ETV Bharat / bharat

17 ಭಾಷೆಗಳಲ್ಲಿ ಹಾಡುವ ಬಾಲಕಿ!.. ವಂಡರ್​ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲೆ - ತೆಲಂಗಾಣದ ಹಾಡುಗಾರ್ತಿ ಹುಡುಗಿ

ತೆಲಂಗಾಣದ 17 ವರ್ಷದ ಬಾಲಕಿಯೋರ್ವಳು ಇತ್ತೀಚೆಗೆ ಅಂತಾರಾಷ್ಟ್ರೀಯ ವಂಡರ್​ ಬುಕ್​ ಆಫ್​ ರೆಕಾರ್ಡ್ಸ್​​ನಲ್ಲಿ ಸ್ಥಾನ ಪಡೆದಿದ್ದಾಳೆ. ಇದಕ್ಕೆ ಕಾರಣ ಈಕೆ 17 ವಿವಿಧ ಭಾಷೆಗಳಲ್ಲಿ ಹಾಡ್ತಾಳಂತೆ.

telangana-girl
ಭಾಷೆಗಳಲ್ಲಿ ಹಾಡ್ತಾಳೆ
author img

By

Published : Apr 16, 2022, 11:00 AM IST

ಹೈದರಾಬಾದ್: ಹಾಡುವುದೆಂದರೆ ಸುಮ್ಮನಲ್ಲ. ಅದರಲ್ಲೂ 17 ಭಾಷೆಗಳಲ್ಲಿ ಹಾಡೋದೆಂದರೆ ನಂಬೋಕೆ ಆಗಲ್ಲ. ಇಲ್ಲೊಬ್ಬ 17 ವರ್ಷದ ಹುಡುಗಿ 17 ವಿವಿಧ ಭಾಷೆಗಳಲ್ಲಿ ಹಾಡುತ್ತಾಳಂತೆ. ಈ ಬಹುಮುಖ ಪ್ರತಿಭೆ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ವಂಡರ್​ ಬುಕ್​ ಆಫ್​ ರೆಕಾರ್ಡ್ಸ್​​ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.

ಈ ಬಾಲಕಿಯ ಹೆಸರು ಜಾಹ್ನವಿ. ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಸುಜಾತಾ ಮತ್ತು ಮುರಳಿ ದಂಪತಿಯ ಪುತ್ರಿ. ಜಾಹ್ನವಿ ತೆಲುಗು, ಇಂಗ್ಲಿಷ್, ಗುಜರಾತಿ, ಪಂಜಾಬಿ, ಮರಾಠಿ, ತಮಿಳು, ನೇಪಾಳಿ, ಕನ್ನಡ, ಒರಿಯಾ, ಉರ್ದು, ಹಿಂದಿ, ಬೆಂಗಾಲಿ, ಲಂಬಾಣಿ, ಮಲಯಾಳಂ ಮತ್ತು ದಕ್ಷಿಣ ಆಫ್ರಿಕಾದ ಭಾಷೆ ಸೇರಿದಂತೆ 17 ಭಾಷೆಗಳಲ್ಲಿ ಹಾಡಿದ್ದಾರೆ.

ಮಂಚೇರಿಯಲ್​ ಜಿಲ್ಲೆಯ ಖಾಸಗಿ ಜೂನಿಯರ್ ಕಾಲೇಜಿನಲ್ಲಿ ಪಿಯು ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿರುವ ಜಾಹ್ನವಿ ಮಕ್ಕಳ ದಿನಾಚರಣೆಯಂದು ಹೈದರಾಬಾದ್‌ನ ರವೀಂದ್ರ ಭಾರತಿಯಲ್ಲಿ ನಡೆದ ಬಾಲೋತ್ಸವದಲ್ಲಿ ನಡೆದ ಹಾಡಿನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದಾರೆ. ಇವರಿಗೆ ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಶಸ್ತಿ ವಿತರಿಸಿದ್ದಾರೆ.

ಅಲ್ಲದೇ ಸತತ ಮೂರು ವರ್ಷವೂ ಜಾಹ್ನವಿ ಬಾಲೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಗಾಯನದ ಜೊತೆಗೆ, ಅವರು ಮಿಮಿಕ್ರಿಯನ್ನೂ ಮಾಡುತ್ತಾರಂತೆ.

ನನಗೆ ಹಾಡುವುದರಲ್ಲಿ ಆಸಕ್ತಿ ಇದೆ. ನನ್ನ ರೋಲ್ ಮಾಡೆಲ್ ಅಂದರೆ ಪ್ರಸಿದ್ಧ ಗಾಯಕರಾದ ಎಸ್‌ಪಿ ಬಾಲಸುಬ್ರಮಣ್ಯಂ ಮತ್ತು ಚಿತ್ರಾ ಅವರು. ನಾನು ಇಬ್ಬರೂ ಗಾಯಕರಿಂದ ಸ್ಫೂರ್ತಿ ಪಡೆದಿದ್ದೇನೆ. ನಾನು ನಾಲ್ಕು ವರ್ಷದವಳಿದ್ದಾಗಿನಿಂದ ಹಾಡಲು ಮತ್ತು ನಟಿಸಲು ಪ್ರಾರಂಭಿಸಿದ್ದೇನೆ. 6ನೇ ವಯಸ್ಸಿನಲ್ಲಿ ಸಿನಿಮಾವೊಂದರಲ್ಲಿ ನಟಿಸಿದ್ದೇನೆ. ಒಟ್ಟು 17 ಭಾಷೆಗಳಲ್ಲಿ ಹಾಡಬಲ್ಲೆ ಎಂದು ಜಾಹ್ನವಿ ತಿಳಿಸಿದ್ದಾರೆ.

ಓದಿ: ಮಧುರೈ ಕಲ್ಲಜಗರ್ ಉತ್ಸವದಲ್ಲಿ ಕಾಲ್ತುಳಿತ.. ಇಬ್ಬರು ದುರ್ಮರಣ, 8 ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.