ಪಾಟ್ನಾ(ಬಿಹಾರ): ಬಿಹಾರ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಅಭೂತಪೂರ್ವ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಪಾಟ್ನಾದಲ್ಲಿರುವ ತಮ್ಮ ಸರ್ಕಾರಿ ಮನೆಯನ್ನೇ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಅವರು ಪರಿವರ್ತಿಸಿದ್ದಾರೆ.
ಇಲ್ಲಿ ರೋಗಿಗಳಿಗೆ ಉಚಿತ ಸೌಲಭ್ಯ ಲಭ್ಯವಿರುತ್ತದೆ. ಈ ಕೇಂದ್ರವನ್ನೂ ಸೇವೆಗಳಲ್ಲಿ ಸೇರಿಸಲು ತೇಜಸ್ವಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೋವಿಡ್ ಕೇರ್ಗೆ ಅಗತ್ಯವಾದ ಎಲ್ಲಾ ವೈದ್ಯಕೀಯ ಉಪಕರಣಗಳು, ಉಚಿತ ಆಹಾರ ಸೌಲಭ್ಯಗಳನ್ನು ನೀಡಲು ತೇಜಸ್ವಿ ತಮ್ಮ ವೈಯಕ್ತಿಕ ಹಣವನ್ನು ವಿನಿಯೋಗಿಸಿಕೊಂಡಿದ್ದಾರೆ
ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡಲು ಅನುಮತಿ ಕೋರಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಆರೋಗ್ಯ ವ್ಯವಸ್ಥೆ, ಪಾರುಗಾಣಿಕಾ ಮತ್ತು ಪರಿಹಾರ ಕಾರ್ಯಗಳನ್ನು ಸುಧಾರಿಸುವ ಹಾಗೂ ನಿರ್ವಹಿಸುವ ಉದ್ದೇಶದಿಂದ ನಾವು ವಿಶೇಷ ಅನುಮತಿಗಾಗಿ ಗೌರವಾನ್ವಿತ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇವೆ.
ಒಂದು ತಿಂಗಳ ಹಿಂದೆ ನಡೆದ ಸರ್ವಪಕ್ಷ ಸಭೆಯಲ್ಲಿ ನಾವು 30 ಪ್ರಮುಖ ಸಲಹೆಗಳನ್ನು ನೀಡಿದ್ದೇವೆ. ಆದರೆ, ಯಾವುದೂ ಕಾರ್ಯಗತಗೊಂಡಿಲ್ಲ. ಸರ್ಕಾರವು ವೈಫಲ್ಯಗಳಿಂದ ಕಲಿಯುತ್ತಿಲ್ಲ ಅಥವಾ ಪ್ರತಿಪಕ್ಷಗಳನ್ನು ಆಲಿಸುತ್ತಿಲ್ಲ ಎಂದು ಪತ್ರದಲ್ಲಿ ಕಿಡಿಕಾರಿದ್ದಾರೆ.