ETV Bharat / bharat

ಕೇಂದ್ರದ ಸರ್ವಾಧಿಕಾರದ ವಿರುದ್ಧ ತೆಲಂಗಾಣ ಧ್ವನಿ ಎತ್ತಲಿದೆ: ಕೆ ಟಿ ರಾಮರಾವ್​ - ಕೇಂದ್ರದ ಸರ್ವಾಧಿಕಾರದ ವಿರುದ್ಧ ತೆಲಂಗಾಣ ಧ್ವನಿ ಎತ್ತಲಿದೆ ಎಂದ ಕೆ ಟಿ ರಾಮರಾವ್​

ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿ ಕುರಿತು ಮಾತನಾಡಿದ ತೆಲಂಗಾಣ ಸಚಿವ ಕೆಟಿಆರ್, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅವರ ಪಕ್ಷವು ಕನಿಷ್ಠ ಎಂಟು ಸರ್ಕಾರಗಳನ್ನು ಉರುಳಿಸಿದೆ ಎಂದು ಹರಿಹಾಯ್ದಿದ್ದಾರೆ.

ಮಹಾರಾಷ್ಟ್ರದಲ್ಲಿ ಸರ್ಕಾರ ಬೀಳಿಸಿದ ಬಿಜೆಪಿ
ಮಹಾರಾಷ್ಟ್ರದಲ್ಲಿ ಸರ್ಕಾರ ಬೀಳಿಸಿದ ಬಿಜೆಪಿ
author img

By

Published : Jun 27, 2022, 3:54 PM IST

ನವದೆಹಲಿ : ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಾಯಕ ಮತ್ತು ಸಚಿವ ಕೆ ಟಿ ರಾಮರಾವ್ ಅವರು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಬಂಧ ಕೇಂದ್ರದ ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತೋಣ ಎಂದು ಅವರು ಕರೆ ನೀಡಿದ್ದಾರೆ.

ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿ ಕುರಿತು ಮಾತನಾಡಿದ ಕೆಟಿಆರ್, ನರೇಂದ್ರ ಮೋದಿ ಪ್ರಧಾನಿಯಾದ ನಂತರ, ಅವರ ಪಕ್ಷವು ಕನಿಷ್ಠ ಎಂಟು ಸರ್ಕಾರಗಳನ್ನು ಉರುಳಿಸಿದೆ. ಜನಾದೇಶವನ್ನು ಸಹ ಪಡೆಯದೆ ಬಲವಂತವಾಗಿ ತಮ್ಮದೇ ಆದ ಸರ್ಕಾರವನ್ನು ರಚಿಸಿದೆ ಎಂದು ಹರಿಹಾಯ್ದರು.

  • That is why I am calling this constitutional machinery abuse. There is arbitrariness. Somebody will have to raise their voice to stop this arbitrariness. Maybe that voice will rise out of Telangana, who knows what will happen in the future: Telangana Minister KT Rama Rao pic.twitter.com/SVyAuzSChp

    — ANI (@ANI) June 27, 2022 " class="align-text-top noRightClick twitterSection" data=" ">

ಕರ್ನಾಟಕ, ಮಧ್ಯಪ್ರದೇಶ, ಗೋವಾ ರಾಜ್ಯಗಳಲ್ಲಿ ಪ್ರಜಾಪ್ರಭುತ್ವವನ್ನು ತುಳಿದಿದ್ದಾರೆ. ಅವರು ಜನರ ಆದೇಶದಿಂದ ರಚನೆಯಾದ ಸರ್ಕಾರಗಳನ್ನು ಕಿತ್ತೊಗೆದಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರವು ಪ್ರತಿ ಸಾಂವಿಧಾನಿಕ ಅಧಿಕಾರ ಮತ್ತು ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. ಅವರು ತಮಗೆ ಅನಿಸಿದ್ದನ್ನು ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅವರ ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಲಾಗುತ್ತದೆ. ತೆಲಂಗಾಣದಿಂದಲೇ ಧ್ವನಿ ಎತ್ತುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಖಜಾನೆಯಲ್ಲಿ ಕೊಳೆಯುತ್ತಿದೆ ಜಯಲಲಿತಾ ಅಕ್ರಮ ಆಸ್ತಿ: ಹರಾಜು‌ ಹಾಕಿ ಎಂದು ಸುಪ್ರೀಂಗೆ ಸಾಮಾಜಿಕ ಕಾರ್ಯಕರ್ತನ ಮನವಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.