ಪೂರ್ವ ಗೋಧಾವರಿ (ಆಂಧ್ರ ಪ್ರದೇಶ): ನೈರುತ್ಯ ಸಮುದ್ರ ತೀರದಲ್ಲಿ ನಿವಾರ್ ಚಂಡಮಾರುತದ ಅಬ್ಬರ ಜೋರಾಗಿದೆ. ಅಲೆಗಳ ಉಬ್ಬರ ಇಳಿತ ಹೆಚ್ಚಾಗಿದ್ದು, ಕಡಲ್ಕೊರೆತ ಉಂಟಾಗಿದೆ.
ಇಲ್ಲಿನ ಪೂರ್ವ ಗೋಧಾವರಿಯ ಸಮುದ್ರ ತೀರದಲ್ಲಿ 7 ವರ್ಷದ ಹಿಂದೆ ನಿರ್ಮಿಸಲಾಗಿದ್ದ ದೇವಾಲಯವೊಂದು ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದೆ.
ಸಮುದ್ರದಿಂದ ಸುಮಾರು 100 ಮೀಟರ್ ದೂರದಲ್ಲಿದ್ದ ದೇವಾಲಯ ಇದೀಗ ಸಮುದ್ರದ ಅಲೆಗೆ ಸಿಲುಕಿ ಧರೆಗುರುಳಿದೆ. ಅಲ್ಲದೆ ತೀರದಲ್ಲಿದ್ದ ಮನೆಗಳು ಸಹ ಹಾನಿಗೊಳಗಾಗಿದ್ದು, ರಸ್ತೆವರೆಗೂ ಅಲೆಗಳು ಅಪ್ಪಳಿಸಿವೆ.
ಕಳೆದ ಮಳೆಗಾಲದಲ್ಲೂ ಪೂರ್ವ ಗೋಧಾವರಿಯ ಕಡಲ ತೀರದಲ್ಲಿ ಕಡಲ್ಕೊರೆತ ಉಂಟಾಗಿತ್ತು.