ETV Bharat / bharat

ಯುಎನ್ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ತೆಲುಗು ಮಹಿಳೆ - ವಿಶ್ವ ಸಾಗರ ದಿನಾಚರಣೆ

ಅಂತರ್ವೇದಿ ಕಡಲತೀರದಲ್ಲಿ ನಮ್ಮ ತಂಡವು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಅದರ ಸಂಸ್ಕರಣೆಗಾಗಿ ವಿಶೇಷ ಕೇಂದ್ರ ನಿರ್ಮಿಸಿದ್ದೇವೆ. ನಾನು ಈ ತ್ಯಾಜ್ಯ ನಿರ್ವಹಣಾ ಕಂಪನಿಯ ಸದಸ್ಯಳಾಗಿದ್ದೇನೆ ಮತ್ತು ಸಮುದ್ರ ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದೇನೆ ಎಂದು ಸಮ್ಮೇಳನದಲ್ಲಿ ಹೇಳಿದರು..

ತೆಲುಗು ಮಹಿಳೆ
ತೆಲುಗು ಮಹಿಳೆ
author img

By

Published : Jun 9, 2021, 8:44 PM IST

ಪೂರ್ವ ಗೋದಾವರಿ (ಆಂಧ್ರಪ್ರದೇಶ): ವಿಶ್ವ ಸಾಗರ ದಿನಾಚರಣೆಯಂದು ವಿಶ್ವಸಂಸ್ಥೆ ಸಂಸ್ಥೆ (ಯುಎನ್‌ಒ) ಮಂಗಳವಾರ ಆಯೋಜಿಸಿದ್ದ ಡಿಜಿಟಲ್ ಅಸೆಂಬ್ಲಿಯಲ್ಲಿ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ದೀಪಿಕಾ ತಾಡಿ ಅವರಿಗೆ ಭಾರತವನ್ನು ಪ್ರತಿನಿಧಿಸುವ ಅಪರೂಪದ ಗೌರವ ನೀಡಲಾಯಿತು.

ವಿಶ್ವದಾದ್ಯಂತದ ಪ್ರತಿನಿಧಿಗಳಲ್ಲಿ ದೀಪಿಕಾ ತಾಡಿ ಕೂಡ ಒಬ್ಬರಾಗಿ, ಓಷಿಯಾನಿಕ್ ಗ್ಲೋಬಲ್ ಸಹಭಾಗಿತ್ವದಲ್ಲಿ ಯುಎನ್ ಡಿವಿಷನ್ ಫಾರ್ ಓಷನ್ ಅಫೇರ್ಸ್ ಮತ್ತು ಲಾ ಆಫ್ ದಿ ಸೀ, ಕಾನೂನು ವ್ಯವಹಾರಗಳ ಕಚೇರಿ ಆಯೋಜಿಸಿದ್ದ ಆನ್‌ಲೈನ್ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಜಾಗತಿಕ ವೇದಿಕೆಯಲ್ಲಿ ಸಮುದ್ರ ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡಲು ತಮ್ಮ ಗ್ರಾಮವು ಒಟ್ಟಾಗಿ ಕೆಲಸ ಮಾಡುತ್ತಿರುವ ಕುರಿತು ದೀಪಿಕಾ ಹಂಚಿಕೊಂಡರು. ಜನರ ಸಾಮೂಹಿಕ ಸಹಕಾರದೊಂದಿಗೆ, ನಮ್ಮ ಪ್ರದೇಶವು ಪಾಲಿಥೀನ್ ತ್ಯಾಜ್ಯ ಮುಕ್ತವಾಗಿದೆ. ಪ್ಲಾಸ್ಟಿಕ್​ ಮುಕ್ತ ಮಾಡಲು ನನ್ನ ಪ್ರಯತ್ನಗಳನ್ನು ಹೀಗೆ ಮುಂದುವರಿಸುತ್ತೇನೆ ಎಂದು ಯುಎನ್‌ಒ ಸಮ್ಮೇಳನದಲ್ಲಿ ದೀಪಿಕಾ ಹೇಳಿದರು.

ಅಂತರ್ವೇದಿ ಕಡಲತೀರದಲ್ಲಿ ನಮ್ಮ ತಂಡವು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಅದರ ಸಂಸ್ಕರಣೆಗಾಗಿ ವಿಶೇಷ ಕೇಂದ್ರ ನಿರ್ಮಿಸಿದ್ದೇವೆ. ನಾನು ಈ ತ್ಯಾಜ್ಯ ನಿರ್ವಹಣಾ ಕಂಪನಿಯ ಸದಸ್ಯಳಾಗಿದ್ದೇನೆ ಮತ್ತು ಸಮುದ್ರ ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದೇನೆ ಎಂದು ಸಮ್ಮೇಳನದಲ್ಲಿ ಹೇಳಿದರು.

ವಿವಿಧ ದೇಶಗಳ ನಮೂದುಗಳನ್ನು ಪರಿಶೀಲಿಸಿದ ನಂತರ, ಯುಎನ್ ಜಾಗತಿಕ ಕಾರ್ಯಕ್ರಮಕ್ಕೆ ಹಾಜರಾಗಲು ಮತ್ತು ಭಾರತವನ್ನು ಪ್ರತಿನಿಧಿಸಲು ದೀಪಿಕಾ ಸೇರಿದಂತೆ ಒಟ್ಟು 30 ಜನರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಟ್ವೀಟ್​ ಮಾಡಿರುವ ಆಂಧ್ರಪ್ರದೇಶದ ಗವರ್ನರ್ ಬಿಸ್ವಾ ಭೂಸನ್ ಹರಿಚಂದನ್ ದೀಪಿಕಾ ಅವರನ್ನು ಅಭಿನಂದಿಸಿದರು. ಯುನಿಟೆಡ್ ನೇಷನ್ಸ್ ಸಂಸ್ಥೆ (@ ಯುಎನ್ಒ) ಆಯೋಜಿಸುತ್ತಿರುವ ವರ್ಚುವಲ್ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಕೆಗೆ ದೊರೆತ ಅವಕಾಶಕ್ಕಾಗಿ ಅಭಿನಂದಿಸುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.