ಬಾಪಟ್ಲಾ(ಆಂಧ್ರಪ್ರದೇಶ): ತುರ್ತು ಸಂದರ್ಭಗಳಲ್ಲಿ ವಿಮಾನಗಳನ್ನು ಇಳಿಸಬೇಕಾದರೆ, ನಿಲ್ದಾಣಗಳನ್ನೇ ಹುಡುಕಿಕೊಂಡು ಹೋಗಬೇಕು. ಕೆಲವೊಮ್ಮೆ ಅನಾಹುತ ತಪ್ಪಿಸಲು ಎಲ್ಲೆಂದರಲ್ಲಿ ವಿಮಾನಗಳನ್ನು ಲ್ಯಾಂಡ್ ಮಾಡಿ ತೊಂದರೆಗೀಡಾಗಿ, ಅವಘಢಗಳು ಸಂಭವಿಸಿದ ಘಟನೆಗಳೂ ನಡೆದಿವೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಗತಿ ಶಕ್ತಿ ಮಿಷನ್ ಅಡಿಯಲ್ಲಿ ಹೆದ್ದಾರಿಗಳ ಮೇಲೆ ತುರ್ತು ರನ್‌ವೇ ನಿರ್ಮಿಸುತ್ತಿದೆ. ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ಹೆದ್ದಾರಿ ಮೇಲೆ ನಿರ್ಮಿಸಿರುವ ರನ್‌ವೇಯನ್ನು ಪರೀಕ್ಷೆ ನಡೆಸಲಾಗಿದೆ
ರಾಜ್ಯದಲ್ಲಿ ಎರಡು ಕಡೆ ತುರ್ತು ರನ್‌ವೇ ನಿರ್ಮಿಸಲಾಗಿದೆ. ಅದರಲ್ಲಿ ಬಾಪಟ್ಲಾ ಜಿಲ್ಲೆಯ ಕೋರಿಶಪದವಿನಿಂದ ರೇಣಿಂಗವರಂವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 5 ಕಿ.ಮೀ ಉದ್ದದ ತುರ್ತು ರನ್‌ವೇ ಕಾಮಗಾರಿ ಪೂರ್ಣಗೊಂಡಿದೆ. ಸಿಮೆಂಟ್ನಿಂದ ಈ ರಸ್ತೆಯನ್ನು ನಿರ್ಮಿಸಲಾಗಿದೆ. ವಿವಿಧ ಹಂತಗಳಲ್ಲಿ ರನ್‌ವೇಯನ್ನು ಪರಿಶೀಲಿಸಿದ ನಂತರವೇ ಲ್ಯಾಂಡಿಂಗ್‌ಗೆ ಅವಕಾಶ ನೀಡಲಾಗುತ್ತದೆ. ಇದನ್ನು ಮುಂದಿನ ವರ್ಷ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ.
ತುರ್ತು ರನ್‌ವೇ ನಿರ್ಮಾಣ ಪೂರ್ಣಗೊಂಡಿದೆ. ಆದ್ದರಿಂದ ಇಂದು ಇದರ ಪರೀಕ್ಷೆ ನಡೆಸಲಾಯಿತು. ರಸ್ತೆಯ ವಿಭಜಕದ ಮಧ್ಯೆ ರೇಡಿಯಂ ಬಣ್ಣ ಬಳಿಯಲಾಗಿದೆ. ವಿಮಾನದ ಸಂಕೇತಗಳಿಗಾಗಿ ಇಲ್ಲಿ ರಾಡಾರ್ ಸ್ಥಾಪಿಸಲಾಗಿದೆ. ಟ್ರಯಲ್ ರನ್‌ಗೆ ನಡೆಸುವ ವಿಮಾನಗಳು ರನ್‌ವೇಯಲ್ಲಿ 100 ಮೀಟರ್ ಎತ್ತರದಲ್ಲಿ ಹಾರಾಟ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಪಟ್ಲಾ ಜಿಲ್ಲಾಧಿಕಾರಿ ವಿಜಯಕೃಷ್ಣನ್ ಮತ್ತು ಎಸ್ಪಿ ವಕುಲ್ ಜಿಂದಾಲ್ ಅವರು, ಪರೀಕ್ಷೆಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಮುಂದಿನ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ರನ್‌ವೇ ಸಂಪೂರ್ಣವಾಗಿ ಸಜ್ಜಾಗಲಿದೆ. ಪ್ರಧಾನಮಂತ್ರಿ ಗತಿ ಶಕ್ತಿ ಮಿಷನ್ ಅಡಿಯಲ್ಲಿ ದೇಶದ 28 ಕಡೆ ಈ ರೀತಿಯ ರನ್‌ವೇಗಳ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ. 13 ಸ್ಥಳಗಳಲ್ಲಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ.
ಓದಿ: ನಿಷೇಧಿಸಿದ್ದರೂ ಪಿಎಫ್ಐ ಸಕ್ರಿಯ ಚಟುವಟಿಕೆ.. ಕೇರಳದ 56 ಕಡೆ ಎನ್ಐಎ ದಾಳಿ