ರುದ್ರಪ್ರಯಾಗ್: ಸಮುದ್ರ ಮಟ್ಟಕ್ಕಿಂದ 11,700 ಅಡಿ ಎತ್ತರವಿರುವ ಕೇದಾರನಾಥ ಶಿವನ 11 ನೇ ಜ್ಯೋತಿರ್ಲಿಂಗ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಇದು ಪ್ರಮುಖವಾಗಿದೆ. ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಗಿದ್ದರಿಂದ, ತೀರ್ಥ ಪುರೋಹಿತ ಸಮಾಜವು ಕೇದಾರನಾಥ ಧಾಮದಲ್ಲಿ ಯೋಗ ಮಾಡುವ ಮೂಲಕ ಯೋಗದಿನವನ್ನು ಆಚರಿಸಿತು. ಕಳೆದ ಏಳೆಂಟು ದಿನಗಳಿಂದ ತಲೆಕೆಳಗಾಗಿ ನಡೆಯುತ್ತಿರುವ ಯಾತ್ರಾ ಅರ್ಚಕ ಸಂತೋಷ್ ತ್ರಿವೇದಿ ಇಡೀ ದೇಗುಲವನ್ನು ಪ್ರದಕ್ಷಿಣೆ ಹಾಕಿದ್ದಾರೆ.
11 ನೇ ಜ್ಯೋತಿರ್ಲಿಂಗ ಕೇದಾರನಾಥ ಧಾಮದಲ್ಲಿ ಯೋಗ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೇದಾರನಾಥ ಧಾಮದ ಯಾತ್ರಾ ಅರ್ಚಕರು ಅನೇಕ ರೀತಿಯ ಯೋಗಗಳನ್ನು ಮಾಡಿದರು.
ದೇವಸ್ಥಾನ ಆಡಳಿತ ಮಂಡಳಿಯನ್ನು ಸರ್ಕಾರ ಶೀಘ್ರದಲ್ಲೇ ವಿಸರ್ಜಿಸಬೇಕೆಂದು ನಡೆಯುತ್ತಿರುವ ಆಂದೋಲನವು ಇಂದೂ ಮುಂದುವರಿಯಿತು. ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳದಿದ್ದರೆ ಆಂದೋಲನ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ:ಪಾಕ್ನಲ್ಲಿದೆ 2 ಸಾವಿರ ವರ್ಷದ ಪುರಾತನ ಯೋಗ ವಿಶ್ವವಿದ್ಯಾಲಯ