Bharat / bharat

ಭಿವಾಂಡಿಯಲ್ಲಿ ಅಗ್ನಿ ಅವಘಡ..ಗೋದಾಮು ಧಗಧಗ - ಭಿವಾಂಡಿಯಲ್ಲಿ ಅಗ್ನಿ ಅವಘಟ..ಗೋದಾಮು ಧಗಧಗ

ಮಹಾರಾಷ್ಟ್ರದ ಭಿವಾಂಡಿಯಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಥಾಣೆಯಲ್ಲಿ ನಡೆದ ಈ ಅಗ್ನಿ ಅವಘಡದಲ್ಲಿ ಮೂರು ಗೋಡೌನ್​ಗಳು ಹೊತ್ತಿ ಉರಿದಿವೆ. ​

ಭಿವಾಂಡಿಯಲ್ಲಿ ಅಗ್ನಿ ಅವಘಟ..ಗೋದಾಮು ಧಗಧಗ
ಭಿವಾಂಡಿಯಲ್ಲಿ ಅಗ್ನಿ ಅವಘಟ..ಗೋದಾಮು ಧಗಧಗ
author img

By

Published : Jan 28, 2022, 8:57 AM IST

ಥಾಣೆ( ಮಹಾರಾಷ್ಟ್ರ): ಥಾಣೆಯ ಭಿವಾಂಡಿ ಸುಮಾರಾಸ್​ ಚಾಮುಂಡಾ ಕಾಂಪ್ಲೆಕ್ಸ್​ನಲ್ಲಿ ನಸುಕಿನ ಜಾವ ಬೆಂಕಿ ಹೊತ್ತಿಕೊಂಡು ಕಟ್ಟಡ ಧಗಧಗಿಸಿದೆ. ಚಾಮುಂಡಾ ಕಾಂಪ್ಲೆಕ್ಸ್​ನಲ್ಲಿರುವ ಫರ್ನಿಚರ್​​​​​​​​​​​ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಮೂರು ಗೋದಾಮುಗಳಿಗೆ ವ್ಯಾಪಿಸಿ ಹೊತ್ತಿ ಉರಿದಿವೆ.

ಘಟನೆಯಲ್ಲಿ ಯಾವುದೇ ಸಾವು - ನೋವಿನ ವರದಿಯಾಗಿಲ್ಲ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನು ಓದಿ:ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಬಾರದೇ ವ್ಯಕ್ತಿ ಸಾವು: ಸ್ಥಳೀಯರ ಆಕ್ರೋಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.