ನವದೆಹಲಿ: ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹರಿದಾಡುತ್ತಿವೆ. ಮಸೂದ್ ಅಜರ್‌ನನ್ನು ಹತ್ಯೆ ಮಾಡಲಾಗಿದೆ ಎನ್ನಲಾದ ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೆಇಎಂ ಮುಖ್ಯಸ್ಥ ಮಸೂದ್ ಅಜರ್, 2001 ರ ಭಾರತದ ಸಂಸತ್ ದಾಳಿ ಪ್ರಕರಣ ಹಾಗೂ ದೇಶದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದಾನೆ.
ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿನ ಒಂದು ಪೋಸ್ಟ್ನಲ್ಲಿ, ಸ್ಫೋಟದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. "ಅಪರಿಚಿತ ವ್ಯಕ್ತಿಯಿಂದ ಹೊಸ ವರ್ಷದ ಉಡುಗೊರೆ. ಬಿಗ್ ಬ್ರೇಕಿಂಗ್ ನ್ಯೂಸ್. ದೃಢೀಕರಿಸದ ವರದಿಗಳ ಪ್ರಕಾರ, ಮೋಸ್ಟ್ ವಾಂಟೆಡ್ ಟೆರರಿಸ್ಟ್, ಅಪರಿಚಿತ ವ್ಯಕ್ತಿಯೊಬ್ಬ ಬೆಳಗ್ಗೆ 5 ಗಂಟೆಗೆ ಬಾಂಬ್ ಸ್ಫೋಟಿಸುವ ಮೂಲಕ ಕಂದಹಾರ್ ಹೈಜಾಕರ್ ಮಸೂದ್ ಅಜರ್‌ನನ್ನು ಹತ್ಯೆ ಮಾಡಿದ್ದಾನೆ" ಎಂದು ಬರೆಯಲಾಗಿದೆ. ಭಯೋತ್ಪಾದಕ ಮುಖ್ಯಸ್ಥನ ಸಾವಿನ ಬಗ್ಗೆ ದೃಢೀಕರಿಸದ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಂತರ್ಜಾಲದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿವೆ. ಪಾಕಿಸ್ತಾನಿ ಪತ್ರಿಕೆ ಡಾನ್ ಮತ್ತು ಇತರ ಸ್ಥಳೀಯ ಮಾಧ್ಯಮಗಳು ಸ್ಫೋಟದ ಬಗ್ಗೆ ಯಾವುದೇ ವರದಿ ಮಾಡಿಲ್ಲ.
ಪುಲ್ವಾಮಾ ದಾಳಿ ಪ್ರಕರಣದಲ್ಲಿ ಮಸೂದ್ ಅಜರ್‌ನ ಉಗ್ರ ಸಂಘಟನೆಯೂ ಭಾಗಿಯಾಗಿತ್ತು. ಪುಲ್ವಾಮಾ ದಾಳಿ ಪ್ರಕರಣದಲ್ಲಿ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 13,500 ಪುಟಗಳ ಚಾರ್ಜ್ ಶೀಟ್ ಸಿದ್ಧಪಡಿಸಿತ್ತು. ಅದರಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಹೆಸರು ಸೇರಿಸಲಾಗಿತ್ತು. ಫೆಬ್ರವರಿ 14, 2019 ರಂದು ಆತ್ಮಹತ್ಯೆ ಬಾಂಬರ್‌ನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆಸಲಾಗಿತ್ತು. ಇದರ ಪರಿಣಾಮವಾಗಿ 40 ಸಿಆರ್‌ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ್ದರು.
-
𝐍𝐞𝐰 𝐘𝐞𝐚𝐫 𝐆𝐢𝐟𝐭 𝐟𝐫𝐨𝐦 𝐔𝐧𝐤𝐧𝐨𝐰𝐧 𝐌𝐚𝐧🎉
— Oxomiya Jiyori 🇮🇳 (@SouleFacts) January 1, 2024 " class="align-text-top noRightClick twitterSection" data="
BIG BREAKING NEWS - As per unconfirmed reports, Most wanted terrorist, Kandhar hijacker Masood Azhar, has been kiIIIed in a bomb expIosion by 𝐔𝐍𝐊𝐍𝐎𝐖𝐍 𝐌𝐄𝐍 at 5 am. pic.twitter.com/NCsntm0XTP
">𝐍𝐞𝐰 𝐘𝐞𝐚𝐫 𝐆𝐢𝐟𝐭 𝐟𝐫𝐨𝐦 𝐔𝐧𝐤𝐧𝐨𝐰𝐧 𝐌𝐚𝐧🎉
— Oxomiya Jiyori 🇮🇳 (@SouleFacts) January 1, 2024
BIG BREAKING NEWS - As per unconfirmed reports, Most wanted terrorist, Kandhar hijacker Masood Azhar, has been kiIIIed in a bomb expIosion by 𝐔𝐍𝐊𝐍𝐎𝐖𝐍 𝐌𝐄𝐍 at 5 am. pic.twitter.com/NCsntm0XTP𝐍𝐞𝐰 𝐘𝐞𝐚𝐫 𝐆𝐢𝐟𝐭 𝐟𝐫𝐨𝐦 𝐔𝐧𝐤𝐧𝐨𝐰𝐧 𝐌𝐚𝐧🎉
— Oxomiya Jiyori 🇮🇳 (@SouleFacts) January 1, 2024
BIG BREAKING NEWS - As per unconfirmed reports, Most wanted terrorist, Kandhar hijacker Masood Azhar, has been kiIIIed in a bomb expIosion by 𝐔𝐍𝐊𝐍𝐎𝐖𝐍 𝐌𝐄𝐍 at 5 am. pic.twitter.com/NCsntm0XTP
ವಿಶ್ವಸಂಸ್ಥೆಯು ಕೂಡ ಮಸೂದ್ ಅಜರ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಘೋಷಣೆ ಮಾಡಿತ್ತು. ಆತನ ಬಂಧನಕ್ಕಾಗಿ ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಿತ್ತು. ಇದರ ಹಿನ್ನೆಲೆ ಇಸ್ಲಾಮಾಬಾದ್ ಮಸೂದ್ ಅಜರ್‌ನನ್ನು ಬಂಧಿಸುವಂತೆ ಅಫ್ಘಾನಿಸ್ತಾನಕ್ಕೆ ಪತ್ರ ಬರೆದಿತ್ತು.
ಇದನ್ನೂ ಓದಿ: ತಿರುಚ್ಚಿ: ಮನೆ ಮೇಲ್ಛಾವಣಿ ಕುಸಿದು ಇಬ್ಬರು ಬಾಲಕಿಯರು, ಇಬ್ಬರು ಮಹಿಳೆಯರು ಸಾವು